ಮಹಿಳೆಯರು ಸ್ವ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳಿ :ವಿಜಯ ಕುಮಾರ

Ravi Talawar
ಮಹಿಳೆಯರು ಸ್ವ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳಿ :ವಿಜಯ ಕುಮಾರ
WhatsApp Group Join Now
Telegram Group Join Now
 ನೇಸರಗಿ. ಸಮೀಪದ ಹಣಬರಹಟ್ಟಿ ಗ್ರಾಮದಲ್ಲಿ  ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ  ಸಹಯೋಗದಲ್ಲಿ ಶ್ರೀ ಲಕ್ಷ್ಮಿ ದೇವಿ ಪೂಜೆ ಹಾಗೂ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು  ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಬುಧವಾರದಂದು  ನೆರವೇರಿತು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ  ಅಧ್ಯಕ್ಷರಾದ ಶ್ರೀಮತಿ ಸುನಂದ ಉಳವಿ   ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟಕರಾಗಿ ಬೈಲಹೊಂಗಲ ತಾಲೂಕಾ    ಯೋಜನಾಧಿಕಾರಿಗಳಾದ  ವಿಜಯ ಕುಮಾರ, ಗ್ರಾಮದ  ಗಣ್ಯರಾದ  ಈಶ್ವರ  ಅವರು, ಜ್ಞಾನ ವಿಕಾಸ ಸಮನ್ವೇದಿಕಾರಿ ಶ್ರೀಮತಿ ಶೈಲಾ ಜೆ   ವಲಯದ ಮೇಲ್ವಿಚಾರಕರಾದ ಪ್ರವೀಣ ದೊಡಮನಿ , ಕೇಂದ್ರದ ಅಧ್ಯಕ್ಷರಾದ  ಶಶಿಕಲಾ ದೇವಲಾಪುರ ಇವರೂಗಳ  ಸಮ್ಮುಖದಲ್ಲಿ ದೀಪ ಬೆಳಗುವ  ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
        ತಾಲೂಕಾ ಯೋಜನಾಧಿಕಾರಿಗಳಾದ  ವಿಜಯಕುಮಾರ ಮಾತನಾಡಿ  ಕ್ಷೇತ್ರದಿಂದ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ವೈಕರೆ ಮತ್ತು   ಜ್ಞಾನ ವಿಕಾಸ ಕಾರ್ಯಕ್ರಮದ ಹಿನ್ನೆಲೆ   ಮತ್ತು ಪ್ರಗತಿ ನಿಧಿ ಪಡೆಯುವ ಮೂಲಕ  ಮಹಿಳೆಯರಲ್ಲಿ ಸ್ವಾವಲಂಬನೆ  ಬದುಕು ಕಟ್ಟಿಕೊಳ್ಳಲು ಸ್ವ ಉದ್ಯೋಗ, ವಾರದ ಸಭೆ ಮತ್ತು ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿಗೆ ಬೆಳೆಸುವಲ್ಲಿ ತಾಯಂದಿರ ಕರ್ತವ್ಯಗಳ ವಾತ್ಸಲ್ಯ ಮಾಶಾಸನ, ಜನಮಂಗಳ ಕಾರ್ಯಕ್ರಮ ಜ್ಞಾನ ವಿಕಾಸ ಕಾರ್ಯಕ್ರಮದ  ಅಡಿಯಲ್ಲಿ ಆಗುವ   ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
        ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ     ರಂಗೋಲಿ ಸ್ಪರ್ಧೆಯ, ವಿವಿಧ ಆಟೋಟ  ಸ್ಪರ್ಧೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.ಲಕ್ಷ್ಮಿ ಪೂಜೆಯನ್ನು ಮಾಡಿ ಎಲ್ಲರಿಗೆ ಉಡಿತುಂಬಲಾಯಿತು. ಕಾರ್ಯಕ್ರಮದ ನಿರೂಪಣೆಯನ ತಾಲೂಕಿನ ಜ್ಞಾನ ವಿಕಾಸ ಸಮನ್ವೇದಿಕಾರಿ  ಶ್ರೀ ಮತಿ ಶೈಲಾ ಜೆ,  ಸ್ವಾಗತ  ಸೇವಾ ಪ್ರತಿನಿಧಿ ಗೀತಾ, ವಂದನೆಯನ್ನು  ಸೇವಾ ಪ್ರತಿನಿಧಿ ಆಶಾ  ಇವರ ನೆರವೇರಿಸಿದರು. ಈ ಸಂದರ್ಭ ಮರಿಯಮ್ಮ  ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article