ಹೈದರಾಬಾದ್: ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಮೊಮೊಸ್ ಪ್ರೀಯರಾಗಿದ್ದು ಅದರ ರುಚಿಯನ್ನು ಇಷ್ಟಪಡುತ್ತಾರೆ. ಇದೀಗ ಬಾಯಿ ಚಪ್ಪರಿಸಿ ಕೊಂಡು ತಿನ್ನುವ ಮೊಮೊಸ್ ಮಹಿಳೆಯ ಜೀವವನ್ನೇ ತೆಗೆದಿದೆ. ಇದಲ್ಲದೇ ಮೊಮೊಸ್ ಸವಿದ 20 ಅಧಿಕ ಜನರು ಆಸ್ವಸ್ಥಗೊಂಡಿದ್ದಾರೆ. ಈ ಘಟನೆ ಹೈದರಾಬಾದ್‌ನ ಬಂಜಾರ ಹಿಲ್ಸ್ ಬಳಿ ಫುಡ್ ಸ್ಟಾಲ್‌ನಲ್ಲಿ ನಡೆದಿದೆ.
ಮೊಮೊಸ್ ತಿಂದ ಒಂದು ಗಂಟೆಯ ನಂತರ ಮಹಿಳೆ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮಹಿಳೆ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.