ಎಪ್ರೀಲ್ ೨೨ ರಂದು ಜಮ್ಮು – ಕಾಶ್ಮೀರದ ಪೆಹಲಗಾಮನಲ್ಲಿ ಉಗ್ರರು ೨೬ ಹಿಂದೂಗಳನ್ನು ಗುರುತಿಸಿ ಗುಂಡಿಟ್ಟು ಕೊಂದಿರುವ ಪೈಶಾಚಿಕ ಕೃತ್ಯದ ಪ್ರತ್ಯುತ್ತರವಾಗಿ ದೇಶದ ನೆಚ್ಚಿನ ಜನಸೇವಕ ಪ್ರಧಾನಮಂತ್ರಿ ಭಾರತ ಮಾತೆಯ ವೀರ ಸೈನಿಕರಿಗೆ ನಿರ್ಭಂದ ರಹಿತ (ಫ್ರೀ ಹ್ಯಾಂಡ್) ಕಾರ್ಯಾಚರಣೆ ನಡೆಸಲು ಅನುಮತಿ ನೀಡಿದ್ದು ಅತ್ಯಂತ ಸಂತಸದ ವಿಷಯವಾಗಿದೆ.
ಪೆಹಲಗಾಮ ಘಟನೆಗೆ ಈಡೀ ವಿಶ್ವವೇ ಖಂಡಿಸಿದ್ದು ಪಾಪಿ ಪಾಕಿಸ್ಥಾನಕ್ಕೆ ಛೀಮಾರಿ ಹಾಕಿ ನಾವೇಲ್ಲರೂ ಭಾರತ ದೇಶದೊಂದಿಗಿದ್ದೇವೆ, ಇಂತಹ ದಾಳಿಗಳು ಮುಂದೆ ನಡೆಯದಿರಲಿ ಭಾರತದ ಪ್ರತಿ ಹೆಜ್ಜೆಗು ನಮ್ಮ ಬೆಂಬಲವಿದೆ ಎಂದು ಅನೇಕ ರಾಷ್ಟ್ರದ ನಾಯಕರು ತಿಳಿಸಿದ್ದಾರೆ. ನಗರದ ಹನುಮಾನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವದರ ಮೂಲಕ ವೀರ ಸೈನಿಕರಿಗೆ ದೇವರು ದೈರ್ಯ,ಸ್ತೈರ್ಯ ನೀಡಿ ಹಾರೈಸಲೆಂದು ಪಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಿರಮಲ್ಲಪ್ಪ ಹಂಚನಾಳ, ವಿನಾಯಕ ಪವಾರ, ವಿಸ್ವಾಸ ಪಾಟೀಲ, ಪ್ರಶಾಮತ ಗಾಯಕವಾಡ, ಶಂಕರ ಕಾಳೆ, ಗಣೇಶ ಶಿರಗಣ್ಣವರ, ರಮೇಶ ಆಲಬಾಳ, ಅಶೋಕ ಮಾಲೋಜಿ, ರಾಜು ಚಿಕನಾಳ, ಸಂತೋಷ ಮಾನೆ, ಯಮನೂರ ಮೂಲಂಗಿ, ರಾಯಬಾ ಜಾಧವ, ಮಹಾದೇವ ನ್ಯಾಮಗೌಡ, ವಿಜಯಲಕ್ಷ್ಮೀ ತುಂಗಳ, ಮಲ್ಲು ದಾನಗೌಡ, ವಿನಾಯಕ ಗವಳಿ, ನಾಗರಾಜ ತಂಗಡಗಿ, ರಾಘವೇಂದ್ರ ಮೂಲಂಗಿ, ಹೇಮಂತ ಜಾಧವ, ಪ್ರದೀಪ ಸಿಂಗಾರಿ, ಸುನೀಲ ಭೂವಿ, ಅಜಯ ಕಡಪಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು