ಹೌದು, ಹಿಂಗಾರು ಮಳೆಯ ಪರಿಣಾಮ ತರಕಾರಿಗಳ ಬೆಲೆ ಜಾಸ್ತಿಯಾಗಿದೆ. ಕಳೆದ ವಾರ ಟೊಮೆಟೊ ಬೆಲೆ 50 ರೂ ಇತ್ತು. ಈ ವಾರ 60 ರೂ ಆಗಿದೆ. ಇನ್ನು ಆಲೂಗಡ್ಡೆ ಕಳೆದ ವಾರ 30 ರೂ ಇತ್ತು. ಈ ವಾರ 45 ರೂ ಆಗಿದೆ. ಇನ್ನು ಈರುಳ್ಳಿಯಂತು ಮಾರುಕಟ್ಟೆಯಲ್ಲಿ ಕೆಜಿಗೆ 60 ರೂ ಇದ್ದರೆ, ತಳ್ಳುವ ಗಾಡಿಗಳಲ್ಲಿ ಹಾಗೂ ಮನೆಗಳ ಅಕ್ಕಪಕ್ಕದ ಅಂಗಡಿಗಳಲ್ಲಿ 70 ರಿಂದ 100 ರೂ. ರವರೆಗೂ ವ್ಯಾಪಾರವಾಗುತ್ತಿದೆಯಂತೆ.
ಇನ್ನು ಕ್ಯಾರೆಟ್, ಬೀನ್ಸ್, ನಾಟಿ ಬಟಾಣಿ, ಹಸಿರು, ಕ್ಯಾಪ್ಸಿಕಮ್, ಮೆಣಸಿನಗಾಯಿ ಎಲ್ಲವೂ 100 ರ ಗಡಿದಾಟಿವೆ. ಹಿಂಗಾರು ಮಳೆಯ ಪರಿಣಾಮ ತರಕಾರಿಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ದೀಪಾವಳಿ ಹಬ್ಬಕ್ಕೆ ಈ ಬೆಲೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತರಕಾರಿ ಹಿಂದಿನ ಬೆಲೆ ಇಂದಿನ ಬೆಲೆ
- ನಾಟಿ ಬೀನ್ಸ್: 120, 80 ರೂ.
- ಟೊಮೆಟೊ: 15, 40 ರೂ.
- ಬಿಳಿ ಬದನೆ: 60, 40 ರೂ.
- ಮೆಣಸಿನ ಕಾಯಿ: 40, 80 ರೂ.
- ನುಗ್ಗೆಕಾಯಿ ಕೆಜಿಗೆ: 100 ರಿಂದ 120, ಒಂದಕ್ಕೆ 20 ರೂ.
- ಊಟಿ ಕ್ಯಾರೆಟ್: 120, 40ರೂ.
- ನವಿಲುಕೋಸು: 40, 40ರೂ.
- ಮೂಲಂಗಿ: 40, 40 ರೂ.
- ಹೀರೇಕಾಯಿ: 40, 60 ರೂ.
- ಆಲೂಗಡ್ಡೆ: 40, 40 ರೂ.
- ದಪ್ಪ ಈರುಳ್ಳಿ: 60, 60ರೂ.
- ಸಣ್ಣ ಈರುಳ್ಳಿ: 40, 30 ರೂ.
- ಕ್ಯಾಪ್ಸಿಕಂ: 40, 40 ರೂ.
- ಹಾಗಲಕಾಯಿ: 40, 40 ರೂ.
- ಕೊತ್ತಂಬರಿ ಸೊಪ್ಪುಕಟ್: 30 ರೂ.
- ಶುಂಠಿ: 150, 150 ರೂ.
- ಬೆಳ್ಳುಳ್ಳಿ: 400, 400 ರೂ.
- ಪಾಲಕ್ ಕೆಜಿ: 40 ರೂ.
- ಪುದಿನ ಸೊಪ್ಪು ಕೆಜಿ: 92 ರೂ.
- ನಾಟಿ ಬಟಾಣಿ: 200, 200 ರೂ.
- ಫಾರಂ ಬಟಾಣಿ: 100, 100 ರೂ.