ಶ್ರೀ ಸಿದ್ದಾರೂಢ ಶ್ರೀಗಳ ಜ್ಯೋತಿಗೆ ಭವ್ಯ ಸ್ವಾಗತ

Ravi Talawar
ಶ್ರೀ ಸಿದ್ದಾರೂಢ ಶ್ರೀಗಳ ಜ್ಯೋತಿಗೆ ಭವ್ಯ ಸ್ವಾಗತ
WhatsApp Group Join Now
Telegram Group Join Now

ಘಟಪ್ರಭಾ.ಮಹಾತಪಸ್ವಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜನ್ಮ ಭೂಮಿಯಾದ ಬೀದರ ಜಿಲ್ಲೆಯ ಚಳಕಾಪೂರದಿಂದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಹೊರಟಿರುವ ಶ್ರೀ ಸಿದ್ಧಾರೂಢ ಜ್ಞಾನ ಜ್ಯೋತಿ ಯಾತ್ರೆಗೆ ಘಟಪ್ರಭಾ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಇಲ್ಲಿಂದ ದುಪದಾಳ ಶ್ರೀ ಚಿದಂಬರ ಆಶ್ರಮದಲ್ಲಿ ಪೂಜ್ಯ ಭೀಮಾನಂದ ಶ್ರೀ ಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಯೋತಿ ಯಾತ್ರೆ ಯ ನೇತೃತ್ವ ವಹಿಸಿದ ಶಾಮಾನಂದ ಪೂಜೇರಿ ವಕೀಲರು, ಕೊಣ್ಣೂರದ ಶ್ರೀ ಬಸವರಾಜ ಶರಣರು, ಬಿಜೆಪಿ ನಾಯಕ ಸುರೇಶ್ ಪಾಟೀಲ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ,ಕರವೇ ಅಧ್ಯಕ್ಷ ಕೆಂಪಣ್ಣ ಚೌಕಶಿ ಮುಂತಾದವರನ್ನು ದುಪದಾಳ ಮಠದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು, ಈ ಸಂದರ್ಭದಲ್ಲಿ ರಾಮಣ್ಣ ಹುಕ್ಕೇರಿ, ಸುಭಾಷ್ ದಡ್ಡೀಕರ, ಡಾ, ವಿಜಯ ಪಾಟೀಲ ಸಚಿವ ಖಡಬಡಿ, ಬಸವರಾಜ ಬೆಳ್ಳಣ್ಣವರ , ಕಲ್ಲಪ್ಪಾ ಕಾಳಗೆ, ಸುಭಾಸ ಗಾಯಕವಾಡ, ಮಲ್ಲಪ್ಪಾ ಮಹಾರಾಜ ಹುಕ್ಕೇರಿ, ರಾಜು ಕತ್ತಿ,ಕೆ ಡಿ ವಾಲಿಕಾರ, ಕೆ ಟಿ ಕರಿಗಾರ, ಮಾರುತಿ ಉಮರಾಣಿ, ಈಶ್ವರ ಚೌಗಲಾ ಯಲ್ಲಪ್ಪ ಅಟ್ಟಿಮಿಟ್ಟಿ ಸೇರಿದಂತೆ ಘಟಪ್ರಭಾ, ದುಪದಾಳದ ಶ್ರೀ ಸಿದ್ಧಾರೂಢ ಭಕ್ತರು ಹಾಜರಿದ್ದರು.

WhatsApp Group Join Now
Telegram Group Join Now
Share This Article