ಮಧ್ಯಂತರ ಚುನಾವಣೆಗೆ ನಾವು ರೆಡಿ,  ಡಿಕೆಶಿ ಸಿಎಂ ಆಗುವುದಿಲ್ಲ : ಬಿ ಶ್ರೀರಾಮುಲು 

Ravi Talawar
ಮಧ್ಯಂತರ ಚುನಾವಣೆಗೆ ನಾವು ರೆಡಿ,  ಡಿಕೆಶಿ ಸಿಎಂ ಆಗುವುದಿಲ್ಲ : ಬಿ ಶ್ರೀರಾಮುಲು 
WhatsApp Group Join Now
Telegram Group Join Now
ಬಳ್ಳಾರಿ ಜುಲೈ 09 : ರಾಜ್ಯದ ಸಿಎಂ ಸಿದ್ದರಾಮಯ್ಯ ಸೀಜಿನಲ್ ಮತ್ತು ಪ್ರಭುದ್ಧ ರಾಜಕಾರಣಿ  ಅವರು ಯಾವುದೇ ಕಾರಣಕ್ಕೂ ತಮಗೆ ಒಲಿದು ಬಂದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ, ಕಾರಣ  ಡಿಕೆ ಶಿವಕುಮಾರ್  ಮುಖ್ಯಮಂತ್ರಿ ಆಗೋದೇ ಇಲ್ಲ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ತಿಳಿಸಿದರು.
 ಅವರು ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಕಳೆದ 30 ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ , ಆದರೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿಲ್ಲ ಕೇವಲ ಗ್ಯಾರಂಟಿ ಗ್ಯಾರಂಟಿ ಎಂದು ತಮ್ಮ ಸರ್ಕಾರವನ್ನೇ ಗ್ಯಾರಂಟಿ ಇಲ್ಲ ಎಂಬಂತೆ ಮಾಡಿಕೊಂಡಿದ್ದಾರೆ, ಡಿಕೆಶಿ ಸಿಎಂ ಕುರ್ಚಿಗಾಗಿ ಮತ್ತು ಸಿಎಂ ಸಿದ್ದರಾಮಯ್ಯ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಹೆಣೆಗಾಡುತ್ತಿದ್ದಾರೆ ಇವರಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು  ಪ್ರಶಿಸಿದರು.
 ರಾಜ್ಯ ಉಸ್ತುವಾರಿ ಸೃಜವಾಲ ಅವರು ಕಳೆದ ವಾರ ಎರಡು ಬಾರಿ ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ ಸಿಎಂ ಬದಲಾವಣೆಯ ಕೂಗು ಜೋರಾಗುತ್ತಿದ್ದಂತೆ ರಾಜ್ಯ ರಾಜಕಾರಣಕ್ಕೆ ತೇಪೆ ಹಚ್ಚಿ ಹೋಗಿದ್ದಾರೆ ಡಿಕೆಶಿ ಸಿಎಂ ಕುರ್ಚಿ ಗಾಗಿ ಒದ್ದಾಡುತ್ತಿದ್ದರೆ, ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಟ ನಡೆಸಿ ಉಳಿಸಿಕೊಳ್ಳುವ  ಅನಿವಾರ್ತೆಯಲ್ಲಿ ಇದ್ದಾರೆ, ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಬಹುದು ಎಂದು ತಿಳಿಸಿದ ರಾಮುಲು ಇದು ನನ್ನ ಭವಿಷ್ಯವಲ್ಲ ಇದು ಕಟು ವಾಸ್ತವ ಎಂದರು.
 ದಲಿತ ಸಿಎಂ ಮುನ್ನೆಲಗೆ ತಂದು ಡಿಕೆ ಶಿವಕುಮಾರ್ ಅವರನ್ನು ಹಿಂದಿಕ್ಕುವ ಉನ್ನಾರ ನಡೆದಿದೆ, ದಲಿತ ಸಿಎಂ ಆಗಲು ನಮ್ಮ ಯಾವುದೇ ಅಭ್ಯಂತರವಿಲ್ಲ ಆದರೆ ಕುರ್ಚಿಯ ಕಚ್ಚಾಟದಲ್ಲಿ ರಾಜ್ಯದ ಜನತೆಗೆ ಅನ್ಯಾಯ ಮಾಡಬಾರದು, ತಮ್ಮ ಸ್ವ ಪಕ್ಷಿಯ ಶಾಸಕರೇ ಸರ್ಕಾರದ ವಿರುದ್ಧ ಅನುದಾನಕ್ಕಾಗಿ ಪದೇಪದೇ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ, ಕೆಲವು ಶಾಸಕರಂತೂ ಗ್ಯಾರಂಟಿಗಳನ್ನು ನಿಲ್ಲಿಸಿಯಾದರೂ ನಮಗೆ ಅನುದಾನ ಕೊಡಿ ಎಂದು ಗೋಗಿರೆಯುತ್ತಿದ್ದಾರೆ ರಾಜ್ಯಕ್ಕೆ ಈ ದುರ್ಗತಿ ಬರಬಾರದಿತ್ತು ಎಂದು ಖೇದವನ್ನು ವ್ಯಕ್ತಪಡಿಸಿದರು.
 ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನು ನೀಡಲು ಸರ್ಕಾರ ದಾನಿಗಳನ್ನು ಹುಡುಕುತ್ತಿದೆ, ಅಲ್ಲದೆ ಅಜೀಮ್ ಪ್ರೇಮ್ ಜಿ ಕೊಟ್ಟ ಮೊಟ್ಟೆಯನ್ನು ಆರು ದಿನ ನೀಡದೆ ಕೇವಲ ಮೂರೇ ದಿನ ನೀಡುತ್ತಿದ್ದಾರೆ ದಾನಿಗಳು ನೀಡಿದ ಹಣವನ್ನು ಸಹ ನುಂಗಿ ನೀರು ಕುಡಿಯುತ್ತಿದ್ದಾರೆ, ಮತ್ತು ರಾಜ್ಯದ 10 ಮಹಾನಗರ ಪಾಲಿಕೆ ನೌಕರರಿಗೆ ಸಂಬಳ ನೀಡಲು ಸಹ ಸರ್ಕಾರದಲ್ಲಿ ಹಣವಿಲ್ಲ ಇದರಿಂದಾಗಿ ಪಾಲಿಕೆ ನೌಕರರು ಕಳೆದ ಎರಡು ದಿನಗಳಿಂದ ಮುಷ್ಕರವನ್ನು ಹೂಡಿದ್ದಾರೆ ಸರ್ಕಾರದ ಎಲ್ಲಾ ಇಲಾಖೆಗಳು ದಿವಾಳಿಯಾಗಿವೆ, ಸರ್ಕಾರ ನಡೆಸಲು ಸಾಧ್ಯವಾಗದಿದ್ದಲ್ಲಿ ಕೂಡಲೇ ರಾಜೀನಾಮೆ ಕೊಡಿ ನಾವು ಚುನಾವಣೆಗೆ ರೆಡಿ ಎಂದರು.
 ಈ ಪತ್ರಿಕಾಗೋಷ್ಠಿಯಲ್ಲಿ ವೀರಶೇಖರ ರೆಡ್ಡಿ, ಓಬಳೇಶ್,  ವೇಮಣ್ಣ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಕೆ ಹನುಮಂತಪ್ಪ, ಗುಡಿಗಂಟೆ ಹನುಮಂತಪ್ಪ, ವೆಂಕಟರೆಡ್ಡಿ ನಾರಾಯಣಸ್ವಾಮಿ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article