ಇಸ್ಲಾಮಾಬಾದ್, ಆಗಸ್ಟ್ 05: ‘ನಾವು ಪೂರ್ವದಿಂದ ಭಾರತದ ಮೇಲೆ ದಾಳಿ ಮಾಡುತ್ತೇವೆ’ ಎಂದು ಹೇಳುವ ಮೂಲಕ ಪಾಕ್ ಸೇನಾ ವಕ್ತಾರ ಅಹ್ಮದ್ ಷರೀಫ್ ಚೌಧರಿ, ಆಸಿಮ್ ಮುನೀರ್ ಮನಸ್ಸಿನಲ್ಲಿರುವ ಅಪಾಯಕಾರಿ ಉದ್ದೇಶಗಳನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ಥಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮಾತನಾಡುವುದನ್ನು ಕಂಡರೆ ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ಗಿಂತ ಇವರಿಗೆ ಹೆಚ್ಚಿನ ಅಧಿಕಾರ ಇದ್ದಂತಿದೆ.
ಹಾಗೆಯೇ ಮತ್ತೊಂದು ಅಚ್ಚರಿಯ ವಿಚಾರಚೇನೆಂದರೆ ಪಾಕಿಸ್ತಾನದ ಸೇನಾ ವಕ್ತಾರರು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರ ಅಪಾಯಕಾರಿ ಉದ್ದೇಶಗಳನ್ನು ಬಹಿರಂಗಪಡಿಸಿದ್ದಾರೆ. ಭವಿಷ್ಯದಲ್ಲಿ ಮಿಲಿಟರಿ ಘರ್ಷಣೆಗಳು ಉಂಟಾದರೆ ಫೀಲ್ಡ್ ಮಾರ್ಷಲ್ ಭಾರತದೊಳಗೆ ನುಗ್ಗಿ ದಾಳಿ ಮಾಡಲು ಬಯಸುತ್ತಾರೆ ಎಂದು ಅಹ್ಮದ್ ಷರೀಫ್ ತಿಳಿಸಿದ್ದಾರೆ.