ಗೃಹಿಣಿಯರ ಪ್ರತಿಭೆ ಅನಾವರಣಕ್ಕೆ ವೇದಿಕೆಗಳು ಬೇಕು: ವಿಶ್ವೇಶ್ವರಿ ಹಿರೇಮಠ

Ravi Talawar
ಗೃಹಿಣಿಯರ ಪ್ರತಿಭೆ ಅನಾವರಣಕ್ಕೆ ವೇದಿಕೆಗಳು ಬೇಕು: ವಿಶ್ವೇಶ್ವರಿ ಹಿರೇಮಠ
WhatsApp Group Join Now
Telegram Group Join Now

ಬೆಳಗಾವಿ:   ಮಹಿಳೆಯರಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮದುವೆಗೆ ಮುಂಚಿನ ಉತ್ಸಾಹ ಮತ್ತು ತೊಡಗಿಕೊಳ್ಳುವಿಕೆ ಮದುವೆಯ ನಂತರ ಇರದಿರುವುದು ಬೇಸರದ ಸಂಗತಿ,  ಕಲೆ ಸಂಸ್ಕೃತಿಗಳು ಬದುಕಿನ ಭಾಗಗಳೆ ಆಗಿವೆ ಅವುಗಳಲ್ಲಿ ತೊಡಗಿಕೊಳ್ಳುವುದರಿಂದ ಸಿಗುವ ಆನಂದ ಮತ್ತೆಲ್ಲೂ ಸಿಗುವುದಿಲ್ಲ ಹಿಂಜರಿಕೆ ಬಿಟ್ಟು.  ಗೃಹಿಣಿಯರು ತಮ್ಮಲ್ಲಿರುವ ಪ್ರತಿಭೆಯನ್ನು ವೇದಿಕೆಗಳಲ್ಲಿ ಅನಾವರಣಗೊಳಿಸಬೇಕು. ಇಂದಿನ ಈ ತಾಂತ್ರಿಕ ದಿನಗಳಲ್ಲಿ ಬಹುಮುಖ್ಯ ಎಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾಮಂಟಪದ ಸಂಚಾಲಕಿ   ವಿಶ್ವೇಶ್ವರಿ ಹಿರೇಮಠ ಅಭಿಪ್ರಾಯ ಪಟ್ಟರು.

ಇಲ್ಲಿನ ಸಾಹಿತ್ಯ ಭವನದಲ್ಲಿ ಶುಕ್ರವಾರ ಬೆಳ್ಳಿ ಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಧಾರವಾಡದ ವಿದ್ಯಾವರ್ಧಕ ಸಂಘದ ಕಲಾಮಂಟಪದ ಸಹಯೋಗದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು.

ಮದುವೆ ಎಂಬುದು ಮಹಿಳೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮುಕ್ತಾಯವಲ್ಲ ಅದು ಮತ್ತೊಂದು ಲೋಕದ ಆರಂಭ ಮದುವೆಯ ನಂತರವೂ ಮಹಿಳೆಯರು ತಮ್ಮಲ್ಲಿರುವ ಹವ್ಯಾಸಗಳನ್ನು ಮುಂದುವರೆಸಬೇಕು. ಅದು,  ತಮ್ಮ ಮಕ್ಕಳಿಗೂ ಪ್ರೇರಣೆಯಾಗುತ್ತದೆ.  ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು ಬೆಳಗಾವಿಯ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ವಿಶ್ರಾಂತ ಇಂಗ್ಲಿಷ್ ಉಪನ್ಯಾಸಕಿ ಸಾಹಿತಿ ಡಾ.ಗುರುದೇವಿ ಹುಲೆಪ್ಪ ನವರ ಮಠ ಅವರು ಮಾತನಾಡಿ,  ಸಂಗೀತ , ಚಿತ್ರ ಕಲೆ, ನೃತ್ಯ, ಶಿಲ್ಪ , ಜನಪದ ರಂಗ ಭೂಮಿಗೆ  ಉತ್ತರ ಕರ್ನಾಟಕದ ಅನೇಕ ಕಲಾವಿದರು ಅಪಾರ ಕೊಡುಗೆ ನೀಡಿ, ನಾಡಿನ ಸಂಸ್ಕೃತಿ ಯ ವೈವಿಧ್ಯತೆ ಮತ್ತು ಶ್ರೀಮಂತಿಕೆಗೆ ಕಾರಣರಾಗಿದ್ದಾರೆ. ಕಲೆ ಬೆಳೆಸಿಕೊಳ್ಳಿಸಿ, ಕಲೆಗಾರರನ್ನು ಪ್ರೋತ್ಸಾಹಿಸಿ ಎಂದು   ಉತ್ತರಕರ್ನಾಟಕದ ಕಲಾವಿರದನ್ನು ಗುಣಗಾಣ ಮಾಡಿದರು.
ಭೀಮಸೇನ್ ಜೋಶಿ,ಕುಮಾರಗಂಧರ್ವರು, ಬಸವರಾಜ್ ರಾಜಗುರು, ಕಡ್ಲಾಸ್ಕರ್ ಬುವ್ವಾ, ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಆ ನಿಟ್ಟಿನಲ್ಲಿ ಇತ್ತೀಚಿನ ಗಮಕ ವಿದೂಷಿ ಭಾರತಿ ಭಟ್, ರೇಖಾ ಹೆಗಡೆ, ವಿಶ್ವ ದಾಖಲೆ ಪುರಸ್ಕೃತ ಬೆಳ್ಳಿಚುಕ್ಕಿ ಸಂಸ್ಥೆ ಕೂಡಾ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ  ಶಂಕರ ಹಲಗತ್ತಿ ಅವರು ಮಾತನಾಡಿ, ಮಹಿಳೆಯರು ನಮ್ಮ ನೆಲದ ಸಂಸ್ಕ್ರತಿಯ ಹರಿಕಾರರು. ಅವರು ಗ್ರಾಮೀಣ ಕಲೆ ಗಳನ್ನು, ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿ ಬೆಳೆಸಬೇಕು ಅವುಗಳ ಪರಿಚಯವನ್ನು ಮುಂದಿನ ಪೀಳಿಗೆಗೆ ಮಾಡಿಸಬೇಕು ಎಂದರು.

ಹಳ್ಳಿಗರು ಬದುಕನ್ನು  ಹಾಡು ಸಂಗೀತ ನೃತ್ಯಗಳ ಮೂಲಕ ಸಂಭ್ರಮಿಸುವುದನ್ನು ನೋಡಬೇಕು ಅಂದಾಗ ಜನಪದದ ಸತ್ಯದರ್ಶನವಾಗುತ್ತದೆ ಎಂದ ಅವರು, ಕರ್ನಾಟಕ ವಿದ್ಯಾವರ್ಧಕ ಸಂಘ135 ವರ್ಷಗಳನ್ನು ಪೂರೈಸಿದ್ದು ಹಿರಿಯರ ಆಶಯದಂತೆ ಕನ್ನಡದ ನಾಡು ನುಡಿ ನೆಲ ಜಲ ಕಲೆ ಸಾಹಿತ್ಯ ಸಂಸ್ಕೃತಿಗಳ ರಕ್ಷಣೆಗೆ ಸದಾ ಬದ್ದವಾಗಿದ್ದು ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತ ಬಂದಿದೆ ಮುಂದಿನ ದಿನಗಳಲ್ಲಿ ಸಂಘ  ಬೆಳಗಾವಿಯಂತಹ ಗಡಿ ಭಾಗದಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಲು ಚಿಂತಿಸುತ್ತಿದೆ ಎಂದರು.

ಅಧ್ಯಕ್ಷೆ ಡಾ ರಾಜೇಶ್ವರಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡು-ನುಡಿ ಜಾನಪದ ಸಂಸ್ಕೃತಿಯನ್ನು  ಗಡಿನಾಡಿನಲ್ಲಿ ಬೆಳೆಸುವುದೇ ನಮ್ಮ ಧ್ಯೇಯ, ಮತ್ತು ಉದ್ದೇಶವಾಗಿದೆ ಎಂದು ಹೇಳಿದರು.

ಈ ವೇಳೆ  ವಾಗ್ದೇವಿ ಸಂಗೀತ ಶಾಲೆ ಮಹಾಲಕ್ಷ್ಮಿ ಮಹಿಳಾ ಮಂಡಲ ಮತ್ತು ಅಂಜನಾದೇವಿ ಮಹಿಳಾ ಮಂಡಲಗಳ ಸದಸ್ಯೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ    ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ. ಕಸಾಪದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ,  ರಂಗಕರ್ಮಿ  ಶಿರೀಷ ಜೋಶಿ,   ಸಂಘದ ಖಜಾಂಚಿ ಶಿವಾನಂದ ಭಾವಿಕಟ್ಟಿ, ಲೇಖಕಿಯರ ಜಿಲ್ಲಾ ಅಧ್ಯಕ್ಷೆ ಸುಮಾ ಕಿತ್ತೂರು,  ಅಶೋಕ ಮಳಗಲಿ, ಅರವಿಂದ ಪಾಟೀಲ,  ಶ್ರೀರಂಗ ಜೋಶಿ,  ವಿದೂಷಿ ಭಾರತಿ  ಭಟ್ಟ,
ರೋಹಿಣಿ ಗಂಗಾಧರಯ್ಯ ಪೋಷಕರಾದ ಬಸವರಾಜ ಹಿರೇಮಠ, ಕಿರಣ ಗಣಾಚಾರಿ ಮೂಡಲ ಮನೆ ಧಾರಾವಾಹಿಯ ಕಿರುತೆರೆ ನಟಿ ವಿಷಯಾ ಜೇವೂರ ಆಶಾ ಸೈಯ್ಯದ ಮೊದಲಾದವರು ಇತರರು ಇದ್ದರು. ಮಂಜುಳಾ ಪಟಗುಂದಿ ಸ್ವಾಗತಿಸಿದರು.  ಸಾಹಿತಿ ಅನ್ನಪೂರ್ಣ ಹಿರೇಮಠ  ನಿರೂಪಿಸಿದರು. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು.

WhatsApp Group Join Now
Telegram Group Join Now
Share This Article