ನಾವು ಎಂದಿಗೂ ಹಿಂಸಾಚಾರಕ್ಕೆ ಇಳಿಯಬಾರದು: ಜೋ ಬೈಡನ್

Ravi Talawar
ನಾವು ಎಂದಿಗೂ ಹಿಂಸಾಚಾರಕ್ಕೆ ಇಳಿಯಬಾರದು: ಜೋ ಬೈಡನ್
WhatsApp Group Join Now
Telegram Group Join Now

ವಾಷಿಂಗ್ಟನ್: ಮೊನ್ನೆ ಶನಿವಾರ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಪ್ರಯತ್ನದ ನಂತರ ಅಮರಿಕ ರಾಜಕೀಯ ಹಿಂಸಾಚಾರದ ಅಪಾಯಗಳ ಬಗ್ಗೆ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದರು, ಪರಿಸ್ಥಿತಿ ತಣ್ಣಗಾಗಬೇಕಾದ ಸಮಯವಿದು ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ಘಟನೆಯ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಬೈಡನ್, ರಾಜಕೀಯ ಭಾವೋದ್ರೇಕಗಳು ಹೆಚ್ಚಾಗಬಹುದು ಆದರೆ ನಾವು ಎಂದಿಗೂ ಹಿಂಸಾಚಾರಕ್ಕೆ ಇಳಿಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದು ಚುನಾವಣಾ ವರ್ಷವಾಗಿರುವುದರಿಂದ ಜನರು ಭಾವೋದ್ರೇಕಕ್ಕೆ ಒಳಗಾಗಬಹುದು ಎಂದು ಹೇಳಿದ್ದಾರೆ. ರಿಪಬ್ಲಿಕನ್ನರು ವಿಭಿನ್ನ ನೀತಿ ದೃಷ್ಟಿಕೋನಗಳನ್ನು ನೀಡುತ್ತಾರೆ, ಆದರೆ ಅಮೆರಿಕನ್ನರು ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಬೇಕೆಂದು ಮನವಿ ಮಾಡಿದರು.

ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ ಮತ್ತು ವಿನಾಯಿತಿ ಇಲ್ಲ. ಈ ಹಿಂಸಾಚಾರವನ್ನು ಸಾಮಾನ್ಯ ವಿಷಯವಲ್ಲ ಎಂದರು. ಮುಂದಿನ ನವೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ನಾವೆಲ್ಲರೂ ಒಂದು ರಾಷ್ಟ್ರವಾಗಿ ನಿಲ್ಲಬೇಕು ಎಂದು ಕರೆ ನೀಡಿದರು. ಸಂಪೂರ್ಣ ಮತ್ತು ತ್ವರಿತ ಪರಿಶೀಲನೆಗೆ ಭರವಸೆ ನೀಡಿದರು, ಸಾರ್ವಜನಿಕ ಊಹಾಪೋಹದ ಅಗತ್ಯವಿಲ್ಲ ಎಂದರು. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಶನಿವಾರ ರಾತ್ರಿ ಟ್ರಂಪ್ ರ್ಯಾಲಿಯಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟ ಮಾಜಿ ಅಗ್ನಿಶಾಮಕ ಮುಖ್ಯಸ್ಥ ಕೋರಿ ಕಾಂಪರೇಟೋರ್ ಅವರ ಕುಟುಂಬಕ್ಕಾಗಿ ನಾನು ಮತ್ತು ಜಿಲ್ ಬೈಡನ್ ಪ್ರಾರ್ಥಿಸುವುದಾಗಿ ಹೇಳಿದರು.

WhatsApp Group Join Now
Telegram Group Join Now
Share This Article