ಬೆಳಗಾವಿ. ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಗೆ ಅ. 19 ರಂದು ಚುನಾವಣೆ ಪ್ರಯುಕ್ತ ನಮ್ಮ ಸಹೋದರ ನಾನಾಸಾಹೇಬ ಪಾಟೀಲ ಅವರನ್ನು ಕಿತ್ತೂರು ತಾಲೂಕಿನ ಸಹಕಾರಿ ಸಂಘಗಳ ವತಿಯಿಂದ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ನಮ್ಮ ಕುಟುಂಬ ಮೊದಲಿನಿಂದಲೂ ಸಹಕಾರಿ ರಂಘದಲ್ಲಿ ಕಾರ್ಯ ಮಾಡಿದ್ದು, ಸಹೋದರ ನಾನಾಸಾಹೇಬ ಪಾಟೀಲ ಪಿಕೆಪಿಎಸ್ ಅಧ್ಯಕ್ಷರಾಗಿ, ಅನೇಕ ಸಂಘಗಳ ಸ್ಥಾಪನೆ, ಬೆಂಬಲಿಗರ ಆಯ್ಕೆಯಲ್ಲಿ ಕೆಲಸ ಮಾಡಿದ್ದು ನಮ್ಮನ್ನು ಸಹಕಾರಿ ಸಂಘದ ಪ್ರತಿನಿಧಿಗಳು ಬೆಂಬಲಿಸಲಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ವಿರೋಧಿಗಳ ಬಗ್ಗೆ ಹೇಳುವದು ಬೇಡ, ಬಾಲಚಂದ್ರ ಜಾರಕಿಹೊಳಿ ಬಣದ ಬಗ್ಗೆ ಮಾತು ಬೇಡ ನಮ್ಮ ಆಯ್ಕೆ ಗೆಲುವಿನ ಕಡೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಪ್ರಧಾನ ಕಚೇರಿಯಲ್ಲಿ ಸಹೋದರ ನಾನಾಸಾಹೇಬ ಪಾಟೀಲ ಅವರು ಕಿತ್ತೂರು ತಾಲೂಕ ವತಿಯಿಂದ ಡಿಸಿಸಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ ಪ್ರತೇಕ ಕಿತ್ತೂರು ತಾಲೂಕ ರಚನೆ ಆದ ಮೇಲೆ ನಾವು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡ್ತಾ ಇದ್ದೇವೆ, ಬಾಲಚಂದ್ರ ಜಾರಕಿಹೊಳಿ ಬಣ ವಿರುದ್ಧ ಪ್ರಚಾರಕ್ಕೆ ಮಾಜಿ ಸಂಸದ ರಮೇಶ ಕತ್ತಿ ನಮಗೆ ಬೇಕಿಲ್ಲ. 60% ಜನ ಜಮೀನು ಇಲ್ಲದವರು ಇದ್ದಾರೆ ಅವರೇನು ಮಾಡಬೇಕು, ಸರ್ಕಾರದ ಹಣ ರೈತರಿಗೆ ಬಡ್ಡಿ ರಹಿತವಾಗಿ ರೈತರಿಗೆ ತಲುಪಿಸಬೇಕು, ಪಿಕೆಪಿಎಸ್ ಗಳಲ್ಲಿ ಪರದರ್ಶಕತೆ ಇರಬೇಕು ಎಂದರು.
ಈ ಸಂದರ್ಭದಲ್ಲಿ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಮುಖಂಡರು, ರೈತ ಮುಖಂಡರು, ಬೆಂಬಲಿಗರು ಇದ್ದರು.


