ವಿಜಯಪುರ: “ಪಂಚಮಸಾಲಿಯವರು ಮೀಸಲಾತಿಗಾಗಿ ಹೋರಾಟ ಮಾಡಲು ನಮ್ಮದು ತಕರಾರಿಲ್ಲ. ಆದರೆ ಹೋರಾಟ ಸಂವಿಧಾನಿಕವಾಗಿ ಇರಬೇಕು. ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ” ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “2ಡಿ ಮೀಸಲಾತಿ ಕೊಟ್ಟು ಬಳಿಕ ಹೈಕೋರ್ಟ್ಗೆ ಅಫಿಡವಿಟ್ ಹಾಕಿದವರು ಯಾರು? 2023ರಲ್ಲಿ ಅಫಿಡವಿಟ್ ಹಾಕಲಾಗಿದೆ. ಆಗ ಇದೇ ಸ್ವಾಮೀಜಿ ಇದ್ದರು. 3ಬಿಯಲ್ಲಿ ಪಂಚಮಸಾಲಿಗಳಿದ್ದಾರೆ. ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿ ಇವೆ ಗೊತ್ತಾ? ಅದರಲ್ಲಿ ನಾಲ್ಕು ಕಟೆಗೆರಿ ಇವೆ. 1ಎ ನಲ್ಲಿ ಮೋಸ್ಟ್ ಬ್ಯಾಕ್ವರ್ಡ್, 2ಎನಲ್ಲಿ ಕೋರ್ ಬ್ಯಾಕ್ವರ್ಡ್, 3ಎನಲ್ಲಿ ಒಕ್ಲಲಿಗರು, 3ಬಿನಲ್ಲಿ ಲಿಂಗಾಯತರು ಇತರ ಲಿಂಗಾಯತರು ಬರುತ್ತಾರೆ. 2002ರಲ್ಲಿ ಎಸ್.ಎಂ. ಕೃಷ್ಣ ಸಿಎಂ ಇದ್ದಾಗ ಇದೆಲ್ಲ ಆಗಿದೆ” ಎಂದು ತಿಳಿಸಿದರು.
“1992ರಲ್ಲಿ ಮೊಯ್ಲಿ ಸಿಎಂ ಇದ್ದಾಗ ಮುಸ್ಲಿಂರಿಗೆ 2ಬಿ ಮಾಡಿದ್ದಾರೆ. ಬಳಿಕ ಬಿಜೆಪಿಯವರು ಮುಸ್ಲಿಂನವರಿಗೆ ಕೊಟ್ಟಿದ್ದನ್ನು ರದ್ದು ಮಾಡಿ 2ಸಿ, 2ಡಿ ಮಾಡಿ ಅದರಲ್ಲಿನ ಶೇ.4ರ ಮೀಸಲಾತಿ ತೆಗೆದು ಇವರಿಗೆ ಕೊಟ್ಟಿದಾರೆ. ಆಗ ಯಾಕೆ ಇವರು ಪ್ರತಿಭಟನೆ ಮಾಡಲಿಲ್ಲ. ಈಗ ಅದೇ ಸರ್ಕಾರದವರು ಇವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಮುಸ್ಲಿಂ ಮೀಸಲಾತಿ ಕಸಿದುಕೊಂಡಿದ್ದನ್ನು ಪ್ರಶ್ನಿಸಿ ರಸೂಲ್ ಎನ್ನುವವರು ಸುಪ್ರೀಂಕೋರ್ಟ್ಗೆ ಹೋಗಿದ್ದರು. ಆಗ ಅಲ್ಲಿ ಇವರ ಪರ ವಕೀಲರು ನಾವು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಹೇಳಿದ್ದರು. ಬಿಜೆಪಿಯವರು ಈಗ ಯಾಕೆ ಬೆಂಬಲ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.