ಬಳ್ಳಾರಿ : ಬಾಹ್ಯ ವಸ್ತುಗಳ ಗಳಿಕೆಯ ಬೆನ್ನುಹತ್ತಿದ ನಾವು ಅಂತರಂಗದ ಸುಖ ಮತ್ತು ಶಾಂತಿಯನ್ನು ಕಳೆದುಕೊಂಡಿದ್ದೇವೆಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಬಸವಲಿಂಗ ಮಹಾಸ್ವಾಮಿಗಳ ತಿಳಿಸಿದರು.
ಜಮಾತೆ ಇಸ್ಲಾಮಿ ಹಿಂದ್, ಬಳ್ಳಾರಿ ಜಿಲ್ಲಾ ಘಟಕ ಈದ್ ಮಿಲಾದ್ ಅಂಗವಾಗಿ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಸೀರತ್ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಸತ್ಯ, ನ್ಯಾಯದ ಪ್ರತಿಪಾದನೆ ಪ್ರಾಮಾಣಿಕತೆಯನ್ನು ಪ್ರವಾದಿ ಮುಹಮ್ಮದ್ ರು ತಾವು ಪರಿಪಾಲಿಸುವ ಜೊತೆಗೆ ಅದಕ್ಕೆ ಧಾರ್ಮಿಕ ಚೌಕಟ್ಟನ್ನು ಕಲ್ಪಿಸುವ ಮೂಲಕ ಜನ ಸಾಮಾನ್ಯರಿಗೆ ನೈತಿಕ ಸನ್ಮಾರ್ಗವನ್ನು ಕುರಾನ್ ಮೂಲಕ ಬೋಧಿಸಿದರೆಂದು ಜಗದ್ಗರು ಬಸಲಿಂಗ ಸ್ವಾಮೀಜಿ ತಿಳಿಸಿದರು.
ದಯೆ, ಕರುಣೆ ಮಾನವೀಯತೆ ಎಲ್ಲಾ ಧರ್ಮಗಳ ಜೀವಾಳವಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್ಚ್ ಬಿಷಪ್ ಡಾ ಹೆನ್ರಿ ಡಿಸೋಜಾ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಳಕಲ್ಲಿನ ಲಾಲ್ ಸಾಬ್ ಕಂದಗಲ್ ಮಾತನಾಡುತ್ತಾ ಧರ್ಮಗಳನ್ನು ಸ್ವಾರ್ಥಕ್ಕಾಗಿ, ಸೌಹಾರ್ದತೆ ಸಹಬಾಳ್ವೆಯನ್ನು ಕದಡಲು ಬಳಸದೇ ಜನರು ಧರ್ಮ ಮಾರ್ಗದಲ್ಲಿ ನಡೆದು ಇಹ-ಪರಗಳಲ್ಲಿಯೂ ಸಲ್ಲುವಂತವರಾಗು ಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟೇಶ್ ದಳವಾಯಿ ಮತ್ತು ಕಸಾಪ ಜಿಲ್ಲಾ ಅಧ್ಯಕ್ಷ ಡಾ ನಿಷ್ಠಿ ರುದ್ರಪ್ಪ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬೌದ್ಧ ಧರ್ಮದ ಗುರುಗಳಾದ ಕಮಲರತ್ನ ಬಂತೇಜಿ, ಸಿಖ್ ಧರ್ಮದ ಮುಖಂಡರಾದ ಇಂದ್ರಜೀತ್ ಸಿಂಗ್, ದಲಿತ ಸಂಘರ್ಷ ಸಮಿತಿಯ ಜಿ ಗೋವರ್ಧನ,
ಜಮಾತೆ ಇಸ್ಲಾಮಿ ಹಿಂದ್ ಬಳ್ಳಾರಿ ಅಧ್ಯಕ್ಷ ಡಾ ಸೈಯದ್ ಜೈನುಲಾಬೀದ್ದೀನ್ ಖಾದ್ರಿ. ನಗರ ಅಧ್ಯಕ್ಷ ನಿಜಾಮುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಜನಾಬ್ ಮುಹಮ್ಮದ್ ಖಲೀಲ್. ಮಾತನಾಡಿದರು.
ಸೈಯದ್ ಮಿಸ್ಬಾಹುದ್ದೀನ್ ಖಾದ್ರಿ ನಿರೂಪಣೆ ಮಾಡಿದರು.


