ಉಡುಪಿ: ಶರಣಾಗತಿಯೊಂದೇ ನಿಮಗಿರುವ ಒಂದೇ ಒಂದು ದಾರಿ ಎಂಬ ಸಂದೇಶವನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಹೇಳಿದ್ದಾರೆ.
ಉಡುಪಿ ಜಿಲ್ಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಹಾಗೂ ಎಎನ್‌ಎಫ್ (ನಕ್ಸಲ್ ನಿಗ್ರಹದಳ) ನಡುವಿನ ಮುಖಾಮುಖಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿದೆ. ಎನ್‌ಕೌಂಟರ್ ಫೇಕ್ ಅಲ್ಲ, ಈ ಬಗ್ಗೆ ಪ್ಲ್ಯಾನ್ ಕೂಡ ಮಾಡಿರಲಿಲ್ಲ ಎಂದು ಮೊಹಂತಿ ತಿಳಿಸಿದರು. ವಿಕ್ರಮ್ ಗೌಡನಿಗೆ ಶರಣಾಗಲು ಎಲ್ಲಾ ಅವಕಾಶ ನೀಡಿದ್ದೇವು, ಆದರೆ ಆತ ಮಾತು ಕೇಳಲಿಲ್ಲ, ಆತನ ಆಯುಧಕ್ಕೆ ಪೊಲೀಸರು ಬಲಿಯಾಗುವುದನ್ನು ತಪ್ಪಿಸಲುಎನ್ ಕೌಂಟರ್ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಎಎನ್‌ಎಫ್‌ನವರು ಈ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದ್ದರಿಂದ ಈ ಅವಕಾಶ ಸಿಕ್ಕಿತು. ಎನ್‌ಕೌಂಟರ್ ಎಂದು ಹೇಳಿದರು ಮತ್ತು ವಿಕ್ರಮ್ ಗೌಡ ಮತ್ತು ಅವರ ತಂಡವು ಮನೆಯಿಂದ ಪಡಿತರ ಸಂಗ್ರಹಿಸಲು ಹೆಬ್ರಿ ತಾಲೂಕಿನ ಪಿತ್ತುಬೈಲ್, ನಾಡ್‌ಪಾಲ್ ಗ್ರಾಮಕ್ಕೆ ಆಗಮಿಸಿತು. ಎಎನ್‌ಎಫ್ ತಂಡವು ಹೊಂಚು ಹಾಕಿ ದಾಳಿ ನಡೆಸಿದೆ ಎಂಬ ಸಿದ್ಧಾಂತವನ್ನು ಡಿಜಿ ತಿರಸ್ಕರಿಸಿದರು. ಸೋಮವಾರ ಸಂಜೆ ಸುಮಾರು 6 ಗಂಟೆ ಹೊತ್ತಿನಲ್ಲಿ ಹೆಬ್ರಿ ತಾಲೂಕಿನ ನಾಡ್ಪಾಲಿನ ಪೀತಾಬೈಲು ಎಂಬಲ್ಲಿನ ಮನೆ ಬಳಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ, ಆತನ ಬಳಿ ಮೆಷಿನ್ ಗನ್, ಪಿಸ್ತೂಲ್, ಚಾಕು ದೊರಕಿದೆ. ಕಾರ್ಯಾಚರಣೆ ವೇಳೆ ಎಷ್ಟು ನಕ್ಸಲರು ಇದ್ದರು ಎಂದು ಎಎನ್‌ಎಫ್‌ಗೆ ಮಾಹಿತಿ ಇಲ್ಲ. ಎನ್‌ಕೌಂಟರ್ ಫೇಕ್ ಅಲ್ಲ, ಈ ಬಗ್ಗೆ ಪ್ಲ್ಯಾನ್ ಕೂಡ ಮಾಡಿರಲಿಲ್ಲ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ. ನಕ್ಸಲ್ ಪ್ರತಿದಾಳಿ ಸಾಧ್ಯತೆ ಬಗ್ಗೆ ಅಲರ್ಟ್ ಆಗಿದ್ದೇವೆ. ಅದನ್ನು ತಡೆಯುತ್ತೇವೆ ಎಂದು ತಿಳಿಸಿದರು.