ನೀರು ಅಮೃತಕ್ಕೆ ಸಮ: ಶಿವಕುಮಾರ್ ಮಹಾಸ್ವಾಮಿಗಳು

Ravi Talawar
ನೀರು ಅಮೃತಕ್ಕೆ ಸಮ: ಶಿವಕುಮಾರ್ ಮಹಾಸ್ವಾಮಿಗಳು
WhatsApp Group Join Now
Telegram Group Join Now
ಬಳ್ಳಾರಿ,ನ.28.   ಭೂಮಿಯ ಮೇಲೆ ಬದುಕುವ ಪ್ರತಿಯೊಂದು ಜೀವಿಗಳಿಗೂ ಪಂಚ ಭೂತಗಳು ಅತ್ಯಮೂಲ್ಯ, ಅದರಲ್ಲೂ ನೀರು ಅಮೃತಕ್ಕೆ ಸಮ , ಅಂತರ್‌ಜಲ ಸಂರಕ್ಷಣೆಗೆ ಕೆರೆ, ಬಾವಿ, ನದಿಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನಂದಿವೇರಿ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ, ಮ,ನಿ,ಪ್ರ ಶಿವಕುಮಾರ್ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ತಿಳಿಸಿದರು.
ತಾಲ್ಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪರಮದೇವನಹಳ್ಳಿ ವಲಯದ ಚೇಳ್ಳಗುರ್ಕಿ ಗ್ರಾಮದಲ್ಲಿ ಶ್ರೀ ಎರ್ರಿತಾತನವರ ೪ ಎಕರೆ ಕೆರೆಯನ್ನು ೧೦ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಮೂಲಕ ಪುನಶ್ಚೇತನಗೊಳಿಸಲಾಗಿದ್ದು, ಕೆರೆ ನಾಮ ಫಲಕ ಅನಾವರಣ ಹಾಗೂ ಕೆರೆ ಸಮಿತಿಗೆ ಹಸ್ತಾಂತರ ಮತ್ತು ಗಂಗಾ ಮಾತೆಗೆ ಬಾಗಿನ ಸಮರ್ಪಣೆ ಮಾಡುವ ಮೂಲಕ ಡಾ||ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮ ದಿನವನ್ನು ಆಚರಣೆ  ಮಾಡಿ ಮಾತನಾಡಿದರು.
ಬಳ್ಳಾರಿ ತಾಲ್ಲೂಕಿನ ಕಮ್ಮರಚೇಡ್ ಕಲ್ಯಾಣ ಸಂಸ್ಥಾನ ಮಠದ ಪೀಠಾಧ್ಯಕ್ಷ ಮ,ನಿ,ಪ ಕಲ್ಯಾಣ ಮಹಾಸ್ವಾಮಿಗಳು ಮಾತನಾಡಿ, ಧರ್ಮಸ್ಥಳದ ನಡೆದಾಡುವ ದೇವರು ಡಾ||ವೀರೇಂದ್ರ ಹೆಗ್ಗಡೆಯವರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು. ಬಹುಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಕೆರೆಗಳ ಅವಶ್ಯಕತೆ ಬಹಳಷ್ಟಿದೆ, ಇತ್ತೀಚಿನ ದಿನಮಾನದಲ್ಲಿ ಕೆರೆಗಳು ಹೊಳು ತುಂಬಿಕೊAಡು ಕೆರೆಗಳು ನಶಿಸಿ ಹೋಗಿರುವ ದುಸ್ಥಿಗೆ ಬಂದೊದಗಿವೆ ಈ ಕಾರಣದಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತ ಸಾಗುತ್ತಿದೆ ಇಂತಹ ಕಿಷ್ಟಕರ ಸಂದರ್ಭಗಳನ್ನ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಸಂಸ್ಥೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆಗಳ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಲ್ಲದೇ ಇದೇ ರೀತಿಯ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ, ಒಂದು ಸರ್ಕಾರ ಮಾಡುವಂತಹ ಕೆಲಸವನ್ನು ಒಬ್ಬ ಧರ್ಮಧಿಕಾರಿಗಳು ಮಾಡುತ್ತಿದ್ದಾರೆಂದರೆ ಶ್ಲಾಘನೀಯ ಎಂದರು.
ರೋಹಿತಾಕ್ಷ ಜಿಲ್ಲಾ ನಿರ್ದೇಶಕ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ವಿಶೇಷ ಕಾಳಜಿ ಎಂದರೆ ನೆಲ ಜಲ ಸಂರಕ್ಷಣೆಗಾಗಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಯಲ್ಲಿ ಕೆರೆ ಹೂಳೆತ್ತುವ ಮೂಲಕ ಜೀವಜಲ ಉಳಿಸುವ ಕಾರ್ಯಕ್ರಮವನ್ನು   ನಡೆಸಿಕೊಂಡು ಬರಲಾಗುತ್ತಿದ್ದು ಈ ವರೆಗೆ ೯೦೦ ಕ್ಕು ಹೆಚ್ಚು ಕೆರೆ ಪುನಶ್ಚೇತನ ಪೂರ್ಣಗೊಳಿಲಾಗಿದೆ ಈ ವರ್ಷ ಒಂದು ೧೦೦೦ ಕೆರೆಗಳನ್ನು ಪುನಶ್ಚೇತನಗೊಳಿಸಬೇಕೆಂದು ಪೂಜ್ಯರು ಕನಸ್ಸಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಎರ್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್ ನ ಸದಸ್ಯರು ಹಾಗೂ ಕೆರೆ ನಮ್ಮೂರು ನಮ್ಮ ಕೆರೆ ಸಮಿತಿಯ ಅಧ್ಯಕ್ಷ ಸಿದ್ದಲಿಂಗನಗೌಡ , ಬಸವರಾಜ, ಸಿ,ಕೆ.ಪಂಪನಗೌಡ್ರು, ಸತೀಶ್, ಎರ್ರೆಣ್ಣ, ಶಶಿಧರ್, ಜಗದೀಶಯ್ಯ ಸ್ವಾಮಿ, ದೊಡ್ಡಬಸವನಗೌಡ್ರು, ಚಿಕ್ಕನಗೌಡ್ರು, ಮಲ್ಲಿಕಾರ್ಜು£ ಸೇರಿದಂತೆ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article