ರಾಯಬಾಗ: ಸೈನ್ಯದಲ್ಲಿ ಸೇರಿ ದೇಶ ರಕ್ಷಣೆ ಮಾಡುವ ಭಾಗ್ಯವನ್ನು ಕೆಲವರಷ್ಟೇ ದೊರೆಯುವದು, ಯೋಧರ ದೇಶ ಸೇವೆ ಚಿರಸ್ಮರಣೀಯವೆಂದು ಜಿ.ಪಂ.ಮಾಜಿ ಸದಸ್ಯ ಹಾಗೂ ಅಭಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಹೇಳಿದರು.
18 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ತಾಲೂಕಿನ ಕಂಚಕಾರವಾಡಿ ಗ್ರಾಮದ ಯೋಧರಾದ ಮಹೇಶ ಮಗದುಮ್ ಮತ್ತು ಸಂತೋಷ ಗೊರವ ಅವರು ರಾಯಬಾಗ ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಂಡು, ಪಟ್ಟಣದ ಅಭಾಜಿ ವೃತ್ತದ ಬಳಿ ಯೋಧರನ್ನು ಸತ್ಕರಿಸಿ ಮಾತನಾಡಿದ ಅವರು, ಹೆತ್ತವರನ್ನು, ಬಂಧು ಬಾಂಧವರನ್ನು ಬಿಟ್ಟು ಸೇವೆ ಸಲ್ಲಿಸಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿ ತಾಯ್ನಾಡಿಗೆ ಮರಳಿದ ವೀರಯೋಧರನ್ನು ಸತ್ಕರಿಸುವುದು ನಮ್ಮ ಸೌಭಾಗ್ಯವೆಂದರು. ಪ್ರತಿ ಮನೆಯಿಂದಲೂ ಒಬ್ಬ ಯುವಕ ದೇಶ ಸೇವೆಗೆ ಮುಂದಾಗಬೇಕೆಂದು ಯುವಕರಿಗೆ ಕರೆ ನೀಡಿದರು.
ಸತ್ಕಾರ ಸ್ವೀಕರಿಸಿದ ಮಹೇಶ ಮಗದುಮ್ ಹಾಗೂ ಸಂತೋಷ ಗೊರವ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಅಶೋಕ ಶಿಂಗೆ, ಸಂತೋಷ ದೀಪಾಳೆ, ಬೀರಪ್ಪ ವಂಟಮೂರೆ, ಶಿವಲಿಂಗ ಹಳಿಂಗಳಿ, ಸುಭಾಷ್ ಗಸ್ತಿ, ಸುನೀಲ ಗಾಯಕವಾಡ, ವಸಂತ ಕಾಂಬಳೆ, ಮಾಜಿ ಸೈನಿಕರು, ಯೋಧರ ಕುಟುಂಬಸ್ಥರು ಹಾಗೂ ಪಟ್ಟಣದ ನಾಗರಿಕರು ಇದ್ದರು.