ನೇಸರಗಿ. ನಾನು ಶಾಸಕನಾಗಿ 2 ವರ್ಷ ಕಳೆದಿದೆ ಕ್ಷೇತ್ರದ ತುಂಬೆಲ್ಲ ವಾರ್ಡ್ ವೈಸ್ ಮುಖಾಂತರ 40% ಕಿತ್ತೂರು ಕ್ಷೇತ್ರದ ತುಂಬ ಮೂಲಭೂತ ಸೌಕರ್ಯ, ರಸ್ತೆ, ಕಿತ್ತೂರು ಅಭಿವೃದ್ಧಿ, ವರ್ಷದಿಂದ ವರ್ಷಕ್ಕೆ ವೈಭವಯುತ ಕಿತ್ತೂರ ಉತ್ಸವ, ಥಿಮ್ಸ್ ಪಾರ್ಕ್ ನಿರ್ಮಾಣ ಇನ್ನೂ ಅನೇಕ ಕಾರ್ಯಗಳು ನಡೆಯುತ್ತಿದ್ದು ಆದರೆ ಮೊಬೈಲ್ ಸಂಪರ್ಕಕ್ಕೆ ಸಿಗತಾ ಇಲ್ಲಾ ಏಕೆಂದರೆ ಕೇವಲ 1% ಜನ ಮೊಬೈಲ್ ಸಂಪರ್ಕಕ್ಕೆ ಬಂದರೆ ಅದೇ ನಾಲ್ಕು ಘಂಟೆಗೆ ಆಗತ್ತೆ ಅದರ ಬದಲಾಗಿ ನಾನು ಕ್ಷೇತ್ರದ ಕೆಲಸ ಕಾರ್ಯಗಳನ್ನು ತರಲು ಸಮಯ ಕಳೆಯುತ್ತಿದ್ದು ಅದಕ್ಕಾಗಿ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರಿಗೆ ನಾನು ವಿಷಾದ ತಿಳಿಸುತ್ತೇನೆ. ನನ್ನ ಮನೆ ಬಾಗಿಲು 24×7 ಯಾವಾಗಲು ತಗೆದಿರುತ್ತದೆ. ತಮ್ಮ ಕೆಲಸ ಕಾರ್ಯಗಳಿಗೆ ಸದಾ ಸಿದ್ದನಿದ್ದೇನೆ . 2 ವರ್ಷದಲ್ಲಿ 40% ಕೆಲಸ ಕಾರ್ಯ ಅಗಿದ್ದು ಉಳಿದ3 ವರ್ಷಗಳ ಅವಧಿಯಲ್ಲಿ 100 ಕ್ಕೆ 100 ಆಗದಿದ್ದರೂ 70 % ಕೆಲಸ ಮಾಡಲು ಉತ್ಸುಕನಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಂ ಪಂ ಮಟ್ಟದಲ್ಲಿ, ಜಿ ಪಂ ಮಟ್ಟದಲ್ಲಿ ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡುತ್ತೇನೆ. ಈ 53 ನೇ ಹುಟ್ಟುಹಬ್ಬ ನೆಪ ಮಾತ್ರ ನನ್ನನ್ನು ಗೆಲ್ಲಿಸಿ ಶಾಸಕನಾಗಿ ಮಾಡಿದ ನಿಮ್ಮನ್ನು ಬೆಟ್ಟಿಯಾಗುವ ಸೌಭಾಗ್ಯವಸ್ಟೆ ಈ ಹುಟ್ಟುಹಬ್ಬದ ಕಾರಣ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.

ಅವರು ಮಂಗಳವಾರದಂದು ಸಮೀಪದ ನೇಗಿನಹಾಳ ಗ್ರಾಮದಲ್ಲಿ ಶ್ರೀ ಬಾಬಾಸಾಹೇಬ ಅಭಿಮಾನಿ ಬಳಗದವರು ಹಾಗೂ ವಿವಿಧ ಇಲಾಖೆಗಳು ಏರ್ಪಡಿಸಲಾಗಿದ್ದ ಶಾಸಕ ಬಾಬಾಸಾಹೇಬ ಪಾಟೀಲರ 53 ನೇ ಹುಟ್ಟುಹಬ್ಬದ ಹಾಗೂ ಅವರ ಸಹೋದರ ನಾನಾಸಾಹೇಬ ಪಾಟೀಲ ಅವರ ಹುಟ್ಟುಹಬ್ಬದ ಪ್ರಯುಕ್ತ ಬ್ರಹತ್ ರಕ್ತದಾನ ಶಿಬಿರ ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಯುವ ಕಾಂಗ್ರೆಸ್ ಮುಖಂಡ ಮೃನಾಲ್ ಹೆಬ್ಬಾಳಕರ ಮಾತನಾಡಿ ನಾನು ಚಿಕ್ಕವನಾಗಿದಾಗಿನಿಂದ ಅಣ್ಣ ಬಾಬಾಸಾಹೇಬರ ಸಂಬಂಧ ಅವರು ಎರಡು ವರ್ಷದಲ್ಲಿ ಹೆಚ್ಚಿನ ಅನುಧಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ 5 ಬಾರಿ ಶಾಸಕರಾದವರು ಇವರಷ್ಟು ಕೆಲಸ ಮಾಡಿಲ್ಲ ಎಂದರು.
ಕೆ ಪಿ ಸಿ ಸಿ ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ ಮಾತನಾಡಿ ನನ್ನ ಪತಿ ಬಾಬಾಸಾಹೇಬರಿಗೆ ಯಾರು ಗಾಢ ಫಾದರ್ ಇಲ್ಲಾ ಅವರಿಗೆ ಕ್ಷೇತ್ರದ ಜನರೆ ಗಾಢ ಫಾದರ ಅಗಿದ್ದು ಅದಕ್ಕಾಗಿ ತಮ್ಮ ಆಶೀರ್ವಾದ ಅವರ ಮೇಲೆ ಸದಾ ಇರಲಿ ಹಾಗೂ ಅವರ ಸಹೋದರ ನಾನಾಸಾಹೇಬ ಪಾಟೀಲರು ಸಹಕಾರಿ ಕ್ಷೇತ್ರದಲ್ಲಿ ಮುನ್ನುಗುತ್ತಿದ್ದು ಮುಂಬರುವ ಬಿಡಿಸಿಸಿ ಬ್ಯಾಂಕ ಚುನಾವಣೆಗೆ ಸ್ಪರ್ದಿಸುತ್ತಿದ್ದು ಅವರಿಗೆ ನಿಮ್ಮ ಬೆಂಬಲ ಅವಶ್ಯ ಎಂದರು.

ಸಹಕಾರಿ ಧುರೀಣ ನಾನಾಸಾಹೇಬ ಪಾಟೀಲ ಮಾತನಾಡಿ ನಿಮ್ಮ ಪ್ರೀತಿ, ಅಭಿಮಾನಕ್ಕೆ ನಮ್ಮ ಕುಟುಂಬ ಅಭಾರಿಯಾಗಿದೆ ಮುಂದೆ ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ ಎಂದರು. ವೇದಿಕೆಯಲ್ಲಿ ಶ್ರೀ ಶಾಂತಯ್ಯ ಶ್ರೀಗಳು, ಶಿದ್ದಾರೂಢ ಶ್ರೀಗಳು, ಶ್ರೀ ಚನ್ನಬಸವ ದೇವರು ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ತಾಯಿ ಚನ್ನಮ್ಮ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಬೆಳೆಸಿ ಅಭಿವೃದ್ಧಿ ಕಾರ್ಯ ಶಾಸಕ ಬಾಬಾಸಾಹೇಬ ಪಾಟೀಲರು ಮಾಡಲಿ ಎಂದರು.
ಮುಖಂಡರಾದ ಸಿ ಆರ ಪಾಟೀಲ, ಶಂಕರ ಹೋಳಿ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಕಿತ್ತೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ಸಚಿನ ಪಾಟೀಲ,ಅಡಿವಪ್ಪ ಮಾಳಣ್ಣವರ, ಸಿದ್ದಾರ್ಥ್ ಸುನಕುಂಪಿ,ಚಂದ್ರಗೌಡ ಪಾಟೀಲ,ಬಾಳಪ್ಪ ಮಾಳಗಿ, ಬರಮಣ್ಣ ಸತ್ತೇನ್ನವರ, ಮಂಜುನಾಥ ಹುಲಮನಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಐ ಪಿ ಗಡಾದ, ತಾಲೂಕಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಸ್ ಎಸ್ ಸಿದ್ದಣ್ಣವರ,ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಅಧಿಕಾರಿ ಪ್ರಭಾವತಿ ಫಕೀರಪುರ ,ತಾಲೂಕಾ ಶಿಕ್ಷಣ ಅಧಿಕಾರಿ ಎ ಎನ್ ಪ್ಯಾಟಿ,ಉಪ ವಿಭಾಗಧಿಕಾರಿಗಳಾದ ಪ್ರವೀಣ್ ಜೈನ, ತಹಶೀಲ್ದಾರರಾದ ಶ್ರೀಕಾಂತ ಶಿರಹಟ್ಟಿ, ಅನೇಕ ಇಲಾಖೆಯ ಅಧಿಕಾರಿಗಳು ಶಾಸಕರ ಜನ್ಮ ದಿನಕ್ಕೆ ಶುಭ ಕೋರಿದರು

ಕಾರ್ಯಕ್ರಮದಲ್ಲಿ ಬಸವರಾಜ ಚಿಕ್ಕನಗೌಡರ, ಸುರೇಶ ಅಗಸಿಮನಿ, ಮಲ್ಲಿಕಾರ್ಜುನ ಕಲ್ಲೋಳಿ,ಕಾಶಿಮ್ ಜಮಾದಾರ, ಶಿವಾನಂದ ಕುಂಕುರ ಸೇರಿದಂತೆ ಸಹಸ್ರಾರು ಜನ ಕಾಂಗ್ರೆಸ್ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಈ ಸ್ವಯಂ ಪ್ರೇರಿತ ಶಿಬಿರದಲ್ಲಿ 73 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದ್ದಾರೆ. ಶಿಬಿರದಲ್ಲಿ ನೇಗಿನಹಾಳ ಪಿ ಹೆಚ್ ಸಿ ವೈದ್ಯರಾದ ಡಾ. ಜಗದೀಶ ಹಲಸಗಿ ಜಿಲ್ಲಾ, ತಾಲೂಕ,ನೇಗಿನಹಾಳ ಪ್ರಾಥಮಿಕ ಅರೋಗ್ಯ ಕೇಂದ್ರಗಳ ವೈದ್ಯರು, ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು.