ಇಂದಿನ ಪ್ರಪಂಚದಲ್ಲಿ ಯುದ್ಧದ ಕಾರ್ಮೊಡಗಳು: ಟಿ.ವಿ.ಎಸ್. ರಾಜು

Ravi Talawar
ಇಂದಿನ ಪ್ರಪಂಚದಲ್ಲಿ ಯುದ್ಧದ ಕಾರ್ಮೊಡಗಳು: ಟಿ.ವಿ.ಎಸ್. ರಾಜು
WhatsApp Group Join Now
Telegram Group Join Now
ಬಳ್ಳಾರಿ,ಮೇ.28.: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕ್ಕೋತರ ಕೇಂದ್ರ ಬಳ್ಳಾರಿಯಲ್ಲಿ ಸೆಂಟರ್ ಫಾರ್ ಪ್ರೋಟೆಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ ವತಿಯಿಂದ ‘ಸೇತುಗಳನ್ನು ನಿರ್ಮಿಸಿ ಯುದ್ಧ ಭೂಮಿಗಳನ್ನಲ್ಲ’ ಎನ್ನುವ ವಿಷಯ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಭಾಷಣಕಾರರಾಗಿ ಸಿಪಿಡಿಆರ್‌ಎಸ್ ನ ಶಿವಮೊಗ್ಗ ಜಿಲ್ಲೆಯ ಸಂಚಾಲಕ ಟಿ.ವಿ.ಎಸ್. ರಾಜು ಮಾತನಾಡುತ್ತಾ, ‘ಇಂದಿನ ಪ್ರಪಂಚದಲ್ಲಿ ಎಲ್ಲಿ ನೋಡಿದರು ಯುದ್ಧದ ಕಾರ್ಮೊಡಗಳು ಸುತ್ತಿಕೊಂಡಿವೆ. ಎಲ್ಲಾ ರಾಷ್ಟçಗಳು ತಮ್ಮ ಬಜೆಟ್‌ನಲ್ಲಿ ಮಿಲಿಟರಿಗೆ ಗಣನೀಯವಾದ ಹಣಕಾಸನ್ನು ನೀಡುತ್ತಿವೆ. ಯದ್ಧ ಶಸ್ತಾçಸ್ತçಗಳನ್ನು ತಯಾರಿಸುವ ಉದ್ದಿಮೆ ಅತ್ಯಂತ ಲಾಭದಾಯಕವಾಗಿದೆ. ಯುದ್ಧಗಳು ಇಲ್ಲವಾದಲ್ಲಿ ಈ ಉದ್ದಿಮೆಗಳು ಮುಚ್ಚಬೇಕಾಗುತ್ತದೆ. ಈ ಉದ್ದಿಮೆದಾರರು ಕೋಟ್ಯಾಂತರ ರೂಪಾಯಿ ಹಣವನ್ನು ಈ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಇವರ ವ್ಯಾಪಾರ ನಡೆಯಬೇಕಾದರೆ ಯುದ್ಧಗಳು ನಿರಂತರವಾಗಿ ಇರಬೇಕಾಗುತ್ತದೆ. ಯುದ್ಧಗಳ ಪರಿಣಾಮವಾಗಿ ಇಂದು ಉಕ್ರೇನ್‌ನಲ್ಲಿ, ಪ್ಯಾಲೇಸ್ಥೆöÊನ್‌ನಲ್ಲಿ ಸಾವಿರಾರು ನಾಗರಿಕರು ಮಕ್ಕಳು ಮಹಿಳೆಯರು ಸೇರಿದಂತೆ ಹಾಗೂ ಆಸ್ಪತ್ರೆಗಳು ಶಾಲೆಗಳು ಜನರ ವಸತಿಗಳು ಸರ್ವನಾಶವಾಗಿವೆ. ಸಾಮ್ರಾಜ್ಯಶಾಹಿ ರಾಷ್ಟçಗಳ ತಮ್ಮ ಪ್ರಾಬಲ್ಯವನ್ನು ರಕ್ಷಿಸಿಕೊಳ್ಳಲು ಹಾಗೂ ಸಂಪನ್ಮೂಲ ಭರಿತ ರಾಷ್ಟçಗಳಲ್ಲಿ ಇರುವ ಖನಿಜ ಮತ್ತು ತೈಲ ಸಂಪತ್ತಿನ ಮೇಲೆ ತಮ್ಮ ಅಧಿಪತ್ಯ ಸಾದಿಸಿ ಕೊಳ್ಳೆ ಹೊಡೆದು ಲಾಭ ಮಾಡಿಕೊಳ್ಳಲು ಸ್ಪರ್ಧೆಗಿಳಿದಿವೆ. ಈ ರಾಷ್ಟçಗಳ ಮದ್ಯೆ ನಡೆಯುವ ವ್ಯಾಪಾರಿ ಪೈಪೋಟಿಯಿಂದಲೇ ಯುದ್ಧಗಳು ಸಂಭವಿಸುತ್ತಿವೆ. ವಿಶ್ವಸಂಸ್ಥೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಯುದ್ಧಗಳು ನಿಲ್ಲಬೇಕಾದರೆ ಜನತೆ ಶಾಂತಿಗಾಗಿ ಐಕ್ಯ ಹೋರಾಟಗಳನ್ನು ಕಟ್ಟಬೇಕು’ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಶಾಸ್ತç ವಿಭಾಗದ ಹೊನ್ನರ್ ಅಲಿ ಅವರು, ‘ನಾವು ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಯುದ್ಧ ನಡೆಯುತ್ತಾ ಇದೆ ಅದಕ್ಕೂ ನಮಗೂ ಸಂಬAದ ಇಲ್ಲ ಎಂದು ಸುಮ್ಮನೆ ಕೂಡದೆ ವಿಚಾರ ಮಾಡಿ ಪ್ರತಿಕ್ರಿಯಸಬೇಕು’ ಎಂದರು.
ಪ್ರಾಸ್ತಾವಿಕವಾಗಿ ಅರ್ಥಶಾ ಸ್ತçದ ಉಪನ್ಯಸಕ ಹುಚ್ಚುಸಾಬ್ ಹಾಗೂ ಸಿಪಿಡಿಆರ್‌ಎಸ್ ನ ಜಿಲ್ಲಾ ಸಂಚಾಲಕರಾದ ಆರ್. ಸೋಮಶೇಖರ್ ಗೌಡ  ಮಾತನಾಡಿದರು. ರಾಜ್ಯಶಾಸ್ತçದ ಉಪನ್ಯಾಸಕರಾದ ಶ್ರೀನಿವಾಸ್ ವಂದನಾರ್ಪಣೆ ಮಾಡಿದರು.
WhatsApp Group Join Now
Telegram Group Join Now
Share This Article