ರಾಜ್ಯಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ

Ravi Talawar
ರಾಜ್ಯಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 03: ಲೋಕಸಭೆಯಲ್ಲಿ ಬುಧವಾರ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯಸಭೆಯಲ್ಲೂ ಹೆಚ್ಚಿನ ಸಂಸದರನ್ನು ಹೊಂದಿದೆ. ಬಿಜೆಪಿಯ 98 ಸಂಸದರು, ಮಿತ್ರಪಕ್ಷ ಜೆಡಿಯು ಪಕ್ಷದ ನಾಲ್ವರು, ಎನ್‌ಸಿಪಿಯ ಮೂವರು, ಟಿಡಿಪಿಯ ಇಬ್ಬರು ಮತ್ತು ಆರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಎನ್‌ಡಿಎ ಮೈತ್ರಿಕೂಟದ 125 ಸಂಸದರಿದ್ದಾರೆ. ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್‌ನ 27 ಸಂಸದರು, ತೃಣಮೂಲ ಕಾಂಗ್ರೆಸ್‌ನ 13 ಸೇರಿದಂತೆ 88 ಸಂಸದರನ್ನು ಹೊಂದಿದೆ. ನವೀನ್ ಪಟ್ನಾಯಕ್ ನೇತೃತ್ವದ BJD ಪಕ್ಷವು 7 ಸಂಸದರನ್ನು ಹೊಂದಿದೆ.

ರಾಜ್ಯಸಭೆಯಲ್ಲಿ ನಡೆದ ಚರ್ಚೆಗಳೇನು? 8.72 ಲಕ್ಷ ವಕ್ಫ್ ಆಸ್ತಿಗಳಿವೆ., 2006 ರಲ್ಲಿ, ಸಾಚಾರ್ ಸಮಿತಿಯು 4.9 ಲಕ್ಷ ವಕ್ಫ್ ಆಸ್ತಿಗಳಿಂದ 12,000 ಕೋಟಿ ರೂ.ಗಳ ಆದಾಯವನ್ನು ಅಂದಾಜಿಸಿದ್ದರೆ, ಈ ಆಸ್ತಿಗಳು ಈಗ ಎಷ್ಟು ಆದಾಯವನ್ನು ಗಳಿಸುತ್ತಿವೆ ಎಂದು ನೀವು ಊಹಿಸಬಹುದು ಎಂದು ರಾಜ್ಯಸಭೆಯಲ್ಲಿ ಕಿರಣ್ ರಿಜಿಜು ಹೇಳಿದರು. ಮಸೂದೆಯು ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದರು ಮತ್ತು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಮಸೂದೆಯನ್ನು ಬೆಂಬಲಿಸುವಂತೆ ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article