ಅಥಣಿ: ಅಥಣಿಯ ಎಸ್ ಎಸ್ ಎಮ್ ಎಸ್ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ವೇಟ್ ಲಿಪ್ಟಿಂಗ್ ಹಾಗೂ ಸೆಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಅಥಣಿಯ ಜೆ. ಎ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕು. ಅರ್ಪಿತಾ ತೇರದಾಳ(62 ಕೆಜಿ) ಪ್ರಥಮ, ಕು. ಸುರಕ್ಷಾ ತಳಕೇರಿ (59 ಕೆಜಿ) ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕು. ಅಭಿನವ ಕುಲಕರ್ಣಿ ಹಾಗೂ ಮಹೇಶ ಯಳವಿ, ಹಾಗೂ ಅಮೀತ ಗಾಯಕವಾಡ, ಹರ್ಷಿತ ಮೇತ್ರಿ, ಬಸವರಾಜ ಜಮಖಂಡಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಪ್ಪಾಸಾಬ ಝರೆ (89 ಕೆಜಿ) ದ್ವಿತೀಯ ಸ್ಥಾನ ಪಡೆದು ಕಾಲೇಜು ಕೀರ್ತಿ ಹೆಚ್ಚಿಸಿದ್ದಾನೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ರಾಮ ಕುಲಕರ್ಣಿ, ಉಪಕಾರ್ಯಾಧ್ಯಕ್ಷ ಎಸ್. ಎಮ್. ಪಾಟೀಲ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೀಪ್ ಸಂಗೋರಾಮ ಮತ್ತು ಪ್ರಾಚಾರ್ಯರ ಮಹಾದೇವ ಮೇತ್ರಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿ


