ಶ್ರೀ ಮಾತೃ ಮಹಿಳಾ ಮಂಡಳಿಯಿAದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಹಾಗಾದಾಗ ಮಾತ್ರ ಹಿರಿಯರು ಹೇಳಿರುವಂತೆ ನಾವು ಅಂದುಕೊAಡಿದ್ದನ್ನು ಸಾಧಿಸಸಬಹುದು ಎಂದು ಹೇಳಿದರು. ಪ್ರತಿಯೊಬ್ಬರ ಬದುಕಿನಲ್ಲಿ ಗುರು ಇಲ್ಲದೆ ಏನು ಸಾಧ್ಯವಿಲ್ಲ. ಗುರು ಎಂದರೆ ಅಜ್ಞಾನವೆಂಬ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಮಹಾನ್ ಬೆಳಕು. ಹರ ಮುನಿದರೂ ಗುರು ಕಾಪಾಡುವನು ಎಂಬ ಮಾತನ್ನು ಮಂಡಳಿಯ ಅಧ್ಯಕ್ಷೆ ಕೆ ಪುಷ್ಪ ಚಂದ್ರಶೇಖರ್ ಅವರು ಹೇಳಿದರು.
ಸದಸ್ಯರಾದ ಕೆ ಸುಗುಣ ಅವರು ಪಾಠ ಹೇಳಿ ಕೊಡುವವರಷ್ಟೇ ಗುರುಗಳಲ್ಲ. ಜೀವನದಲ್ಲಿ ನಮಗೆ ಹೇಗಿರಬೇಕು? ಎಂದು ತಿಳಿಸಿ ನಮಗೆ ಮಾರ್ಗದರ್ಶನ ಮತ್ತು ನಮ್ಮ ರಕ್ಷಣೆಯನ್ನು ನೋಡಿಕೊಳ್ಳುವವರು ಎಲ್ಲರೂ ಗುರು ಸ್ಥಾನದಲ್ಲಿರುತ್ತಾರೆ ಎಂದರು. ಸÀದಸ್ಯರಾದ ಕೋಮಾಲಿಕ ಹಾಗೂ ಶಾರದಾ ಅವರು ಉಪಸ್ಥಿತರಿದ್ದು, ಇದೇವೇಳೆ ಎಸ್ ಆರ್ ಎಂ ಮಧು ಅವರ ಸಹಕಾರದೊಂದಿಗೆ ಮಕ್ಕಳಿಗೆ ನೀರು ಕುಡಿಯಲು ವಾಟರ್ ಬಾಟಲ್ ಗಳನ್ನು ವಿತರಣೆ ಮಾಡಲಾಯಿತು.