ವಿಟಿಯು ಉಪ ಕುಲಪತಿ ಡಾ. ಎಸ್. ವಿದ್ಯಾಶಂಕರರಿಗೆ ಸನ್ಮಾನ

Ravi Talawar
ವಿಟಿಯು ಉಪ ಕುಲಪತಿ ಡಾ. ಎಸ್. ವಿದ್ಯಾಶಂಕರರಿಗೆ ಸನ್ಮಾನ
WhatsApp Group Join Now
Telegram Group Join Now
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿಗಳಾಗಿ ದ್ವಿತೀಯ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಡಾ. ಎಸ್. ವಿದ್ಯಾಶಂಕರರಿಗೆ ಬೆಳಗಾವಿ ಮಹಾನಗರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ  ಮಹಾಂತೇಶ ವಕ್ಕುಂದ ಅವರು ಸನ್ಮಾನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾಂತೇಶ ವಕ್ಕುಂದ ಮಾತನಾಡಿ  “ಡಾ. ವಿದ್ಯಾಶಂಕರರವರ ಮುಂದಿನ ಕಾರ್ಯಕಾಲವು ವಿವಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗುವುದರೊಂದಿಗೆ, ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ನೂತನ ಅವಕಾಶಗಳ ಬಾಗಿಲು ತೆರೆದಿಡಲಿದೆ. ತಾಂತ್ರಿಕ ಶಿಕ್ಷಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಹೊಳಪು ನೀಡುವಲ್ಲಿ ಅವರ ನೇತೃತ್ವ ಮಹತ್ವದ ಪಾತ್ರವಹಿಸಲಿದೆ” ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ  ಡಾ. ವಿದ್ಯಾಶಂಕರರು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಸಂಶೋಧನಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ–ಕೇಂದ್ರೀಕೃತ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸುವ ದೃಢಸಂಕಲ್ಪವನ್ನು ವ್ಯಕ್ತಪಡಿಸಿದರು.   ಕಾರ್ಯಕ್ರಮದಲ್ಲಿ ಅಂತರ್ಯಾಮಿ ಫೌಂಡೇಶನ್ ಅಧ್ಯಕ್ಷ ನಾಗರಾಜ ಗಸ್ತಿ, ಕಾರ್ಯದರ್ಶಿ ಗಿರೀಶ ಬಡಿಗೇರ ಹಾಗೂ ಅಕ್ಷಯ ಹಿರೇಮಠ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article