ರನ್ನ ಬೆಳಗಲಿ: ಏ.30., ರನ್ನ ಬೆಳಗಲಿಯ ಎಲ್ಲ ಮತಗಟ್ಟೆಗಳಲ್ಲಿ ರವಿವಾರ ದಂದು ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ ಜಿಲ್ಲಾಡಳಿತ, ತಾಲೂಕ ಆಡಳಿತ, ಪಟ್ಟಣ ಪಂಚಾಯತ್ ಕಾರ್ಯಾಲಯ ರನ್ನ ಬೆಳಗಲಿ ಆಶ್ರಯದಲ್ಲಿ ಮತದಾನ ಜಾಗೃತಿಯ ನಿಮಿತ್ಯ &quoಣ;ಮತದಾನ ಜಾಗೃತಿಯ ಧ್ವಜಾರೋಹಣ ಜರುಗಿದವು.
ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಮತದಾನ ಜಾಗೃತಿಯ ಧ್ವಜಾರೋಹಣ ನೆರವೇರಿಸಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ಎನ್.ಎ. ಲಮಾಣಿ ರವರು ಮತಗಟ್ಟೆಗಳನ್ನು ಹೊಂದಿರುವ ಪ್ರತಿ ಶಾಲಾ ಆವರಣದಲ್ಲಿ ಹಾಗೂ ಗ್ರಾಮ ಚವಡಿಗಳಲ್ಲಿ ಚುನಾವಣೆ ದಿನಾಂಕವಾದ ೦೭/೦೫/೨೦೨೪ರ ವರೆಗೆ ಈ ಮತದಾನ ಜಾಗೃತಿಯ ಧ್ವಜಗಳು ನಿರಂತರ ಧ್ವಜ ಸ್ತಂಭದಲ್ಲಿ ಹಾರಾಡುತ್ತಿರುತ್ತವೆ.
ಈಗಾಗಲೇ ಎಲ್ಲಾ ಮತಗಟ್ಟೆಗಳಿಗೆ ವರ್ಲಿ ಆರ್ಟ್ ಮೂಲಕ ಸಿಂಗಾರ ಗೊಳಿಸಲಾಗಿದೆ, ಅತಿ ಹೆಚ್ಚು ಮಹಿಳೆಯರನ್ನು ಹೊಂದಿರುವ ಮತಗಟ್ಟೆಗಳನ್ನು &quoಣ;ಪಿಂಕ್ ಮತಗಟ್ಟೆ&quoಣ; ಗಳನ್ನಾಗಿ ಪರಿವರ್ತಿಸಲಾಗಿದೆ. ಚುನಾವಣೆ ಪ್ರಾಧಿಕಾರ ನೀಡಿರುವ ಕಾರ್ಯಕ್ರಮಗಳ ಪಟ್ಟಿಗೆ ಅನುಗುಣವಾಗಿ ಮತದಾನದ ಜಾಗೃತಿಯ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬರಲಾಗಿದೆ ಎಲ್ಲಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಇಲಾಖೆ, ಮತ್ತು ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು ನೂರಕ್ಕೆ ನೂರಷ್ಟು ರನ್ನ ಬೆಳಗಲಿ ಮತದಾನ ಆಗಲಿ ಎಂದು ಹೇಳುವುದರ ಜೊತೆಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆರ್.ಎ.ತಳವಾರ, ಗ್ರಾಮ ಆಡಳಿತ ಕಾರ್ಯಾಲಯದಲ್ಲಿ ಪಿ.ಡಿ. ನಾಗನೂರ, ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಶಿಕಲಾ ಕಠಾರೆ, ಜನತಾ ಪ್ಲಾಟಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೇವಣಸಿದ್ಧ ನಾರೋಗೋಳ ಪ್ರಮುಖರು ಮತದಾನ ಜಾಗೃತಿಯ ಧ್ವಜಾರೋಹಣ ನೆರವೇರಿಸಿದರು.
ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ, ಗ್ರಾಮ ಆಡಳಿತ ಕಾರ್ಯಾಲಯದ ಸಿಬ್ಬಂದಿಆದ ಬಾಳಪ್ಪ ಹೊಸೂರ. ಅಂಗನವಾಡಿ ಕಾರ್ಯಕರ್ತೆಯರಾದ ದೀಪಾ ವಜ್ರಮಟ್ಟಿ, ಭಾರತಿ ರಾಮದುರ್ಗ, ಪವಿತ್ರಾ ಸಮೀರ, ಸುಜಾತ ದೊಡಹಟ್ಟಿ, ಗೀತಾ ಜೋಶಿ, ಹೇಮಾ ಗಾಡವಿ, ಸವಿತಾ ಕ್ವಾರೆಪ್ಪಗೋಳ, ಭಾರತಿ ದಾವಸ್ಕರ, ತನುಜಾದಾತರ ಪಟ್ಟಣ ಪಂಚಾಯತ್ ಸಿಬ್ಬಂದಿಯವರಾದ ಎಸ್. ಬಿ. ಚೌದ್ರಿ, ಸಚಿನ್ ಕಾಸರ,ರಾಜು ಮುಗಳಖೋಡ, ಅಲ್ಲಪ್ಪ ದೋಬಸಿ, ಗಿರೀಶ್ ಮೇತ್ರಿ, ಜಗ್ಗು ಕಟ್ಟಿಕಾರ, ಕೃಷ್ಣಾ ಮೇತ್ರಿ, ಪರಸು ಗಸ್ತಿ, ವಿಜಯ ಹಾದಿಮನಿ,
ಮೀನಾಕ್ಷಿ ದೊಡಮನಿ, ಸಕ್ಕುಬಾಯಿ ಹೊಸಮನಿ, ರುಕ್ಮವ್ವ ಬಾವಿಮನಿ, ನಾಗವ್ವ ಜೋಗಪ್ಪಗೋಳ, ಕಾಶವ್ವ ಸರಮಣಿ, ಬಂದವ್ವ ಸರಮನಿ ಮುಂತಾದವರು ಪಾಲ್ಗೊಂಡಿದ್ದರು.