ರನ್ನ ಬೆಳಗಲಿ,ಏ.24: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೇ.7 ರಂದು ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಲಾಯಿತು.
ಪಟ್ಟಣ ಪಂಚಾಯತ ನೇತೃತ್ವದಲ್ಲಿ ಪ್ರಥಮ ದರ್ಜೆ ಸಹಾಯಕರಾದ ಪರಶುರಾಮ ನಾಗನೂರ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಮತದಾನ ಪ್ರಕ್ರಿಯೆಯ ಕರಪತ್ರಗಳನ್ನು ನೀಡಿ ಸಾಂವಿಧಾನಿಕ ಹಕ್ಕು ಚಲಾಯಿಸುವಂತೆ ವಿನಂತಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕನ್ನು ಹೊಂದಿದ್ದಾನೆ. ಸಾಂವಿಧಾನಿಕ ನಿಯಮಾನುಸಾರ ಮತ ಚಲಾಯಿಸಿ ದೇಶದ ಭದ್ರತೆಗೆ ಕೈ ಜೋಡಿಸಿ ಎಂದು ಅಧಿಕಾರಿ ಜನರಲ್ಲಿ ಮನವಿ ಮಾಡಿಕೊಂಡರು.
ಈ ಒಂದು ಕಾರ್ಯದಲ್ಲಿ ವಸೂಲಿ ಸಹಾಯಕರಾದ ಎಸ್. ಬಿ. ಚೌದ್ರಿ , ಗಿರೀಶ ಮೇತ್ರಿ, ರಾಮಣ್ಣ ಹುನ್ನೂರ, ಪುಟ್ಟು ದೊಡಮನಿ, ಪುಂಡಲಿಕ ಗಿರಲಗ್ಗಿ, ಮೋಹನ ಮೇತ್ರಿ, ತಮ್ಮಣ್ಣ ಹಿರಲಕ್ಕಿ, ಕೃ? ಮೇತ್ರಿ, ಅಭಯ್ ಕಾಂಬಳೆ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.