ಮತದಾರರ ಸಹಾಯವಾಣಿ ಆಪ್ ಕ್ರಾಂತಿಕಾರಕ ವಿಧಾನ: ಚುನವಾಣಾ ಸಂಬಂಧಿತ ಸೇವೆಗಳ ಬಗ್ಗೆ ಮಾಹಿತಿ

Ravi Talawar
ಮತದಾರರ ಸಹಾಯವಾಣಿ ಆಪ್ ಕ್ರಾಂತಿಕಾರಕ ವಿಧಾನ: ಚುನವಾಣಾ ಸಂಬಂಧಿತ ಸೇವೆಗಳ ಬಗ್ಗೆ ಮಾಹಿತಿ
WhatsApp Group Join Now
Telegram Group Join Now

ಬೆಂಗಳೂರು, ಮಾ, 26; ಮತದಾರರ ಅನುಕೂಲಕ್ಕಾಗಿ ಕಲ್ಪಿಸಲಾಗಿರುವ ಹಲವು ಸೇವೆಗಳ ಪೈಕಿ ಮತದಾರರ ಸಹಾಯವಾಣಿ ಆಪ್ ಕ್ರಾಂತಿಕಾರಕ ವಿಧಾನವಾಗಿದೆ. ಪ್ರಸ್ತುತ ದೇಶದಲ್ಲಿ ಮತದಾನದ ಹಕ್ಕನ್ನು ೧೮ ವರ್ಷ ತುಂಬಿದ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಮೊದಲ ಬಾರಿಗೆ ಮತದಾನ ಮಾಡುವ ನವಮತದಾರರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸುವುದು, ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ವಿವರಗಳನ್ನು ಕಾಲಕಾಲಕ್ಕೆ ಅಗತ್ಯವಿರುವಂತೆ ಬದಲಾಯಿಸುವುದು, ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರನ್ನು ಹುಡುಕುವುದು ಹಾಗೂ ಲಭ್ಯವಿರುವ ಇತರ ಚುನವಾಣಾ ಸಂಬಂಧಿತ ಸೇವೆಗಳ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಮತದಾರರ ಸಹಾಯವಾಣಿ ಆಪ್ ನೆರವಾಗಲಿದೆ.

ಒಟ್ಟಿನಲ್ಲಿ ಹೇಳುವುದಾದರೆ, ಪ್ರತಿಯೊಬ್ಬ ಅರ್ಹ ಮತದಾರರಿಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದನ್ನು ಸುಗಮ ಮತ್ತು ಸರಳಗೊಳಿಸುವ ಮೂಲಕ ಭಾರತದ ಚುನವಾಣಾ ಆಯೋಗದೊಂದಿಗೆ ದೇಶದ ನಾಗರಿಕನ್ನು ಒಗ್ಗೂಡಿಸುವ ಪ್ರಕ್ರಿಯೆಯನ್ನು ಈ ಆಪ್ ನಿರ್ವಹಿಸುತ್ತಿದೆ. ಇದಲ್ಲದೇ, ನಮ್ಮ ಮತದಾರರ ಗುರುತಿನ ಚೀಟಿಯ ಡಿಟಿಟಲ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು, ಚುನಾವಣೆ ಅಕ್ರಮಗಳ ಬಗ್ಗೆ ಆಯೋಗಕ್ಕೆ ದೂರುಗಳನ್ನು ದಾಖಲಿಸುವುದು, ಚುನಾವಣೆಗೆ ಸಂಬಂಧಿಸಿದ ಹೊಸ ಹೊಸ ಸುದ್ದಿ ಮತ್ತು ಮಾಹಿತಿಯನ್ನು ಪಡೆಯಲೂ ಸಹ ಮತದಾರರ ಸಹಾಯವಾಣಿ ಆಪ್ ನೆರವಾಗುತ್ತದೆ.

ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್ (ವಿ.ಎಸ್.ಎ): ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸುವುದು, ಮತದಾರರ ಕಾರ್ಡ್‌ಗೆ ತಿದ್ದುಪಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು, ಮತಗಟ್ಟೆ, ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರದ ವಿವರಗಳನ್ನು ವೀಕ್ಷಿಸುವುದು ಮತ್ತು ಸಂಪರ್ಕವನ್ನು ಪಡೆಯುವುದು ಮುಂತಾದ ವಿವಿಧ ಸೇವೆಗಳನ್ನು ನಾಗರಿಕರು ಪಡೆಯಬಹುದು ಮತ್ತು ಪ್ರವೇಶಿಸಬಹುದು. ಇತರೆ ಸೇವೆಗಳ ಜೊತೆಗೆ ಬೂತ್ ಮಟ್ಟದ ಅಧಿಕಾರಿ, ಚುನಾವಣಾ ನೋಂದಣಿ ಅಧಿಕಾರಿಯ ವಿವರಗಳು ದೊರೆಯಲಿವೆ. ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ.

WhatsApp Group Join Now
Telegram Group Join Now
Share This Article