ಸಂಕೇಶ್ವರ,30: ರಾಜ್ಯ ವಿಧಾನಸೌದದಲ್ಲಿ ಪಾಕಿಸ್ತಾನಿ ಜೈ ಎನ್ನುವವರಿಗೆ ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರವು, ಹಿಂದುಗಳ ಕೊಲೆಯಾದರೆ,
ಹಿಂದುಗಳ ಮೇಲೆ ಹಲ್ಲೆಯಾದರೆ ಅವರ ರಕ್ಷಣೆ ಮಾಡುವುದಿಲ್ಲ. ಬದಲಾಗಿ ಮುಸ್ಲಿಂರ ರಕ್ಷಣೆಗೆ ನಿಲ್ಲುತ್ತದೆ. ಈ ದೇಶದಲ್ಲಿ ಹಿಂದುಗಳು ಸುರಕ್ಷಿತವಾಗಿ
ಉಳಿಯಬೇಕಾದರೆ ಎಲ್ಲ ಹಿಂದುಗಳು ಬಿ.ಜೆ.ಪಿ ಯನ್ನು ಬೆಂಬಲಿಸಬೇಕೆಂದು ಬಿ.ಜೆ.ಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅವರು ಸಂಕೇಶ್ವರದಲ್ಲಿಂದು ರಾತ್ರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಪರ ಪ್ರಚಾರ ಭಾಷಣ ಮಾಡಿದರು. ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯು ಚಿಂತಾಜನಕವಾಗಿದ್ದು ರಾಜ್ಯವು ಅಧೋಗತಿಗೆ ಹೋಗುತ್ತಿದೆ.ರಾಜ್ಯದ್ಯಾಂತ ವಿವಿಧ ಅಭಿವೃದ್ದಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಅವರ ಬಿಲ್ಲುಗಳನ್ನು ಸಂದಾಯ ಮಾಡದೆ ಸತಾಯಿಸಲಾಗುತ್ತಿದೆ. ತಿಂಗಳಿಗೆ ೧೦% ಬಡ್ಡಿ ದರದಲ್ಲಿ ಸಾಲ ತೆಗೆದಿರುವ ಗುತ್ತಿಗೆದಾರರು ಸಾಲದ ಬಡ್ಡಿಯನ್ನೂ ಸಹಿತ ಮರುಪಾವತಿ ಮಾಡಲಾರದೆ ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದ್ದಾರೆ. ರಾಜ್ಯಾದ್ಯಂತ ಅಭಿವೃದ್ದಿ ಕೆಲಸಗಳು
ಸಂಪೂರ್ಣವಾಗಿ ಸ್ಥಗಿತಗೊಂಡಿವೆ.ನಾನಾ ರೀತಿಯ ಕಂದಾಯ ಶುಲ್ಕಗಳನ್ನು ಹೆಚ್ಚು ಮಾಡಿ ಜನರ ತೆರಿಗೆ ಹಣದಲ್ಲಿ ಗ್ಯಾ ರಂಟಿ ಯೋಜನೆಗಳನ್ನು ನಡೆಸುತ್ತಿರುವ
ಸರ್ಕಾರವು ಒಂದು ಕೈಯಿಂದ ರಾಜ್ಯದ ಜನರಿಂದಲೇ ಹಣ ಕಿತ್ತುಕೊಂಡು ಮತ್ತೊಂದು ಕೈಯಿಂದ ಜನರಿಗೆ ಗ್ಯಾರಂಟಿಗಳ ಪ್ರಯೋಜನ ನೀಡುತ್ತಿದೆ ಎಂದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಿದ್ದರೂ ಸಹಿತ ಕಾಂಗ್ರೆಸ್ ಪಕ್ಷವು ಸಾಮಾನ್ಯ ವರ್ಗದ ತನ್ನ ಪಕ್ಷದ ಟಿಕೆಟ ಆಕಾಂಕ್ಷಿಗಳಿಗೆ ಟಿಕೆಟ
ನೀಡದೆ ಜಾರಕಿಹೋಳಿ ಕುಟುಂಬದ ಸಾಮ್ರಾಜ್ಯವು ವಿಸ್ತರಣೆಯಾಗುವಂತೆ ಸಚಿವರ ಮಗಳಿಗೆ ಟಿಕೆಟ ನೀಡಿದೆ.
ಇಂಥವರನ್ನು ಬೆಳಗಾವಿ ಜಿಲ್ಲೆಯ ಮತದಾರರು ಬೆಂಬಲಿಸಿದರೆ ಭವಿಷ್ಯದಲ್ಲಿ ಜಿಲ್ಲೆಯ ಎಲ್ಲ ೧೮ ವಿಧಾನಸಭಾ ಕ್ಷೇತ್ರಗಳು ಆ ಜಾರಕಿಹೋಳಿ ಕುಟುಂಬದ ಪಾಲಾಗಲಿವೆ. ಹಿಂದು ಎಂದರೆ ಅಶ್ಲೀಲ ಎಂದು ಅರ್ಥೈಸಿದ್ದ ಸಚಿವ ಸತೀಶ ಜಾರಕೊಹೋಳಿ ಅವರು ಇಂದು ಹಿಂದು ದೇವಾಲಯಗಳಿಗೆ, ಮಠ-ಮಾನ್ಯಗಳಿಗೆ ಹೋಗಿ ಮತ ಯಾಚಿಸುತ್ತಿರುವುದನ್ನು ಮತದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಮಾತನಾಡಿ, ಕಳೆದ ೧೦ ವರ್ಷಗಳ ಬಿ.ಜೆ.ಪಿ ಆಡಳಿತಾವಧಿಯಲ್ಲಿ ದೇಶದ ಎಲ್ಲೆಡೆ ಉತ್ತಮ ರಸ್ತೆ ಸಂಪರ್ಕ, ರೈಲುಗಳ ಓಡಾಟ, ರೈಲು ನಿಲ್ದಾಣಗಳ ಅಭಿವೃದ್ದಿ, ವಿಮಾನ ನಿಲ್ದಾಣಗಳ ಅಭಿವೃದ್ದಿ, ಬಡವರಿಗೆ ಉಚಿತ ಅಡಿಗೆ ಅನಿಲ ಸಂಪರ್ಕ, ಮನೆ- ಮನೆಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಆಯುಷ್ಯಮಾನ್ ಭಾರತ ಯೋಜನೆಯಲ್ಲಿ ಉಚಿತ ಆರೋಗ್ಯ ಸೌಲಭ್ಯವನ್ನು ನೀಡಲಾಗಿದ್ದು ಇವೆಲ್ಲವುಗಳನ್ನು ಗಮನಿಸಿ ಬಿ.ಜೆ.ಪಿ ಗೆ ಮತ ನೀಡಬೇಕು ಎಂದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ಮಾತನಾಡಿ, ಕಳೆದ ೫ ವರ್ಷದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ೮೮೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಕೊಗನೊಳ್ಳಿಯಿಂದ ಬೆಳಗಾವಿವರೆಗೆ ಹಾಗೂ ವಿಜಾಪೂರದಿಂದ ಗೋಟುರುವರೆಗೆ ರಸ್ತೆ ಅಗಲೀಕರಣ ಕಾಮಗಾರಿಯು
ಭರದಿಂದ ನಡೆದಿದೆ. ಇದರಿಂದ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ವೃದ್ದಿಯಾಗಲಿವೆ. ಬಡವರಿಗೆ ಉಚಿತ ಅಡಿಗೆ ಅನಿಲ ಸಂಪರ್ಕ,ಮನೆ-ಮನೆಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಆಯುಷ್ಯಮಾನ್ ಭಾರತ ಯೋಜನೆಯಲ್ಲಿ ಉಚಿತ ಆರೋಗ್ಯ ಸೌಲಭ್ಯವನ್ನು ನೀಡಲಾಗಿದ್ದು ಇವೆಲ್ಲವುಗಳನ್ನು ವಿಶ್ಲೇಷಿಸಿ ಬಿ.ಜೆ.ಪಿ ಗೆ ಮತ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹುಕ್ಕೇರಿ ಶಾಸಕ ನಿಖಿಲ ಕತ್ತಿ ಅವರು ಮಾತನಾಡಿ,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹುಕ್ಕೇರಿ ಮತಕ್ಷೇತ್ರದಲ್ಲಿ ಬಿ.ಜೆ.ಪಿಗೆ ಕಳೆದ ಬಾರಿಗಿಂತ ಹೆಚ್ಚಿನ ಲೀಡ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಬಿ.ಜೆ.ಪಿ ಧುರೀಣರಾದ ರಾಜೇಂದ್ರ ಪಾಟೀಲ,ಗಜಾನನ ಕ್ವಳ್ಳಿ,ಚಿಕ್ಕೋಡಿ ವಿಭಾಗದ ಬಿ.ಜೆ.ಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ,ಗುರುರಾಜ
ಕುಲಕರ್ಣಿ, ರಾಚಯ್ಯಾ ಹೀರೆಮಠ, ಪವನ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.