ಢವಳೇಶ್ವರ ಗ್ರಾಮದಲ್ಲಿ ಅದ್ದೂರಿ ವಿವೇಕಾನಂದರ ಜಯಂತಿ
ವಿವೇಕ ಪುರಸ್ಕಾರ ಪಡೆದ ಶಿಕ್ಷಕ ಶ್ರೀಕಾಂತ ಕೊಕ್ಕಳಕಿ.
ಮಹಾಲಿಂಗಪೂರ:ಜ.೧೩.,ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದ. ಸ್ವಾಮಿ ವಿವೇಕಾನಂದ ಪ್ರತಿಷ್ಟಾನ ಆಶ್ರಯದಲ್ಲಿ.ಗ್ರಾಮ ಪಂಚಾಯತ್ ಗ್ರಂಥಾಲಯ ಸಭಾ ಭವನದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ವಿವೇಕ ಪುರಸ್ಕಾರ ಪ್ರಶಸ್ತಿ ಕಾರ್ಯಕ್ರಮ ಜರಗಿತು.
ವಕ್ತಾರ ಶ್ರೀನಿವಾಸ ಪಾಟೀಲ ರಾಷ್ಟೋತ್ಥಾನ ಪರಿಷತ್ತಿನ ಸಂಯೋಜಕ ಮಾತನಾಡಿ, ಭಾರತದ ಮೂಲ ಶಿಕ್ಷಣದ ತಳಹದಿಯನ್ನು ಭಿನ್ನ ಗೊಳಿಸಿದ ಬ್ರಿಟೀಷರು,ಕುಟುಂಬದ ಮೌಲ್ಯಕ್ಕೆ ಧಕ್ಕೆ ತಂದರು, ವಿವೇಕಾನಂದರ ಉದಯ ದಿಂದ ಭಾರತ ಮತ್ತೆ ತನ್ನ ಮೌಲ್ಯವನ್ನು ಪಡೆದು, ವಿಶ್ವಕ್ಕೆ ಭಾರತೀಯರ ಕೊಡುಗೆಯನ್ನ ಪರಿಚಯಿಸಿದೆ ಎಂದು ತಿಳಿಸಿದರು.
ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಪತ್ರಕರ್ತ, ವಿವೇಕಾನಂದರ ಉತ್ಸವಗಳು ಆಚರಣೆಗೆ ಸೀಮಿತವಾಗಬಾರದು, ವಿವೇಕಾನಂದರ ವಿವೇಚನೆಗಳು ನಮ್ಮೆಲ್ಲರ ನಿತ್ಯ ಜೀವನದಲ್ಲಿ ಬೆರೆಯಬೇಕು. ವೇದ,ಉಪನಿ?ತ್ತಿನಲ್ಲಿ ಅಡಗಿದ ಯೋಗ ಜ್ಞಾನವನ್ನು, ಸರ್ವರಿಗೂ ಸರಳವಾಗಿ ತಿಳಿವಂತೆ ಭಕ್ತಿ,ಜ್ಞಾನ,ಕರ್ಮ ಮತ್ತು ರಾಜಯೋಗಗಳ ಗ್ರಂಥ ರಚಿಸಿ.ಯುವ ಜನತೆಗೆ ಪ್ರೇರಣೆ ನೀಡಿದ್ದಾರೆ.ನಿತ್ಯ ಧ್ಯಾನ ಮಾಡಿ ಶೈಕ್ಷಣಿಕ ಸಾಧನೆಗೆ ಬದ್ಧರಾಗಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರತಿ ವ? ಕೂಡ ಮಾಡುವ, “ವಿವೇಕ ಪುರಸ್ಕಾರ”ವನ್ನು ಗ್ರಾಮದ ಹಿರಿಯ ಶಿಕ್ಷಕರಾದ ಶ್ರೀಕಾಂತ ಕೊಕ್ಕಳಕಿ ಅವರಿಗೆ ವೇದಿಕೆಯ ಗಣ್ಯರ ಸಮ್ಮುಖದಲ್ಲಿ ನೀಡಿ ಸನ್ಮಾನಿಸಿದರು.
ಮಹಾಲಿಂಗ ಪಟ್ಟಣಶೆಟ್ಟಿ ಪ್ರತಿ?ನದ ಅಧ್ಯಕ್ಷ ಮಾತನಾಡಿ, ನಿರಂತರ ೧೫ ವ?ಗಳಿಂದ ನಮ್ಮೂರಿನ ಎಲ್ಲಾ ಹಿರಿಯರ ಸಹಾಯ ಸಹಕಾರದಡಿಯಲ್ಲಿ. ಈ ಕಾರ್ಯಕ್ರಮ ಉತ್ತಮಗೊಳ್ಳುತ್ತಾ ಬಂದಿದೆ.ಗ್ರಾಮದ ಎಲ್ಲಾ ವಿದ್ಯಾರ್ಥಿಗಳಿಗೆ,ತರಗತಿ ಅನುಗುಣವಾಗಿ ವಿವೇಕಾನಂದರ ಪುಸ್ತಕಗಳನ್ನು ನೀಡಲಾಗಿದೆ.ಅವುಗಳನ್ನ ಓದಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಗ್ರಾ.ಪಂ.ಅಧ್ಯಕ್ಷೆ ಪ್ರಭಾವತಿ ಶಿವಪೂರ,ಪಿಡಿಒ ಸಿದ್ರಾಮೇಶ ಕುಂದರಗಿಮಠ,ಮಾರುತಿ ಹವಾಲ್ದಾರ,ಎಚ್ ವಾಯ್ ಭಜಂತ್ರಿ,ಡಿ ಎಮ್ ಮಹಾಜನ, ಸಿ ವ್ಹಿ ದಾದನಟ್ಟಿ,ಸಂಗಮೇಶ ನಾರಗೌಡ,ಸತೀಶ ಪಟ್ಟಣಶೆಟ್ಟಿ, ಶ್ರೀಕಾಂತ ಹಿರೇಮಠ, ಸಹದೇವ ಪಟ್ಟಣಶೆಟ್ಟಿ,ರೇವಣೇಶ ಬ್ಯಾಳಿ,ಕಾಂತೇಶ ಪಟ್ಟಣಶೆಟ್ಟಿ,ಮಹಾಂತೇಶ ಅಂಬಿ,ಲಕ್ಷ್ಮಣ ಪಟ್ಟಣಶೆಟ್ಟಿ,ಮಹೇಶ ಪಾಟೀಲ,ವೆಂಕಣ್ಣ ಖಿಲಾರಿ,ಶಂಕರ ಪಾಟೀಲ,ರಮೇಶ ಪಟ್ಟಣಶೆಟ್ಟಿ, ಮಲ್ಲಯ್ಯ ಮಠದ, ಮಹಾಂತೇಶ ನಾವಿ,ಮಹೇಶ ಹವಾಲ್ದಾರ,ಶ್ರೀಮಂತ ಪಟ್ಟಣಶೆಟ್ಟಿ,ಶ್ರೀಕಾಂತ ದೇಶಪಾಂಡೆ,ಆನಂದ ಪಟ್ಟಣಶೆಟ್ಟಿ ಮತ್ತು ಗ್ರಾಮದ ಮುಖಂಡರು,ಯುವ ಬ್ರಿಗೇಡ ಪದಾಧಿಕಾರಿಗಳು,ಸ್ಥಳೀಯ ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,


