ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಡಾ. ಪ್ರಭಾಕರ ಕೋರೆ ಭೇಟಿ

Ravi Talawar
ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಡಾ. ಪ್ರಭಾಕರ ಕೋರೆ ಭೇಟಿ
WhatsApp Group Join Now
Telegram Group Join Now

ಬೆಳಗಾವಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ಪ್ರಭಾಕರ ಕೋರೆಯವರು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರೊಂದಿಗೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಪ್ರಾತ್ಯಕ್ಷಿಕೆ ತಾಕುಗಳನ್ನು ವೀಕ್ಷಿಸಿದರು.

ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಮೂಲ ಸೌರ‍್ಯಗಳಾದ ರೈತ ಭವನ, ಸಿಬ್ಬಂದಿ ವಸತಿ ಗೃಹಗಳ ಉಪಯೋಗ ಕುರಿತು ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ಬಾಳೆ, ಡ್ರಾö್ಯಗನ್ ಬೆಳೆ, ನೈಸರ್ಗಿಕ ಕೃಷಿ ಘಟಕ, ತರಕಾರಿ ಬೆಳೆಗಳಾದ ಟೊಮ್ಯಾಟೊ, ಬದನೆ, ಮೆಣಸಿನಕಾಯಿ, ಹಣ್ಣು ಬೆಳೆಗಳಾದ ಡ್ರಾö್ಯಗನ್, ಕಲ್ಲಂಗಡಿ, ಕಬ್ಬು ಬೀಜೋತ್ಪಾದನೆ ತಾಕು, ಕೃಷಿ ಹೊಂಡ, ತೋಟಪಟ್ಟಿ ಬೆಳೆಗಳಾದ ಗೊಡಂಬಿ, ನೇರಳೆ, ಮಾವು, ತಾಕುಗಳಿಗೂ ಭೇಟಿ ನೀಡಿ ಬೃಹತ್ ಹನಿ ನೀರಾವರಿ ಘಟಕದ ಕಾರ್ಯಕ್ಷಮತೆ ಕುರಿತು ಪರಿಶೀಲಿಸಿದರು.

ಹೈನುಗಾರಿಕೆ ಘಟಕ, ಹಸುಗಳ ತಳಿಗಳ ಸಾಮರ್ಥ್ಯ ಅಭಿವೃದ್ಧಿ ಕುರಿತು ಚರ್ಚಿಸಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ಪ್ರಾತ್ಯಕ್ಷಿಕೆ ಘಟಕಗಳು ಮಾದರಿಯಾಗಿವೆ ಎಂದರು. ಈ ನಿಟ್ಟಿನಲ್ಲಿ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ ಬಿ. ಆರ್. ಪಾಟೀಲ ಅವರು ಕೈಗೊಂಡ ಕ್ರಮಗಳ ಕುರಿತು ಸಂತೋಷ ವ್ಯಕ್ತಪಡಿಸಿದರು.

ನಂತರ ಹವಾಮಾನದ ವೈಪರೀತ್ಯದಿಂದಾಗಿ ಕೃಷಿ ಉತ್ಪಾದನೆಯಲ್ಲಿ ಅನಿಶ್ಚಿತತೆಯಿಂದ ಇಳುವರಿಯಲ್ಲಿ ಏರುಪೇರಾಗುತ್ತಿದ್ದು ಇದರಿಂದ ರೈತರಿಗೆ ಆಗುವ ಆರ್ಥಿಕ ಸಂಕಷ್ಟದ ಕುರಿತು ಆತಂಕ ವ್ಯಕ್ತಪಡಿಸಿದರು. ಈ ದಿಶೆಯಲ್ಲಿ ರೈತರಿಗೆ ಹವಾಮಾನ ಆಧಾರಿತ ಸಲಹೆಗಳನ್ನು ಕಾಲಕಾಲಕ್ಕೆ ನೀಡುವಂತೆ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಿಜ್ಞಾನಿಗಳಿಗೆ ಸಲಹೆ ನೀಡಿದರು.

ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ಹಾಗೂ ವಿಜ್ಞಾನಿಗಳು ವಿವಿಧ ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಕೈಗೊಂಡ ತಂತ್ರಜ್ಞಾನದ ಮಾಹಿತಿಯನ್ನು ವಿವರಿಸಿದರು.

ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಿ. ಎಸ್. ತಟವಟಿ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ ಬಿ. ಆರ್. ಪಾಟೀಲ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳಾದಡಾ. ವ್ಹಿ. ಎಸ್. ಸಾಧುನವರ, ಶ್ರೀ ಎಸ್. ಸಿ. ಮೆಟಗುಡ್ಡ, ಶ್ರೀ ಮಹಾಂತೇಶ ಕವಟಗಿಮಠ, ಶ್ರೀ ಅನಿಲ ವ್ಹಿ. ಪಟ್ಟೇದ ಹಾಗೂ ಡಾ. ವ್ಹಿ. ಆಯ್. ಪಾಟೀಲ ಭೇಟಿಯಲ್ಲಿ ಉಪಸ್ಥಿತರಿದ್ದು ಪ್ರಗತಿ ಪರಿಶೀಲನೆ ನಡೆಸಿದರು.

ಭೇಟಿಯಲ್ಲಿ ಕಹೇರ್‌ನ ಕುಲಪತಿಗಳಾದ ಡಾ. ನೀತಿನ ಗಂಗನೆ, ಸಂಶೋಧನಾ ನಿರ್ದೇಶಕರಾದ ಡಾ. ಶಿವಪ್ರಸಾದ ಗೌಡರ, ಸಂಶೋಧನಾ ಸಲಹೆಗಾರರಾದ ಪದ್ಮಶ್ರೀ ಡಾ. ಮಾಧವ ಗೋಡಬೊಲೆ, ಕೆಎಲ್‌ಇ ಆಸ್ಪತ್ರೆ ನಿರ್ದೇಶಕರಾದ ಡಾ. ವ್ಹಿ. ಡಿ. ಪಾಟೀಲ ಹಾಗೂ ಅನಿವಾಸಿ ಭಾರತೀಯ ಶ್ರೀ ಮೊಹಮ್ಮದ ಫಾರುಕ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article