ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಎಫ್ ಎಲ್ ಎನ್ ಕಲಿಕಾ ಪ್ರಗತಿ ಪರಿಶೀಲಿಸಿ ಇಂಡಿ ಬಿಇಓ ಶ್ರೀಮತಿ ಎಸ್ ಎಸ್ ಮುಜಾವರ ಮಾತನಾಡಿದರು.

Abushama Hawaldar
ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಎಫ್ ಎಲ್ ಎನ್ ಕಲಿಕಾ ಪ್ರಗತಿ ಪರಿಶೀಲಿಸಿ ಇಂಡಿ ಬಿಇಓ ಶ್ರೀಮತಿ ಎಸ್ ಎಸ್ ಮುಜಾವರ ಮಾತನಾಡಿದರು.
WhatsApp Group Join Now
Telegram Group Join Now

ಇಂಡಿ: ಪ್ರತಿ ಮಗುವು ಕೂಡ ಸ್ಪಷ್ಟವಾಗಿ ಓದಲು, ಬರೆಯಲು ಬರುವಂತೆ ವಿವಿಧ ಬೋಧನಾ ತಂತ್ರಗಳನ್ನು ಶಿಕ್ಷಕರು ರೂಢಿಮಾಡಿಕೊಂಡು ಎಫ್ ಎಲ್ ಎನ್ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಇಂಡಿ ಬಿಇಓ ಶ್ರೀಮತಿ ಎಸ್ ಎಸ್ ಮುಜಾವರ ಹೇಳಿದರು.

ಅವರು ಬುಧವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಎಫ್ ಎಲ್ ಎನ್ ಕಲಿಕಾ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಎಫ್ ಎಲ್ ಎನ್ ಚಟುವಟಿಕೆಗಳು ಮಕ್ಕಳಲ್ಲಿ ಕಲಿಕೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ. ಈ ಚಟುವಟಿಕೆಗಳು ಮಕ್ಕಳ ಓದುವಿಕೆ ಮತ್ತು ಬರೆಯುವಿಕೆಯನ್ನು ಸುಲಭವಾಗಿಸುತ್ತವೆ. ಹಾಗಾಗಿ ಮಕ್ಕಳಿಗೆ ಚಟುವಟಿಕೆ ಮೂಲಕ ಕಲಿಕೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಮಾತನಾಡಿ, ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಕಲಿಕಾ ಅಡಿಪಾಯ ಹಾಕಿಕೊಳ್ಳಲು ಎಫ್ ಎಲ್ ಎನ್ ಚಟುವಟಿಕೆಗಳು ಸಹಕಾರಿಯಾಗಿವೆ. ಎಫ್ ಎಲ್ ಎನ್ ಚಟುವಟಿಕೆಗಳನ್ನು ಶಾಲೆ ಮತ್ತು ಮನೆಯಲ್ಲಿ ರೂಢಿಸಿಕೊಂಡು, ಮಕ್ಕಳು ಉತ್ತಮ ಕಲಿಕಾ ಅನುಭವ ಪಡೆಯಬೇಕು ಎಂದು ತಿಳಿಸಿದರು.
ಬಿ ಆರ್ ಪಿ ಅಧಿಕಾರಿ ಅಲ್ಲಾಭಕ್ಷ ಚೌಧರಿ ಹಾಗೂ ಮೂರು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article