ಭಾರತವನ್ನು ವಿಶ್ವ ಮಟ್ಟದಲ್ಲಿ ಗೌರವಿಸುವಂತೆ ಮಾಡಿದ ಮೋದಿ ಮತ್ತೆ ಪ್ರಧಾನಿಯಾಗಬೇಕು: ವಿಶ್ವೇಶ್ವರ ಕಾಗೇರಿ

Ravi Talawar
ಭಾರತವನ್ನು ವಿಶ್ವ ಮಟ್ಟದಲ್ಲಿ ಗೌರವಿಸುವಂತೆ ಮಾಡಿದ ಮೋದಿ ಮತ್ತೆ ಪ್ರಧಾನಿಯಾಗಬೇಕು: ವಿಶ್ವೇಶ್ವರ ಕಾಗೇರಿ
WhatsApp Group Join Now
Telegram Group Join Now
ಎಂ.ಕೆ.ಹುಬ್ಬಳ್ಳಿ,ಏಪ್ರಿಲ್​ 03: ಜನರ ಆಶೋತ್ತರಗಳಿಗೆ ತಕ್ಕಂತೆ ಅನೇಕ ವಿನೂತನ ಜನಪರ  ಯೋಜನೆಗಳ‌ ಮೂಲಕ ಭಾರತ ದೇಶದ ಅಭಿವೃದ್ಧಿಗೆ ಶ್ರಮಿಸಿ, ಜಾಗತಿಕ ಮಟ್ಟದಲ್ಲಿ ಭಾರತವನ್ನು ಗೌರವಿಸುವಂತೆ ಪ್ರಗತಿ ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂದು ಉತ್ತರ ಕನ್ನಡ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ರಂಭಾಪುರಿ ವೀರಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ  ಕೆನರಾ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಾರ್ಥವಾಗಿ ಕರೆದಿದ್ದ ಬಿಜೆಪಿ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಮನೆಮನೆಗೆ ತೆರಳಿ ಮಾಹಿತಿ ನೀಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಸಿಎಂ ಸಿದ್ದರಾಮಯ್ಯ ಖುರ್ಚಿ ಯಾವಾಗ ಬಿಟ್ಟು ಕೊಡವರೆಂಬ ಚಿಂತೆ ಡಿ.ಕೆ.ಶಿವಕುಮಾರ ಅವರನ್ನು ಕಾಡುತ್ತಿದೆ. ಹೀಗಿರುವಾಗ ರಾಜ್ಯದ ಜನರ ಚಿಂತೆ ಅವರಲ್ಲಿ ಹೇಗೆ ಇರಲು ಸಾಧ್ಯ  ಎಂದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ  ಪ್ರಧಾನಿ ಮೋದಿಯವರು ಆರ್ಟಿಕಲ್ 370 ಹಿಂತೆಗೆದು ಒಂದೇ ಭಾರತ ಕಾನೂನು ಜಮ್ಮು ಕಾಶ್ಮೀರದಲ್ಲಿ ಜಾರಿಗೆ, ಬಡವರಿಗೆ ಉಜ್ವಲ ಗ್ಯಾಸ,ಜೆಜೆಎಂ ಕುಡಿಯುವ ನೀರಿನ ಯೋಜನೆ,ದೇಶದ ಸುರಕ್ಷತೆ,ಆರ್ಥಿಕತೆ,ರಾಮ ಮಂದಿರ ನಿರ್ಮಾಣ,ರೈಲು ನಿಲ್ದಾಣಗಳ ಉನ್ನತಿಕರಣ,ಸುಲಭ ವಿಮಾನ ಸಂಚಾರ ,ದೇಶ್ಯಾದ್ಯಂತ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಅಪಾರ ಸಾಧನೆ ಮಾಡಿ ಮೂರನೇ ಬಾರಿಗೆ ಪ್ರಧಾನಿ ಆಗುವದು ಖಚಿತ ಎಂದರು.
ಈ ಸಂದರ್ಭದಲ್ಲಿ  ಬಿಜೆಪಿ ಕಿತ್ತೂರು ಮಂಡಲ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಜೆಡಿಎಸ್ ಪಕ್ಷದ ಅಶ್ವಿನಿ ಪೂಜಾರ, ಜಿಪಂ ಮಾಜಿ ಸದಸ್ಯ ಬಿ.ಸಿ.ಪಾಟೀಲ, ಉಳವಪ್ಪ ಉಳಾಗಡ್ಡಿ, ಶ್ರೀಶೈಲ ತಿಗಡಿ, ಶಿದ್ರಾಮಯ್ಯ ಹಿರೇಮಠ, ಅಶೋಕ ಹಲಕಿ, ಮಹೇಶ ಹುದಲಿ, ಬಸನಗೌಡ ಪಾಟೀಲ, ಶಾಮಸುಂದರ ಶಿಲೇದಾರ, ಅದೃಶ್ಯಗೌಡ ಪಾಟೀಲ, ಅಪ್ಪಣ್ಣ ಪಾಗಾದ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು. ಬವರಾಜ ಡೂಗಮನವರ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ  ಬಿಜೆಪಿ ಸೇರಿದ ಬಿ.ಸಿ.ಪಾಟೀಲ:ರಂಗೇರಿರುವ ಲೋಕಸಭಾ ಚುನಾವಣೆ ಸಂದರ್ಭ ಜಿಪಂ‌ ಮಾಜಿ ಸದಸ್ಯ, ಈ ಹಿಂದೆ ಕಿತ್ತೂರು ವಿಧಾನಸಭೆ ಕೆಜೆಪಿ ಅಭ್ಯರ್ಥಿಯಾಗಿದ್ದ ಕಿತ್ತೂರು ತಾಲೂಕಿನ ತುರಮರಿ ಗ್ರಾಮದ ಬಿ.ಸಿ.ಪಾಟೀಲ ಸೋಮವಾರ ಕೆನರಾ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದರು.
WhatsApp Group Join Now
Telegram Group Join Now
Share This Article