ನೇಸರಗಿ , ಏಪ್ರಿಲ್ 15. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬೆಳೆಸಿ ದೇಶ ರಕ್ಷಣೆ, ದೇಶ ಅಭಿವೃದ್ಧಿ, ಸನಾತನ ಧರ್ಮ ರಕ್ಷಣೆ, ರಾಮ ಮಂದಿರ ನಿರ್ಮಾಣ,370 ಹಿಂತೆಗೆತ, ರಸ್ತೆ, ರೈಲು, ವಿಮಾನಯಾನ, ಜೆಜೆಮ್, ಕರೋನ್ ನಿರ್ಮೂಲನೆ, ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿಜಿಯವರು ಮೂರನೇ ಭಾರಿಗೆ ಪ್ರಧಿನಿಯಾಗುವದು ಬಹುಮುಖ್ಯವಾಗಿದೆ ಎಂದು ಉತ್ತರ ಕನ್ನಡ (ಕೆನರಾ ) ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ರವಿವಾರ ರಾತ್ರಿ ಲೋಕಸಭಾ ಚುನಾವಣಾ ಪ್ರಚಾರಾತ್ರವಾಗಿ ಗ್ರಾಮದ ಕರ್ನಾಟಕ ಚೌಕದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಇದು ಬಿಜೆಪಿ, ಕಾಂಗ್ರೆಸ್ ಪಕ್ಷದ ಚುನಾವಣೆ ಅಲ್ಲಾ ದೇಶದ ಅಳಿವು ಉಳಿವಿನ ಚುನಾವಣೆ ಶ್ರೀಲಂಕಾ, ಪಾಕಿಸ್ತಾನದ ಪರಿಸ್ಥಿತಿ ಬೇಡ ಎನ್ನುವ ಚುನಾವಣೆ, ದೇಶದ ಅಭಿವೃದ್ಧಿಯ ಚುನಾವಣೆ, ಬಿಜೆಪಿ ಆಡಳಿತ ಅವಧಿಯಲ್ಲಿ ಈ ಕ್ಷೇತ್ರಕ್ಕೆ 2600 ಕೋಟಿ ರೂಪಾಯಿಗಳನ್ನು ತಂದ ಮಹಾಂತೇಶ ದೊಡ್ಡಗೌಡರು ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಗ್ಯಾರಂಟಿ ಅತ್ತೆಗೆ ಬಂದರೆ ಸೊಸೆಗೆ ಇಲ್ಲ, ಸೊಸೆಗೆ ಬಂದರೆ ಅತ್ತೆಗೆ ಇಲ್ಲ, ವಿದ್ಯಾರ್ಥಿಗಳ ಪಾಡು ನೋಡಲಾಗಿದೆ. ಅದಕ್ಕಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ನಾನು ಯಾವಾಗಲೂ ಸದಾ ಸಿದ್ದನಿದ್ದೇನೆ. ಮೊದಲಿನಿಂದಲೂ ಬೆಳಗಾವಿಗೂ ನನಗೂ ಅವಿನಾಭಾವ ಸಂಬಂಧ ಸಿ ಎಮ್ ಪಾಟೀಲ, ಸುರೇಶ ಅಂಗಡಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಶಿಕ್ಷಣ ಸಚಿವನಾಗಿದ್ದಾಗ ಕಿತ್ತೂರಿಗೆ ಬಿ ಯು ಕಚೇರಿ ನಿಡ್ದಿದ್ದೇನೆ, ಕಿತ್ತೂರು, ಖಾನಾಪುರ ಕ್ಷೇತ್ರದ ಸಂಚಾಲಕನಾಗಿ ಕೆಲಸ ಮಾಡಿದ್ದೇನೆ ದೇಶಕ್ಕೆ ಮೂರನೇ ಭಾರಿಗೆ ಮೋದಿಜಿ ಪ್ರಧಾನಿಯಾಗಲು ನಿಮ್ಮ ಬೆಂಬಲ ಅತೀ ಮುಖ್ಯ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸಭೆಯಲ್ಲಿ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ಮಾತನಾಡಿ ದೇಶದ ಜನರ ಅನೇಕ ವರ್ಷಗಳ ಕೊಗಾಗಿದ ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ಹಿಂಪಡೆ, ರಾಜ್ಯ, ರಾಷ್ಟ್ರದ ಉತ್ತಮ ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳ ಅನುಷ್ಠಾನ, ಹತ್ತು ಹಲವಾರು ಯೋಜನೆಗಳನ್ನು ನೀಡಿದ ಕೀರ್ತಿ ಮೋದಿಜಿ ಅವರಿಗೆ ಸಲ್ಲುತ್ತದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬೊಮ್ಮಾಯಿ ಅವರ ಆಡಳಿತ ಅವಧಿಯಲ್ಲಿ ಅನೇಕ ಯೋಜನೆಗಳು ನಮ್ಮ ಮುಂದೆ ಇವೆ ಎಂದರು. ಮಾಜಿ ಶಾಸಕ ಜಗದೀಶ ಮೆಟಗುಡ ಮಾತನಾಡಿ 200 ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ನಿಲ್ಲಿಸಿ ರಾಹುಲ ಗಾಂಧಿಯನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಿತ್ತೂರು ಬಿಜೆಪಿ ಮಂಡಲ ಅಧ್ಯಕ್ಷರ ಬಸವರಾಜ ಪರವಣ್ಣವರ, ಬೈಲಹೊಂಗಲ ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಸೋಮಣ್ಣವರ, ಸೇರಿದಂತೆ ಅನೇಕರು ಮಾತನಾಡಿದರು.
ಸಭೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ತುಬಾಕಿ, ಕೆಂಚಪ್ಪ ಕಳ್ಳಿಬಡ್ಡಿ, ಗ್ರಾ ಪಂ ಅಧ್ಯಕ್ಷ ನಿಂಗಪ್ಪ ಮಾಳನ್ನವರ,ಯಲ್ಲನಗೌಡ ದೊಡ್ಡಗೌಡರ, ಮಹಾಂತೇಶ ಕೂಲಿನವರ,ಬಸನಗೌಡ ಸಿದ್ರಾಮನಿ, ಉಳವಪ್ಪ ಉಳ್ಳಾಗಡ್ಡಿ, ಶ್ರೀಕರ್ ಕುಲಕರ್ಣಿ, ಶ್ರೀಶೈಲ ಕಮತಗಿ, ಎಸ್ ಎಂ ಪಾಟೀಲ, ದೇಮಣ್ಣ ಗುಜನಟ್ಟಿ, ಮಲ್ಲಿಕಾರ್ಜುನ ಸೋಮಣ್ಣವರ, ತೆಜಪ್ಪಗೌಡ ಪಾಟೀಲ, ವೀರಭದ್ರ ಚೋಭಾರಿ,ಪ್ರದೀಪ ದೊಡ್ಡಗೌಡರ, ಬಸವರಾಜ ತುಬಾಕಿ, ಅದಿವಪ್ಪ ಚಿಗರಿ,ಪುಂಡಲೀಕ ರೊಟ್ಟಿ, ವಿಷ್ಣು ಮುಲಿಮನಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.