ಆಧ್ಯಾತ್ಮದಲ್ಲಿ ಭಾರತ ಜಗತ್ತಿಗೆ ವಿಶ್ವಗುರು: ಆನಂದದೇವರು

Ravi Talawar
ಆಧ್ಯಾತ್ಮದಲ್ಲಿ ಭಾರತ ಜಗತ್ತಿಗೆ ವಿಶ್ವಗುರು: ಆನಂದದೇವರು
WhatsApp Group Join Now
Telegram Group Join Now
ಜಮಖಂಡಿ: ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ಸಂಪ್ರದಾಯ, ಆಧ್ಯಾತ್ಮದಲ್ಲಿ ಜಗತ್ತಿನಲ್ಲಿ ಭಾರತ ವಿಶ್ವಗುರು ಆಗಿದೆ. ಹಬ್ಬಗಳನ್ನು ವೈಭವಪೂರಿತವಾಗಿ ಆಚರಿಸುವುದರಿಂದ ಅಧ್ಯಾತ್ಮದ ಬೇರು ಗಟ್ಟಿಯಾಗಿ ಉಳಿದಿದೆ ಎಂದು ಓಲೆಮಠದ ಪ.ಪೂ.ಆನಂದ ದೇವರು ಹೇಳಿದರು.
ನಗರದ ಹಜಾರೆ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ನಾಡಹಬ್ಬ ದಸರಾ ನವರಾತ್ರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಮನಷ್ಯರ ಕಿವಿಗಳಿಗೆ ಮಹತ್ವ ಬರುವುದು ಮಹಾತ್ಮರ ಬಂಗಾರದAತಹ ಮಾತುಗಳು ಕೇಳಿದಾಗ, ಕಾಲುಗಳಿಗೆ ಮಹತ್ವ ಬರುವುದು ಹಿರಿಯರಿಗೆ ತಲೆಬಗ್ಗಿ ಗೌರವ ಸಲ್ಲಿಸಿದಾಗ ಜೀವನದ ಶೈಲಿಗೆ ಮಹತ್ವ ಬರಲಿದೆ. ದೇವತೆಗಳು ಒಂಬತ್ತು ಅವತಾರ ತಾಳಿ ಒಂಬತ್ತು ರಾಕ್ಷಸರನ್ನು ಸಂಹಾರ ಮಾಡಿದಂತೆ ನಮ್ಮೊಳಗಿನ ಕಾಮ, ಕ್ರೋಧ, ಮದ, ಮಾತ್ಸರ, ಲೋಭ, ಮೋಹ, ಆಸೆ ಹೀಗೆ ಒಂಬತ್ತು ದುರ್ಬುದ್ಧಿಗಳನ್ನು ಸಂಹಾರ ಮಾಡಿಕೊಳ್ಳಬೇಕು ಎಂದರು.
ಮನುಷ್ಯ ಈ ಆಧುನಿಕ ಕಾಲದಲ್ಲಿ ಪ್ರೀತಿ, ಪ್ರೇಮ, ಸ್ನೇಹ, ಸಂಬAಧವನ್ನು ಕಳೆದುಕೊಳ್ಳುತ್ತಿದ್ದಾನೆ. ಮನುಷ್ಯತ್ವವನ್ನು ಕಳೆದುಕೊಂಡು ಬದುಕುತ್ತಿದ್ದಾನೆ. ಗೆದ್ದ ವ್ಯಕ್ತಿಗೆ ಚಪ್ಪಾಳೆ ತಟ್ಟುವುದಕ್ಕಿಂತ ಬಿದ್ದ ವ್ಯಕ್ತಿಯ ಕೈಹಿಡಿದು ಮೇಲೆತ್ತಬೇಕು. ಬಡವರಿಗೆ ಹಸಿದವರಿಗೆ ಅನ್ನ ನೀಡಬೇಕು. ಮಠದ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು. ದೇವಸ್ಥಾನ ಕಟ್ಟಿದ ಮಾತ್ರಕ್ಕೆ ದೇವಿಯ ಆಶೀರ್ವಾದ ದೊರೆಯುವುದು ಎಂಬುವುದು ಸುಳ್ಳು. ಇನ್ನೊಬ್ಬರ ಮನೆ ಮುರಿಯದ ಹಾಗೆ ಕೆಟ್ಟದ್ದನ್ನು ಮಾಡದೆ ಮನಸ್ಸಿಗೆ ನೋವಾಗದಂತೆ ನಡೆದುಕೊಂಡಾಗ ಮಾತ್ರ ಶ್ರೀದೇವಿ ಆಶೀರ್ವಸುತ್ತಾಳೆ ಎಂದರು.
ಪಾರ್ವತಿ ಗುಡುಗುಂಟಿ ಮಾತನಾಡಿ, ನವರಾತ್ರಿಯಲ್ಲಿ ಕೇವಲ ದಾಂಡಿಯಾದಲ್ಲಿ ಕುಣಿಯುವುದಲ್ಲ. ದೇವಸ್ಥಾನ  ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಹಮ್ಮಿಕೊಂಡು ಭಾಗಿಯಾಗುವುದರಿಂದ ನಮ್ಮಲ್ಲಿ ಸಕಾರಾತ್ಮಕ ಚಿಂತನೆ  ಬೆಳೆಯುತ್ತವೆ. ಹೆಣ್ಣುಮಕ್ಕಳು ಸೇರಿಕೊಂಡು ಭಜನೆ, ಪುರಾಣ, ಪ್ರವಚನ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ  ಮನಸ್ಸು ಕೇಂದ್ರೀಕೃತಗೊಳಿಸುತ್ತದೆ. ಮಹಿಳೆಯರು ಸಹನೆಯಿಂದ ಧೈರ್ಯದಿಂದ ಬಾಳಿ ಬದುಕಬೇಕು ಎಂದರು.
ನವರಾತ್ರಿ ಉತ್ಸವ ಸಮೀತಿ ಅಧ್ಯಕ್ಷೆ ಪದ್ಮಾ ಹಜಾರಿ ಮಾತನಾಡಿ, ಒಂಬತ್ತು ದಿನಗಳ ಕಾಲ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಮಾಡಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ಮುಂಜಾನೆ ದೇವಿಗೆ ವಿಶೇಷ ಪೂಜೆ, ಅಲಂಕಾರ, ಕುಂಕುಮಾರ್ಚನೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪ್ರತಿದಿನ ಸಾಯಂಕಾಲ ಸಂಗೀತ ಕಾರ್ಯಕ್ರಮ ಹಾಗೂ ದಾಂಡಿಯಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು.  ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳೆಯರಿಗೆ ಉಡಿ ತುಂಬುವುದು, ಆರತಿ, ಪ್ರಸಾದಸೇವೆ, ದಾಂಡಿಯಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು ಎಂದರು.
ವೇದಿಕೆಯಲ್ಲಿ ರಜಪೂತ ಸಮಾಜದ ಮುಖಂಡರಾದ ವಿಲೇಶ ಹಜಾರೆ, ಅಂಜನಾ ಜಾಧವ ಇದ್ದರು. ರತ್ನಾ ಸಂಗಡಿಗರು ಪ್ರಾರ್ಥಿಸಿದರು. ಮೀನಾಕ್ಷಿ ಶೇಡಶಾಳ ಸ್ವಾಗತಿಸಿದರು. ಉಮಾ ಪಾಟೀಲ ನಿರೂಪಿಸಿದರು. ಶೋಭಾ ಕಾಗಿ ವಂದಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಮಂಡಳ ವತಿಯಿಂದ ನವರಾತ್ರಿ ಅಷ್ಠಮಿ ದಿನದಂದು ೫ ರಿಂದ ೧೦ ವರ್ಷದ ಒಳಗಿನ ದೇವಸ್ವರೂಪಿಗಳಾದ ಅಷ್ಠ ಕನ್ಯಾಗಳ ಪಾದಪೂಜೆ ನಡೆಯಿತು. ಸತತ ೧೦ ದಿನಗಳ ಸಂಗೀತ ಸೇವೆಗೈದ ರಮಾ ಹಜಾರೆ, ಪ್ರಸಾದ ಸೇವೆಗೈದ ಬಸವನಗೌಡ ಪಾಟೀಲ, ನೇಹಾ ಯುವರಾಜ ಹಜಾರೆ ಅವರನ್ನು ಗೌರವಿಸಲಾಯಿತು.
WhatsApp Group Join Now
Telegram Group Join Now
Share This Article