ಇಂಡಿ: ಸರ್ಕಾರಗಳು ಮಾಡದಿರುವ ಸಮಾಜಿಕ ಕಾರ್ಯಗಳನ್ನು ಪೂಜ್ಯ ವಿರೇಂದ್ರ ಹೆಗಡೆಯವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಬಡರವ ಏಳಿಗೆಗಾಗಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನಿಯ ಎಂದು ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ ಹೇಳಿದರು.
ಅವರು ತಾಲೂಕಿನ ಲಚ್ಯಾಣ ಗ್ರಾಮದ ಸುಕ್ಷೇತ್ರ ಶ್ರೀ ಸಿದ್ದಲಿಂಗÀಮಹಾರಾಜರ ಕಮರಿ ಮಠದ ದೇವಸ್ಥಾನದ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಸಹಸ್ರ ಬಿಲ್ವಾರ್ಚನೆ ಪೂಜಾ ಸಮಿತಿ ಲಚ್ಯಾಣ ಮತ್ತು ಅಗರಖೇಡ ವಲಯ ವತಿಯಿಂದ ಹಮ್ಮಿಕೊಂಡ ವಲಯ ಮಟ್ಟದ ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ತ್ರೀ ಸಬಲಿಕರಣದ ಜೊತೆಗೆ ಸ್ವಸಹಾಯ ಗುಂಪುಗಳನ್ನು ಕಟ್ಟಿ ಗ್ರಾಮಿಣ ಭಾಗದ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೊಗ ತರಬೇತಿಗಳನ್ನು ನೀಡಿದ್ದರಿಂದ ಇಂದು ಅವರು ಆರ್ಥಿಕವಾಗಿ ಸಬಲರಾಗುವತ್ತ ಸಾಗುತ್ತಿಒದ್ದಾರೆ. ಇದರಿಂದ ಸ್ವಂತ ಬಲದೆ ಮೇಲೆ ಅವರು ನೀಲ್ಲುವಂತೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಮಾತನಾಡಿ ದೇವರ ಧ್ಯಾನ ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಜೊತೆಗೆ ಶಾಂತಿ, ಸಂತೋಷವನ್ನುAಟು ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ದೇವರ ಸ್ಮರಣೆ ಮಾಡಬೇಕು ಎಂದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಬರೋಡಾ ಬ್ಯಾಂಕ್ ವತಿಯಿಂದ ಪ್ರಗತಿ ನಿಧಿ ವಿತರಣೆ, ವಿಕಲಚೇತನರಿಗೆ ಸಲಕರಣೆಗಳು, ನಿರ್ಗತಿಕರಿಗೆ ಮಾಶಾಸನ, ಸುಜ್ಞಾನ ನಿಧಿ ಶಿಷ್ಯವೇತನ, ನಿರ್ಗತಿಕರಿಗೆ ಮನೆ ಕಟ್ಟಿಕೊಡುವುದು, ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರ ಕೊಡುಗೆ, ಜ್ಞಾನ ವಿಕಾಸ ಕೆಂದ್ರಗಳ ಮೂಲಕ ಗ್ರಾಮಿಣ ಭಾಗದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡುವುದು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ವರ್ಷದಲ್ಲಿ ಒಮ್ಮೆ ವಲಯ ಮಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ತಾಲೂಕಾ ಯೋಜನಾಧಿಕಾರಿ ನಟರಾಜ ಎಲ್.ಎಮ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಹುಸೇನಸಾಬ ಕಾಗದ ನಿರೂಪಿದಿರು. ಸರಸ್ವತಿ ವಂದಿಸಿದರು.
ವಿರೇಂದ್ರ ಹೆಗಡೆಯವರು ಬಡರವ ಏಳಿಗೆಗಾಗಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನಿಯ: ಭೀಮಣ್ಣ ಕವಲಗಿ


