ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಹಾಗೂ ವಯಕ್ತಿಕ ಟಾರ್ಗೇಟ್: ಡಾ.ಶ್ರೀ ಸಿದ್ದಸೇನ ಮಹಾರಾಜ

Ravi Talawar
ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಹಾಗೂ ವಯಕ್ತಿಕ ಟಾರ್ಗೇಟ್: ಡಾ.ಶ್ರೀ ಸಿದ್ದಸೇನ ಮಹಾರಾಜ
WhatsApp Group Join Now
Telegram Group Join Now

ರಾಯಬಾಗ: ರಾಜ್ಯದಲ್ಲಿ  ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಹಾಗೂ ವಯಕ್ತಿಕ ಟಾರ್ಗೇಟ್ ಮಾಡುತ್ತಿದ್ದಾರೆ. ಹಾಗಾಗಿ ವಕೀಲರು ಮುಂದೆ ಬಂದು ನ್ಯಾಯ ಒದಗಿಸಬೇಕು ಎಂದು  108 ಡಾ.ಶ್ರೀ ಸಿದ್ದಸೇನ ಮಹಾರಾಜರು ಕರೆ ನೀಡಿದ್ದಾರೆ.

 ರಾಯಬಾಗ ತಾಲೂಕಿನ ಪಾವನ ವರ್ಷಾಯೋಗದ ನಿಮಿತ್ತ ರಾಜ್ಯಮಟ್ಟದ ಜೈನ್ ವಕೀಲರ ಸಮಾವೇಶದಲ್ಲಿ ಸಾನಿಧ್ಯವಹಿಸಿ‌ ಮಾತನಾಡಿದರು.ಜೈನರ ದೇವಸ್ಥಾನಗಳ ಮೇಲೆ ಅಕ್ರಮನ ನಡೆಯುತ್ತಿದೆ.  ಹಾಗಾಗಿ  ಜೈನ್ ಯುವಕರು ವಕೀಲರಾಗಿ ಹಾಗೂ ಇದ್ದ ವಕೀಲರು ಜಾಗೃತರಾಗಿ ಜೈನ್ ಧರ್ಮ ಕಾಪಾಡಬೇಕು. ಮಾಜಿ ಪ್ರಧಾನಿ ಅವರ‌ ಮೊಮ್ಮಗನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ. ಇದು ವಕೀಲರಿಂದ ಸಾದ್ಯವಾಗಿದೆ. ಹಾಗಾಗಿ ಯುವ ವಕೀಲರು ಕಾನೂನು ಬಗ್ಗೆ ಸಂಪೂರ್ಣ ಅದ್ಯಯನ ಮಾಡಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದರು.
ಜೈನರಲ್ಲಿ ಪಂಗಡಗಳಾಗಿವೆ ಅದಲೆಲ್ಲ ಬದಿಗೊತ್ತಿ ಜೈನರು ಒಗ್ಗಟ್ಟಾಗಬೇಕಿದೆ. ವಿವಿಧ ರಾಜ್ಯಗಳಿಂದ ಹಾಗೂ ಜಿಲ್ಲೆಗಳಿಂದ ಆಗಮಿಸಿದ ಎಲ್ಲರೂ ಒಗ್ಗಟ್ಟಾಗಿ, ನಮ್ಮ ಮೇಲೆ ಅಕ್ರಮನ ಮಾಡುವವರ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಟೇಟ್ ಬಾರ್ ಅಸೋಶಿಯೇಶನ್ ಸದಸ್ಯ ಆನಂದ ಮಗದುಮ್ ಮಾತನಾಡಿ, ಕಾನೂನು ಬಗ್ಗೆ ಏನಾದರೂ ಸಮಸ್ಯೆಗಳು ಇದ್ದಲ್ಲಿ ನಮ್ಮನ್ನು ಕೇಳಿ. ನಾವು ನಿಮಗೆ‌ ಸಲಹೆ ನೀಡುತ್ತೇನೆ. ಎಲ್ಲ ಯುವಕರು ಹೆಚ್ಚೆಚ್ಚು ಅಧ್ಯಯನ ನಡೆಸಿ ಉನ್ನತ ಸ್ಥಾನಕ್ಕೆ ಹೋಗಬೇಕು. ಅಹಂಕಾರ ಬಿಡಬೇಕು. ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಎಂದು ಸಲಹೆ ನೀಡಿದರು.
ಸಿದ್ಧಸೇನ ಶ್ರೀಗಳ ನೇತೃತ್ವದಲ್ಲಿ ರಾಜ್ಯಮಟ್ಟದ ವಕೀಲರ ಸಮಾವೇಶ ಮಾಡುತ್ತಿರುವುದು ಸಂತಸದ ವಿಷಯ. ಕೇವಲ ವಕೀಲರಷ್ಟೆ ಅಲ್ಲ ಎಲ ಜೈನ್ ಸಮುದಾಯದ ಯುವಕ ಯುವತಿಯರು ಸಮಾವೇಶದ ಲಾಭ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯನ್ಯಾಯವಾಧಿ ಡಿ ಜೆ ಗುಂಡೆ, ನ್ಯಾಯಾದೀಶರಾದ ಸುಶಾಂತ ಚೌಗಲೆ, ಭರತೇಶ ಬನವಣೆ, ಪಿ ಎಸ್ ಉಗಾರೆ, ಅಭಯ ಅಕಿವಾಟೆ, ವಿಧ್ಯಾಧರ ಪಾಟೀಲ, ರಾಜಗೌಡ ಪಾಟೀಲ, ಬಾಹುಸಾಹೇಬ್ ಪಾಟೀಲ, ಪಾಸಗೌಡ ಪಾಟೀಲ, ಬಿ ಎ ಗಣಿ, ಮಹಾವೀರ ಖೋಂಬಾರೆ, ಸುನೀಲ ಜೈನ್ ಸೇರಿದಂತೆ ಧಾರವಾಡ, ಬಾಗಲಕೋಟ, ವಿಜಯಪುರ, ಹುಬ್ಬಳ್ಳಿ, ಬೆಳಗಾವಿ, ಮಹರಾಷ್ಟ್ರ ದಿಂದ ನೂರಾರು ಜನರು ವಕೀಲರು ಉಪಸ್ಥಿತರಿದ್ದರು. ಎಸ್ ಡಟಿ ಮುನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಯಪಾಲ ಬನವಣೆ ಸ್ವಾಗತಿಸಿದರು. ಸಂಜಯ ಪಾಟೀಲ ನಿರೂಪಿಸಿದರು.
WhatsApp Group Join Now
Telegram Group Join Now
Share This Article