ರನ್ನ ಬೆಳಗಲಿ:ಅ.೧೧., ಶಾಲಾ ಶಿಕ್ಷಣ ಇಲಾಖೆ,ಮುಧೋಳ ತಾಲೂಕ ಮಟ್ಟದ ಚದುರಂಗ ಸ್ಪರ್ಧೆಯು ತಾಲೂಕಾ ರನ್ನ ಕ್ರೀಡಾಂಗಣ ಮುಧೋಳದಲ್ಲಿ ೨೦೨೫ರ ಅಕ್ಟೋಬರ್ ೧೦ ರಂದು ಜರುಗಿದವು. ಈ ಸ್ಪರ್ಧೆಯಲ್ಲಿ ರನ್ನ ಬೆಳಗಲಿ ಪಟ್ಟಣದ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ೧೪ ವಯೋಮಿತಿ ಒಳಗಿನ ವಿದ್ಯಾರ್ಥಿಗಳಾದ ಮನೋಜ ಸದಾಶಿವ ಪುರಾಣಿಕ ಮತ್ತು ವಿನಾಯಕ ಯಲ್ಲಪ್ಪ ಕುಳ್ಳೂರ ಭಾಗವಹಿಸಿ ತಾಲೂಕಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು.ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿತಂದ ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶನ ನೀಡಿದ ಕೆ ಬಿ ಕುಂಬಾಳಿ ದೈಹಿಕ ಶಿಕ್ಷಕರಿಗೆ.ಮುಖ್ಯೋಪಾಧ್ಯಾಯರು,ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಮತ್ತು ಪಟ್ಟಣದ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.