ನೇಸರಗಿ. ಸಾರ್ವಜನಿಕ ಗಣಪತಿ ಉತ್ಸವದಲ್ಲಿ ಹಿಂದೂ ಸನಾತನ ಧರ್ಮದ ಅತೀ ಶ್ರೀಮಂತ ಉತ್ಸವ ಆಚರಿಸುವ ಈ ಕಾಲದಲ್ಲಿ ತನ್ನ ತಾಯಿಯ ತಂದೆಯಾದ ಬಾಬು ಧಾರಪ್ಪನ್ನವರ (ಅಜ್ಜನ) ಮನೆಯಲ್ಲಿ ವಾಸವಿದ್ದು ವ್ಯಾಸಂಗ ಮಾಡುತ್ತಿರುವ ವಿನಯ ಕಡಕೋಳ ಇತನು ಕಳೆದ ಕೆಲವು ದಿನಗಳಿಂದ ಪರಿಶ್ರಮದಿಂದ ಅಜ್ಜನ ಮನೆ ನೇಸರಗಿ ಗ್ರಾಮದ ಕರ್ನಾಟಕ ಚೌಕ ಹತ್ತಿರ ಇರುವ ಅಜ್ಜನ ಮನೆಯಲ್ಲಿ ಐತಿಹಾಸಿಕ ಪರಂಪರೆ ಸಾರುವ ಇಮ್ಮಡಿ ಪುಲಕೇಶಿ ರಾಜನ ವೈಭವ ಮತ್ತು ಚಾಲುಕ್ಯರ ರಾಜಧಾನಿ ಬಾದಾಮಿ ಇತಿಹಾಸ ಬಾದಾಮಿ ಕಲ್ಲು ಗುಹೆ, ಚಾಲುಕ್ಯ ಚಕ್ರವರ್ತಿ ಸರ್ಕಲ್, ಶ್ರೀ ಬನಶಂಕರಿ ದೇವಸ್ಥಾನ, ಚಾಲುಕ್ಯ ಪರಮೇಶ್ವರ, ದಕ್ಷಿಣ ಕಾಶಿ, ರಕ್ಷಣಾ ಪತೀಶ್ವರ, ಇಮ್ಮಡಿ ಚಾಲುಕ್ಯರ ಇತಿಹಾಸ ಸಾರುವ ಕಲಾಕೃತಿ ರಚಿಸಿ ಮನೆ ಗಣಪತಿಗೆ ಮೆರಗು ತಂದಿದ್ದಾನೆ ಯುವ ಕಲಾವಿದ ವಿನಾಯಕ ಕಡಕೋಳ. ಈತ ಮಾಡಿದ ಬಾದಾಮಿ ಇಮ್ಮಡಿ ಪುಲಕೇಶಿ ಅವರ ಸಾಮ್ರಾಜ್ಯದ ಕಲಾ ಪ್ರತಿಮೆ ನೋಡಿ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
