ರಾಜ್ಯಮಟ್ಟದ ಪ್ರಚಾರ ಸಮಿತಿ ಸಭೆ: ಸಂಘಟನೆಯ ಬಲವರ್ಧನೆಗೆ ವಿನಯ್ ಸೊರಕೆ–ಎಲ್.ಹನುಮಂತಯ್ಯ ಕರೆ

Ravi Talawar
ರಾಜ್ಯಮಟ್ಟದ ಪ್ರಚಾರ ಸಮಿತಿ ಸಭೆ: ಸಂಘಟನೆಯ ಬಲವರ್ಧನೆಗೆ ವಿನಯ್ ಸೊರಕೆ–ಎಲ್.ಹನುಮಂತಯ್ಯ ಕರೆ
WhatsApp Group Join Now
Telegram Group Join Now
ಬೆಂಗಳೂರು,ಅ.30.. ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜ್ಯಮಟ್ಟದ ಪ್ರಚಾರ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ಕುರಿತು ಚರ್ಚೆಯನ್ನು ನಡೆಯಿತು. ಎಐಸಿಸಿ ನಿರ್ದೇಶನದಂತೆ ರಾಜ್ಯದಾದ್ಯಂತ ಪ್ರಚಾರ ಸಮಿತಿಗಳು ಸಕ್ರಿಯವಾಗಲು ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ ಅವರು ಮಾತನಾಡಿದ“ನಮ್ಮ ಪಕ್ಷ ಸಂಘಟಿತವಾಗಬೇಕಾದರೆ ಎಲ್ಲರೂ ಶ್ರಮಪಟ್ಟು ಕೆಲಸ ಮಾಡಬೇಕು. ಜಿಲ್ಲಾ, ಬ್ಲಾಕ್ ಮತ್ತು ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳ ರಚನೆಗೆ ಮುಂದಾಗಬೇಕು. ಪಕ್ಷದ ಚಟುವಟಿಕೆ, ಜನಪ್ರಚಾರ ಮತ್ತು ವಿರೋಧ ಪಕ್ಷಗಳ ವಿರುದ್ಧ ಹೋರಾಟದಲ್ಲಿ ನಾವು ಮುಂಚೂಣಿಯಲ್ಲಿರಬೇಕು”ಎಂದರು.
ಅವರು ಮುಂದುವರಿದು, “ಮುಂದಿನ ದಿನಗಳಲ್ಲಿ ತಾಲೂಕು, ಗ್ರಾಮ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ–ಪಟ್ಟಣ ಪಂಚಾಯಿತಿ ಚುನಾವಣೆಗಳು ಬರುವ ಹಿನ್ನಲೆಯಲ್ಲಿ ಕಾರ್ಯಕರ್ತರು ತಾವು ಬದಲಾಗಬೇಕು, ಹೊಸ ಉತ್ಸಾಹದೊಂದಿಗೆ ಸಂಘಟನೆಯಲ್ಲಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಹನುಮಂತಯ್ಯ ಅವರು ಸಹ ಮಾತನಾಡಿ, “ಜನರ ವಿಶ್ವಾಸ ಗಳಿಸಲು ಪ್ರತಿ ಬೂತ್ ಮಟ್ಟದಲ್ಲಿ ಬಲವಾದ ಸಂಘಟನೆ ನಿರ್ಮಿಸಬೇಕು. ಪ್ರತಿ ಕಾರ್ಯಕರ್ತನೂ ಪಕ್ಷದ ಸೈನಿಕನಂತೆ ಕೆಲಸ ಮಾಡಿದರೆ ಮಾತ್ರ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ” ಎಂದು ಹೇಳಿದರು.
ಈ ಸಭೆಯಲ್ಲಿ ರಾಜ್ಯದ ಆಯಾ ಜಿಲ್ಲಾ ಅಧ್ಯಕ್ಷರು, ಉಸ್ತುವಾರಿ ಸದಸ್ಯರು ಹಾಗೂ ವಿವಿಧ ವಿಭಾಗದ ನಾಯಕರೂ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article