ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ವಿಕ್ರಮ್ ಮಿಸ್ರಿ

Ravi Talawar
ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ವಿಕ್ರಮ್ ಮಿಸ್ರಿ
WhatsApp Group Join Now
Telegram Group Join Now

ನವದೆಹಲಿ: ಚೀನಾ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳ ಪರಿಣಿತರೆಂದು ಪರಿಗಣಿಸಲ್ಪಟ್ಟಿರುವ ಅನುಭವಿ ರಾಜತಾಂತ್ರಿಕ ವಿಕ್ರಮ್ ಮಿಸ್ರಿ ಅವರು ಸೋಮವಾರ ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. 1989ರ ಬ್ಯಾಚ್​ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಮಿಸ್ರಿ ಅವರು ವಿನಯ್ ಕ್ವಾತ್ರಾ ಅವರ ಉತ್ತರಾಧಿಕಾರಿಯಾಗಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.

ಪೂರ್ವ ಲಡಾಖ್ ಗಡಿ ವಿವಾದದ ನಂತರ ಚೀನಾದೊಂದಿಗೆ ಉಂಟಾಗಿರುವ ಉದ್ವಿಗ್ನತೆ, ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮಗಳು ಸೇರಿದಂತೆ ವಿವಿಧ ಭೌಗೋಳಿಕ-ರಾಜಕೀಯ ಸವಾಲುಗಳನ್ನು ಎದುರಿಸುವ ಮಧ್ಯೆ ದೇಶ ಇರುವ ಮಹತ್ವದ ಸಮಯದಲ್ಲಿ ಮಿಸ್ರಿ ಪ್ರಮುಖ ಸ್ಥಾನದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರು ವಿದೇಶಾಂಗ ಸಚಿವಾಲಯ (ಎಂಇಎ), ಪ್ರಧಾನ ಮಂತ್ರಿ ಕಚೇರಿ ಮತ್ತು ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕಾದ ವಿವಿಧ ಭಾರತೀಯ ಮಿಷನ್​ಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article