ವಿಜಯಪುರ : (ಡಿ.13) ಜಿಲ್ಲಾ ಅಮೇಚೂರ ನೆಟ್ ಬಾಲ್ ಅಸೋಶಿಯೇಶನ್ ವಿಜಯಪುರ ಅಂಡರ್ ೧೮ ಅಬೌ ನೆಟ್ ಬಾಲ್ ಚಾಂಪಿಯನ್ ಶಿಫ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ವಿಜಯಪುರದ ಕ್ರೀಡಾ ಪಟುಗಳು ಸದಾಶಿವ ಕಡಪಟ್ಟಿ, ವಿಜಯಕುಮಾರ ಬಿರಾದಾರ, ರಾಹುಲ ಗಾಡಿವಡ್ಡರ, ಪ್ರಜ್ವಲ ನಲವಡೆ, ನಾಗರಾಜ ಮಾಳಿ, ಹಾಗುಲ ಬಾಗಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಿಗೆ ಕ್ಯಾಪ್ಟನ್ ಸುನೀಲ ರಾಠೋಡ ತರಬೇತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ನೆಟ್ ಬಾಲ್ ಜಿಲ್ಲಾಧ್ಯಕ್ಷರಾದ ವಿಲಾಸ ವ್ಯಾಸ ಹಾಗೂ ಸಹಾಯಕ ನಿರ್ದೇಶಕರ ರಾಜಶೇಖರ ದೈವಾಡಗಿ ಹಾಗೂ ಕಾರ್ಯದರ್ಶಿ ಚಂದ್ರಕಾAತ ತಾರನಾಳ ಉಪಸ್ಥಿತರಿದ್ದರು.


