Ad imageAd image

ಪಿಯುಸಿಯಲ್ಲಿ ವಿಜಯಪುರ 3ನೇ ರ‍್ಯಾಂಕ್ : ಹನುಮಂತ ನಿರಾಣಿ ಅಭಿನಂದನೆ

Ravi Talawar
ಪಿಯುಸಿಯಲ್ಲಿ ವಿಜಯಪುರ 3ನೇ ರ‍್ಯಾಂಕ್ : ಹನುಮಂತ ನಿರಾಣಿ ಅಭಿನಂದನೆ
WhatsApp Group Join Now
Telegram Group Join Now

ವಿಜಯಪುರ,ಏಪ್ರಿಲ್ 10:  ಈ ಸಲದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟಾರೆ ಶೇ. ೯೪.೮೯ % ಫಲಿತಾಂಶ ಸಾಧಿಸುವ ಮೂಲಕ ರಾಜ್ಯದಲ್ಲೇ ವಿಜಯಪುರ ಜಿಲ್ಲೆ ಯಾಂಕಿಂಗ್ ಪಟ್ಟಿಯಲ್ಲಿ ೩ ನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಇದೊಂದು ಅಭೂತಪೂರ್ವ ಶೈಕ್ಷಣಿಕ ಸಾಧನೆಯಾಗಿದ್ದು, ಉತ್ತಮ ಫಲಿತಾಂಶ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಜಿಲ್ಲೆ ಉನ್ನತ ಸ್ಥಾನಕ್ಕೇರಲು ಕಾರಣಿಕರ್ತರಾದ ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಶಿಕ್ಷಕರಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಶಿಕ್ಷಕರಿಗೆ ವಾಯುವ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದೇ ವೇಳೆ ಎಲ್ಲರ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಉನ್ನತ ಸ್ಥಾನಕ್ಕೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

WhatsApp Group Join Now
Telegram Group Join Now
Share This Article