ಸಮಾಜ ಸೇವೆಯಲ್ಲಿ ವಿಜಯ ಮೆಟಗುಡ್ ಸಾಧನೆ ಅಪಾರ: ಮಹಾಂತೇಶ ದೊಡ್ಡಗೌಡರ 

Ravi Talawar
ಸಮಾಜ ಸೇವೆಯಲ್ಲಿ ವಿಜಯ ಮೆಟಗುಡ್ ಸಾಧನೆ ಅಪಾರ: ಮಹಾಂತೇಶ ದೊಡ್ಡಗೌಡರ 
WhatsApp Group Join Now
Telegram Group Join Now
ಬೈಲಹೊಂಗಲ. ಯುವ  ಮುಖಂಡ ವಿಜಯ ಮೆಟಗುಡ್ಡ ಅವರ  ಸಾಮಾಜಿಕ, ಉದ್ಯೋಗಿಕ, ರಾಜಕೀಯ, ಜನಸೇವೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿ ಹೆಮ್ಮೆಯ ಯುವ ಜನಾಂಗದ ನಾಯಕರಾಗಿ ಬೆಳೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.
     ಅವರು ಶನಿವಾರದಂದು ಪಟ್ಟಣದ ವಿಜಯ ಸೋಶಿಯಲ್ ಕ್ಲಬನಲ್ಲಿ ಅಭಿಮಾನಿಗಳು ಆಯೋಜಿಸಲಾಗಿದ್ದ  ಉದ್ಯಮಿ, ಸಮಾಜ ಸೇವಕ ವಿಜಯ ಮೆಟಗುಡ್ ಅವರ  ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
       ಜನ್ಮದಿನ ಅಂಗವಾಗಿ ಅವರ ಅಭಿಮಾನಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಗೂ ವೃದ್ದಶ್ರಮಕ್ಕೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಮತಕ್ಷೇತ್ರದ ಶಾಸಕರ ಮಾದರಿ ನಂ. 4 ಶಾಲೆಯ 650 ಮಕ್ಕಳಿಗೆ 650 ಆರೋಗ್ಯ ಬಾಲಕಿಟ್ ಹಾಗೂ ಅನಿಗೋಳ ಸರ್ಕಾರಿ ಶಾಲೆಯ ಮಕ್ಕಳಿಗೆ 350 ಆರೋಗ್ಯ ಬಾಲ ಕಿಟ್ ವಿತರಣೆ ಮಾಡಲಾಯಿತು.
ಪಟ್ಟಣದ ವಿಜಯ ಸೋಷಿಯಲ್ ಕ್ಲಬ್ ನಲ್ಲಿ ನಡೆದ ಕೆ ಎಲ್ ಇ ಡಾ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವಿಜಯ ಮೆಟಗುಡ್ಡ ಅಭಿಮಾನಿಗಳಿಂದ ನಡೆದ ರಕ್ತದಾನ ಶಿಬಿರದಲ್ಲಿ 261 ಯುವಕರು ರಕ್ತದಾನ ಮಾಡಿದರು. ಸುಮಾರು 850 ಕ್ಕೂ ಹೆಚ್ಚು ಯುವಕ, ಯುವತಿಯರಿಗೆ  ಉಚಿತ ಕಲಿಕಾ ಚಾಲನೆ (ಎಲ್ ಎಲ್ ಅರ್ ) ನೀಡಲಾಯಿತು. ಮರಕುಂಬಿ ಸರ್ಕಾರಿ ಶಾಲೆಗೆ ಸಸಿ ವಿತರಣೆ ಮಾಡಲಾಯಿತು.
ವಿವಿಧ ಮಠಾಧೀಶರು, ರಾಷ್ಟ್ರೀಯ, ರಾಜ್ಯ ನಾಯಕರು ,ರಾಜಕೀಯ ಗಣ್ಯರು, ಬಿಜೆಪಿ ಕಾರ್ಯಕರ್ತರು, ವಿಜಯ ಮೆಟಗುಡ್ಡ ಅಭಿಮಾನಿ ಬಳಗ  ಹಾಗೂ ಸಾವಿರಾರು ಜನರು ಜನ್ಮ ದಿನದ ಶುಭ ಕೋರಿದರು.
    ಈ ಸಂದರ್ಭದಲ್ಲಿ  ಮಾಜಿ ಶಾಸಕ ಜಗದೀಶ್ ಮಾತನಾಡಿ  ನಮ್ಮ ಕುಟುಂಬದ ಮೇಲೆ ತಾವು ಇಟ್ಟಿರುವ ಪ್ರೀತಿಗೆ ಸದಾ ಪಾತ್ರರಾಗುತ್ತೇವೆ ಎಂದರು.
    ಜನ್ಮದಿನದ ಅಭಿಮಾನಿಗಳ ಪ್ರೀತಿಯ ಅಭಿನಂದನೆ ಸ್ವೀಕರಿಸಿ ಯುವ ಮುಖಂಡ ವಿಜಯ ಮೆಟಗುಡ ಮಾತನಾಡಿ ನಮ್ಮ ಮೇಲೆ ಇಭಿಮಾನ ಇಟ್ಟು 261 ಯುವಕರು ರಕ್ತಧಾನ ಮಾಡಿದ್ದಾರೆ ಅವರಿಗೆ ನಾನು ಚಿರಋಣಿ ಎಂದರು.
WhatsApp Group Join Now
Telegram Group Join Now
Share This Article