ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ  ವಿದ್ಯಾ ಸಾಗರ್ ಯಶಸ್ವಿ ಸವಿತಾ ಸಮಾಜದಿಂದ ಅಭಿನಂದನೆ  

Ravi Talawar
ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ  ವಿದ್ಯಾ ಸಾಗರ್ ಯಶಸ್ವಿ ಸವಿತಾ ಸಮಾಜದಿಂದ ಅಭಿನಂದನೆ  
WhatsApp Group Join Now
Telegram Group Join Now
ಬಳ್ಳಾರಿ. ಅ. 13 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ದೊಡ್ಡ ಬಳ್ಳಾಪುರದ ಅನಿಬೆಸೆಂಟ್ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಏಳು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ನಾನು ವಿಜ್ಞಾನಿ 2025 ರಾಜ್ಯಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ನಗರದ ಹೀರದ ಸುಗಮ ಶಾಲೆಯ ವಿದ್ಯಾರ್ಥಿ ವಿದ್ಯಾ ಸಾಗರ್ ತಂದೆ ಎಮ್ ರವೀಂದ್ರ ಟೆಲಿಸ್ಕೊಪ್ ಶಿಭಿರದಲ್ಲಿ ಭಾಗವಹಿಸಿ ಟೆಲಿಸ್ಕೋಪ್ ತಯಾರಿಕೆಯ ತರಬೇತಿಯನ್ನು ಯಶಸ್ವಿಯಾಗಿ ಪಡೆದು ಟೆಲಿಸ್ಕೋಪನ್ನು ತಯಾರಿಸಿದರು. ರಾಜ್ಯದ 150 ವಿದ್ಯಾರ್ಥಿಗಳ ಪೈಕಿ ಜಿಲ್ಲೆಯ 7 ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಮೊದಲಿಗರಾಗಿ ಯಶಸ್ಸು ಗಳಿಸಿದರು.
  ” ನಾನು ವಿಜ್ನಾನಿ-2025″ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್‌ ತರಬೇತಿಯಲ್ಲಿ ಭಾಗವಹಿಸಿ  ಪ್ರತಿಷ್ಠಿತ ವರ್ಲ್ಡ ಆಫ್‌ ರೆಕಾರ್ಡ್ಸ್‌, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸ್ಥಾನ ಪಡೆದುಕೊಂಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಯ ಪರಿಶ್ರಮ , ಸೃಜನಶೀಲತೆ ಮತ್ತು ವೈಜ್ಞಾನಿಕ ಸ್ಪೂರ್ತಿಯು ಪ್ರಶಂಸನೀಯವಾಗಿದೆ ಸವಿತಾ ಸಮಾಜದ ಮುಖಂಡರು ಅಭಿಪ್ರಾಯಪಟ್ಟು ವಿದ್ಯಾಸಾಗರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
 ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆ ಸವಿತಾ ಸಮಾಜ ಅಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷರು ಡಿ ಚಂದ್ರಶೇಖರ್ ಬಳ್ಳಾರಿ ನಗರ ಅಧ್ಯಕ್ಷ ಕೆ ಶಿವಶಂಕರ್, ಸಂಘದ ಸದಸ್ಯರಾದ ರವಿ, ಜಿಲ್ಲಾ ಖಜಾಂಜಿ ಜಗನ್ನಾಥ್ ಸೇರಿದಂತೆ  ಸವಿತಾ ಸಮಾಜದ ಇತರರಿದ್ದರು.
WhatsApp Group Join Now
Telegram Group Join Now
Share This Article