ಗಡಿ ಭಾಗದಲ್ಲಿ ಇಬ್ಬರೂ ಮಹಾನ ಸಂತರ ಪ್ರೇರಣೆ, ಆಶೀರ್ವಾದಿಂದ ಪ್ರಾರಂಭಗೊAಡಿರುವ ಶಿಕ್ಷಣ ಸಂಸ್ಥೆಯಲ್ಲಿ ಪಡೆದುಕೊಂಡ ವಿದ್ಯಾಭೂಷಣ ಮತ್ತು ಗುರುಶ್ರೀ ಪ್ರಶಸ್ತಿಗಳು, ದಿಲ್ಲಿಯಲ್ಲಿ ಪಡೆದುಕೊಳ್ಳುವ ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗಿಂತಲೂ ಮಹತ್ವದ್ದಾಗಿವೆಯೆಂದು ಹಂಚಿನಾಳದ ಭಕ್ತಿ ಯೋಗಾಶ್ರಮದ ಪಪೂ ಮಹೇಶಾನಂದ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು, ರವಿವಾರ ದಿ. 11 ರಂದು ಪಟ್ಟಣದ ವಿದ್ಯಾವರ್ಧಕ ಸಮಿತಿ ಸಿಬ್ಬಂದಿಗಳ ಒಕ್ಕೂಟದಿಂದ ವ್ಹಿ.ವ್ಹಿ. ಸಮಿತಿಯ ಶಿಕ್ಷಕರಿಗೆ ವಿದ್ಯಾಭೂಷಣ ಮತ್ತು ಗುರುಶ್ರೀ ಪ್ರಶಸ್ತಿ ಪ್ರಧಾನ ಮತ್ತು ಶೈಕ್ಷಣಿಕ ಚಿಂತನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು. 50 ವರ್ಷಗಳ ಹಿಂದೆ ಗಡಿ ಭಾಗದಲ್ಲಿ ಏನು ಅಭಿವೃದ್ಧಿ ಇಲ್ಲದ ಕಾಲದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ನಿಮ್ಮೆಲ್ಲರಿಗೆ ಇಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಪ್ರೇರಣೆ ನೀಡಿದ್ದರಿಂದ ಇಲ್ಲಿಯ ಶಿಕ್ಷಕರ ಸೇವೆಯಿಂದ ಗಡಿಭಾಗದಲ್ಲಿ ಜ್ಞಾನದ ಹೊಳೆ ಹರಿಯಿತು. ಆದ್ದರಿಂದ ಅಂತಹ ಶಿಕ್ಷಕರಿಗೆ ವಿದ್ಯಾಶ್ರೀ ಮತ್ತು ಗುರುಶ್ರೀ ಪ್ರಶಸ್ತಿ ನೀಡುತ್ತಿರುವ ಕಾರ್ಯ ನಿಜಕ್ಕೂ ಅಭಿನಂದನೀಯವಾಗಿದೆ ಎಂದರು. ವ್ಹಿ.ವ್ಹಿ. ಸಮಿತಿಯ ಶಾಲಾ ಆಡಳಿತ ಅಧಿಕಾರಿ ಬಿ.ಡಿ. ಪಾಟೀಲ ಅಧ್ಯಕ್ಷತೆ ವಹಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು.

ಉಪನ್ಯಾಸಕರಾಗಿ ಬೆಳಗಾವಿ ಲಿಂಗರಾಜ ಕಾಲೇಜಿನ ನಿವೃತ್ ಪ್ರಾಚಾರ್ಯ ರಾಯಗೌಡಾ ಪಾಟೀಲ ತಮ್ಮ ಅನಿಸಿಕೆ ಹಂಚಿಕೊAಡರು. ಪಪೂ ಮಲ್ಲಿಕಾರ್ಜುನ ಶ್ರೀಗಳ, ಸಿದ್ದೇಶ್ವರ ಶ್ರೀಗಳ ಮತ್ತು ಬಾಬಾಗೌಡಾ ಪಾಟೀಲ ಭಾವಚಿತ್ರದ ಪೂಜೆಯೊಂದಿಗೆ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಶಿಕ್ಷಕ ಚಂದ್ರಕಾAತ ಒಂಟೆ ಅವರಿಗೆ ವಿದ್ಯಾಭೂಷಣ ಮತ್ತು ಶಿಕ್ಷಕರಾದ ಆರ್.ಟಿ. ಗುರುವ, ಬಸವರಾಜ ಕರೆಪ್ಪಗೋಳ, ಕೃಷ್ಣಾ ಚವ್ಹಾನ, ಅನ್ನಪೂರ್ಣಾ ಪಾಟೀಲ, ರತ್ನಾಬಾಯಿ ಐನಾಪೂರೆ, ರೂಪಾ ಪಾಟೀಲ, ಅಶ್ವಿನಿ ಮೆಟಗೋಳೆ ಇವರಿಗೆ ವಿದ್ಯಾಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಈ ವೇಳೆ ವ್ಹಿ.ವ್ಹಿ. ಸಮಿತಿಯ ಅಧ್ಯಕ್ಷ ಬಸಗೌಡಾ ಪಾಟೀಲ, ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ ಪಾಟೀಲ, ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಅಧ್ಯಕ್ಷ ಸಾತಗೌಡಾ ಪಾಟೀಲ, ವ್ಹಿ.ವ್ಹಿ. ಸಮಿತಿಯ ಕಾರ್ಯದರ್ಶಿ ಹಾಗೂ ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಸಪ್ನಿಲ ಪಾಟೀಲ, ಆರ್.ಎಂ. ಪಾಟೀಲ ಸೌರಭ ಪಾಟೀಲ ಈರಗೌಡಾ ಪಾಟೀಲ, ಎಸ್.ಡಿ. ಬುವಾ ಹಾಗೂ ವಿದ್ಯಾವರ್ಧಕ ಸಮಿತಿಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


