ವಿಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿಗೆ ನುಡಿ ನಮನ

Ravi Talawar
ವಿಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿಗೆ ನುಡಿ ನಮನ
WhatsApp Group Join Now
Telegram Group Join Now
ಬಳ್ಳಾರಿ23.: ನಗರದ ಪತ್ರಿಕಾ ಭವನದಲ್ಲಿ‌ ಇಂದು  ಇತ್ತೀಚೆಗೆ ನಿಧನರಾದ ಟಿ.ವಿ.9 ಕನ್ನಡ ಚಾನಲ್ ನ ವಿಡಿಯೋ ಜರ್ನಲಿಸ್ಟ್ ಸಂತೋಷ್ ಚಿನಗುಂಡಿ ಅವರಿಗೆ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನುಡಿನಮನ ಕಾರ್ಯಕ್ರಮ ಹಮ್ಮಿಕೊಡಿತ್ತು.
ಸಂತೋಷ್ ಅವರ ಭಾವಚಿತ್ರಕ್ಕೆ ಸಂಘದ ಸದಸ್ಯರು ಪುಷ್ಮ ನಮನ ಸಲ್ಲಿಸದರು. ನಂತರ ಮಾತನಾಡಿದ ವಾರ್ತಾ ಇಲಾಖೆಯ ಅಧಿಕಾರಿ ಗುರುರಾಜ್, ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ವೀರಭದ್ರಗೌಡ, ಸದಸ್ಯರಾದ ವೆಂಕೋಬಿ ಸಂಗನಕಲ್ಲು, ನರಸಿಂಹಮೂರ್ತಿ ಕುಲಕರ್ಣಿ, ಹಂದ್ಯಾಳ ಪುರುಷೋತ್ತಮ, ಹೆಚ್.ಎಂ.ಮಹೇಂದ್ರಕುಮಾರ್, ಎಂ.ಕಿನ್ನೂರೇಶ್ವರ, ಹರಿಕೃಷ್ಣ ಮೊದಲಾದವರು ಸಂತೋಷ್ ಅವರ ಸ್ನೇಹಮಯವಾದ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿಕ್ಕ ವಯಸ್ಸಿಗೆಅಕಾಲಿಕ ಮರಣ ಹೊಂದಿದ್ದು ಎಲ್ಲರನ್ನು ದುಖಃದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ. ಆತನ ಅಗಲಿಕೆಯ ನೋವನ್ನು ಕುಟುಂಬಕ್ಕೆ ಭರಿಸುವ ಶಕ್ತಿ ನೀಡಲಿ ಎಂದರು.
ಒಂದಿಷ್ಟು ಆರೋಗ್ಯದ ಕಡೆ ಗಮನ ನೀಡದೆ ಹೋದುದು ಇಂತಹ ಅಕಾಲಿಕ ಮರಣಕ್ಕೆ ಕಾರಣವಾಗುತ್ತೆ ಅದಕ್ಕಾಗಿ ಕೆಲಸದ ಒತ್ತಡದ ನಡುವೆ ಆರೋಗ್ಯದ ಕಡೆಯೂ ನಾವು ಗಮನ ಹರಿಸಬೇಕಿದೆಂದರು. ಸದಸ್ಯರಾದ ಹರಿಶಂಕರ್, ಮಾರುತಿ ಸುಣಗಾರ, ಗುರುಶಾಂತ, ರೇಣುಕಾರಾಧ್ಯ, ವೆಂಕಟೇಶ್ ಕುಲಕರ್ಣಿ ಅಂಬರೀಶ್, ಶಿವಾನಂದ,   ಸಿದ್ದು  ,  ಶ್ರೀನಿವಾಸ್ ಶೆಟ್ಟಿ, ಮುರುಳಿಕಾಂತ ರಾವ್   ಭರತ್,  ನಂದೀಶ್,  ಹನುಮೇಶ್   ರಾವ್,   ಸಿದ್ದಿಕಿ, ಗೋವರ್ಧನ ರೆಡ್ಡಿ, ವಿಜಯಕುಮಾರ್, ರಾಧಕೃಷ್ಣ, ನಂದೀಶ್, ಪೀರಸಾಬ್,  ಬಾಬು, ವಾರ್ತಾ ಇಲಾಖೆಯ ಸಿಬ್ಬಂದಿ ಮೊದಲಾದವರು ಇದ್ದರು.
WhatsApp Group Join Now
Telegram Group Join Now
Share This Article