ಬಳ್ಳಾರಿ,ಅ.29: ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೋರೇಶನ್‌ನ ಪ್ರಥಮ ಬೋರ್ಡ್ ಸಭೆ ಬೆಂಗಳೂರಿನಲ್ಲಿ ಇದೇ ಅಕ್ಟೋಬರ್ 28.ರಂದು ಅಧ್ಯಕ್ಷರಾದ ಜಿ.ಎಸ್.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ತುಮಟಿ ಲಕ್ಷ್ಮಣ ಅವರು ಸಕ್ರಿಯವಾಗಿ ಭಾಗವಹಿಸಿ, ಹಲವು ಪ್ರಮುಖ ವಿಷಯಗಳನ್ನು ಮಂಡಳಿಯ ಮುಂದೆ ಪ್ರಸ್ತಾಪಿಸಿದರು.
ಸಭೆಯಲ್ಲಿ ಮಾತನಾಡಿದ ತುಮಟಿ ಲಕ್ಷ್ಮಣ ಅವರು, ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ವಂಚಿತ ಕಾರ್ಮಿಕರ ವೇತನ ಹೆಚ್ಚಳ ಹಾಗೂ ಧೂಳು ಭತ್ಯೆ ನೀಡುವಂತೆ ಮಂಡಳಿಗೆ ಮನವಿ ಸಲ್ಲಿಸಿದರು. ಕಾರ್ಮಿಕರ ತೀವ್ರ ಸಮಸ್ಯೆಗಳನ್ನು ಸ್ವತಃ ಸ್ಥಳೀಯ ಮಟ್ಟದಲ್ಲಿ ಅಧ್ಯಯನ ಮಾಡಿ, ಅವರ ಮನವಿಗಳನ್ನು ದಾಖಲಿಸಿಕೊಂಡು, ಸಭೆಯಲ್ಲಿ ಬಲವಾಗಿ ಪ್ರಸ್ತಾಪಿಸಿದರು.
ಅವರ ಈ ಮನವಿಯನ್ನು ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ನ್ಯಾಯಯುತ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದೆ.
ಕಾರ್ಮಿಕರ ಹಿತಾಸಕ್ತಿಗಾಗಿ ಸದಾ ಮುಂಚೂಣಿಯಲ್ಲಿ ಇರುವ ತುಮಟಿ ಲಕ್ಷ್ಮಣ ಅವರು ಕಾರ್ಮಿಕರ ಧ್ವನಿಯಾಗಿದ್ದಾರೆ ಎಂಬ ಅಭಿಪ್ರಾಯವನ್ನು ಸಭೆಯ ಅನೇಕ ಸದಸ್ಯರು ವ್ಯಕ್ತಪಡಿಸಿದರು. ಕಾರ್ಮಿಕರ ಹಕ್ಕುಗಳ ವಿಚಾರದಲ್ಲಿ ಅವರ ಹೋರಾಟ ರಾಜ್ಯದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ಮೂಲದ ತುಮಟಿ ಲಕ್ಷ್ಮಣ ಅವರು, ಸಮಾಜ ಸೇವೆ ಹಾಗೂ ಕಾರ್ಮಿಕ ಕಲ್ಯಾಣದ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದು, ಕಾರ್ಮಿಕ ವರ್ಗದ ಹಕ್ಕುಗಳ ಪರ ಧ್ವನಿ ಎತ್ತುವಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.
ತುಮಟಿ ಲಕ್ಷ್ಮಣ ಅವರು ಹಿಂದೆ ಕಾರ್ಮಿಕ ಇಲಾಖೆಯಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಹಲವಾರು ಕಾರ್ಮಿಕರಿಗೆ ಆಸರೆಯಾಗುತ್ತಿದ್ದಾರೆ, ಕಟ್ಟಡ ಕಾರ್ಮಿಕರ ಕಾರ್ಡುಗಳು, ಈ ಶ್ರಮ ಕಾರ್ಡುಗಳು ಮಾಡಿಸಿ ಅವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದರೆ ಇದು ಸಚಿವ ಸಂತೋಷ್ ಲಾಡ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು ಬಳ್ಳಾರಿಯಲಿ ತುಮಟಿ ಲಕ್ಷ್ಮಣ ಎಂಬ ಹೆಸರು ಮಾಡಿದ್ದಾರೆ ಎಂದರೆ ತಪ್ಪಾಗಲಾರದೆ ಎಂದು ಕಾರ್ಮಿಕ ಬಳಗದವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಅಲ್ಲದೆ ಕಾರ್ಮಿಕರ ಹಿತದೃಷ್ಟಿಯಿಂದ ಸದಾ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ತುಮಟಿ ಲಕ್ಷ್ಮಣ ಅವರ ಈ ಪ್ರಯತ್ನಕ್ಕೆ ಸಭೆಯ ಸದಸ್ಯರು ಹಾಗೂ ಕಾರ್ಮಿಕ ಸಂಘಟನೆಗಳ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.


