ವಿವಾದಿತ ಜಾನುವಾರ ಹತ್ಯೆ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ ರದ್ದುಪಡಿಸಲು ವಿ ಎಚ್ ಪಿ ಪ್ರತಿಭಟನೆ 

Hasiru Kranti
ವಿವಾದಿತ ಜಾನುವಾರ ಹತ್ಯೆ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ ರದ್ದುಪಡಿಸಲು ವಿ ಎಚ್ ಪಿ ಪ್ರತಿಭಟನೆ 
WhatsApp Group Join Now
Telegram Group Join Now
ಬಳ್ಳಾರಿ. ಡಿ. 09.: ಜಾನುವಾರಗಳ ಹತ್ಯೆಯ ವಿವಾದಾತ್ಮಕವಾದ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ತಿದ್ದುಪಡಿ ಮಾಡುವುದನ್ನು ವಿರೋಧಿಸಿ ಇಂದು ನಗರದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಬಾರಿ ಪ್ರತಿಭಟನೆಯನ್ನು ನಡೆಸಲಾಯಿತು. ನಗರದ ಡಾ. ರಾಜ್‌ಕುಮಾರ್ ರಸ್ತೆಯ ನಾರಾಯಣರಾವ್ ಪಾರ್ಕ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಭಾರಿ ಪ್ರತಿಭಟನೆ ಮೆರವಣಿಗೆಯೊಂದಿಗೆ ಆಗಮಿಸಿದ ಬಿ ಎಚ್ ಪಿ ಪ್ರತಿಭಟನಾಕಾರರು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಮನವಿ ಪತ್ರವನ್ನು ನೀಡಿ ವಿರೋಧವನ್ನು ವ್ಯಕ್ತಪಡಿಸಿದರು.
 ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸೋಮಶೇಖರ ರೆಡ್ಡಿ,
 ಈ ಹಿಂದೆ ಆಡಳಿತದಲ್ಲಿದ್ದ ಭಾರತೀಯ ಜನತಾ ಪಕ್ಷ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಾಡಲು ಹೊರಟಿರುವುದು ಹಿಂದೂ ಸಮಾಜಕ್ಕೆ ಅತ್ಯಂತ ಅನ್ಯಾಯ ಮಾಡಿದಂತಾಗುತ್ತದೆ ಹಿಂದುಗಳಿಗೆ ಅತ್ಯಂತ ಪೂಜನೀಯವಾದ ಗೋವಂಶವನ್ನು ನಿಮಿಷಾತ್ಮಕವಾಗಿ ಕಳಸಾಗಟೆ ಮಾಡುವಾಗ ಪೊಲೀಸರು ಅವುಗಳನ್ನು ಹೊಸಪಡಿಸಿಕೊಂಡು ವಾಹನದೊಂದಿಗೆ ಜಪ್ತಿ ಮಾಡುವ ಕಾನೂನು ಜಾರಿಯಲ್ಲಿತ್ತು . ಆದರೆ ಈ ಕಾನೂನನ್ನು ತಿದ್ದುಪಡಿ ಮಾಡಿ ಹಲ್ಲಿಲ್ಲದ ಹಾವಿನಂತೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ ಎಂದು ವಿ ಎಚ್ ಪಿ ಕಾರ್ಯಕರ್ತರು ಆಗ್ರೋಶವನ್ನು ವ್ಯಕ್ತಪಡಿಸಿದರು.
 ಈ ಕಾನೂನಿನ ಅನ್ವಯ ಜೀವಿಗಳನ್ನು ಸಾಗಿಸಲು ಬಳಸುವ ವಾಹನಗಳನ್ನು ಜಫ್ತಿ ಮಾಡಿಕೊಂಡ ವೇಳೆ ಅವುಗಳನ್ನು ಬಿಡಿಸಿಕೊಳ್ಳಲು ಆ ವಾಹನದ ಮೊತ್ತವನ್ನು ಠೇವಣಿಯಾಗಿ ಇಡಬೇಕಾಗಿತ್ತು, ತಿದ್ದಿ ಪಡಿ ಮಾಡುವ ಹೊಸ ಕಾಯ್ದೆಯಲ್ಲಿ ಇದು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗದೆ ಕನಿಕರ ರೀತಿಯಲ್ಲಿ ಅವರನ್ನು ಮತ್ತು ಅವರ ವಾಹನವನ್ನು ಬಿಡುಗಡೆಗೊಳಿಸುವ ತಿದ್ದುಪಡಿಯನ್ನು ಮಾಡಲಾಗಿದೆ , ಇದು ಕಾಂಗ್ರೆಸ್ ಸರ್ಕಾರ ಹಿಂದುಗಳಿಗೆ ಮಾಡುವ ಅತಿ ದೊಡ್ಡ ಅನ್ಯಾಯ ಎಂದು ಕಾಯ್ದೆ ತಿದ್ದುಪಡಿಗೆ ವಿರೋಧವನ್ನು ವ್ಯಕ್ತಪಡಿಸಿದರು.
 ಈ ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಕೆ ರಾಮಲಿಂಗಪ್ಪ ವೆಂಕಟರಮಣ ವಿ ಎಚ್ ಪಿ ಜಿಲ್ಲಾ ಕಾರ್ಯದರ್ಶಿ ವಿಷ್ಣುವರ್ಧನ್, ಕೆ ಅಶೋಕ್ ವಿಜಯಲಕ್ಷ್ಮಿ ಹಿರೇಮಠ ಕೆ ಶ್ರೀರಾಮುಲು ಕೆ ಶ್ರೀಕಾಂತ್ ಗೌಡ ಗೋವಿಂದ ಸೇರಿದಂತೆ ಇತರರು.
WhatsApp Group Join Now
Telegram Group Join Now
Share This Article