ಹಿರಿಯ ನಟ ಅಸ್ರಾನಿ ಇನ್ನಿಲ್ಲ: ಗಣ್ಯರ ಕಂಬನಿ

Ravi Talawar
ಹಿರಿಯ ನಟ ಅಸ್ರಾನಿ ಇನ್ನಿಲ್ಲ: ಗಣ್ಯರ ಕಂಬನಿ
WhatsApp Group Join Now
Telegram Group Join Now

ಮುಂಬೈ: ಪ್ರಸಿದ್ಧ ಹಾಸ್ಯ ನಟ ಮತ್ತು ಬಾಲಿವುಡ್ ಅನುಭವಿ ಕಲಾವಿದ ಗೋವರ್ಧನ್ ಅಸ್ರಾನಿ 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.

ಸಾವಿಗೂ ಮುನ್ನ ದೀಪಾವಳಿ ಶುಭಾಶಯ ಕೋರಿದ್ದ ನಟ: ಸೋಮವಾರ ಸಾಂತಾಕ್ರೂಜ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ ಸಾವಿಗೆ ಕೆಲವೇ ಗಂಟೆಗಳ ಮೊದಲು ನಟ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುವ ಪೋಸ್ಟ್ ಹಂಚಿಕೊಂಡಿದ್ದರು. ಅಸ್ರಾನಿ ಅವರು ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಹಾಸ್ಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಪುಣೆಯ FTIIನಲ್ಲಿ ತರಬೇತಿ ಪಡೆದಿದ್ದ ಅಸ್ರಾನಿ: ಐದು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪುಣೆಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ (FTII) ತರಬೇತಿ ಪಡೆದುಕೊಂಡಿದ್ದರು. 1960 ರ ದಶಕದ ಮಧ್ಯಭಾಗದಲ್ಲಿ ಹಿಂದಿ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮೊದಲು ತಮ್ಮ ಕೌಶಲ್ಯವನ್ನು ತೋರ್ಪಡಿಸಿದ್ದರು. ಗಂಭೀರ ಮತ್ತು ಪೋಷಕ ಪಾತ್ರಗಳೊಂದಿಗೆ ತಮ್ಮ ನಟನಾ ಕೌಶಲವನ್ನು ಶುರು ಮಾಡಿದರೂ ಕೂಡಾ ಅಸ್ರಾನಿ ಅವರು ಹಾಸ್ಯ ಕಲಾವಿದರಾಗಿ ತಮ್ಮನ್ನು ಗುರುತಿಸಿಕೊಂಡರು. 1970 ಮತ್ತು 1980 ರ ದಶಕಗಳಲ್ಲಿ ಅವರು ಹಿಂದಿ ಚಿತ್ರರಂಗದ ಪ್ರಮುಖ ಹಾಸ್ಯ ನಟರಾಗಿ ಗಮನ ಸೆಳೆದರು.

WhatsApp Group Join Now
Telegram Group Join Now
Share This Article