ಸಹಕಾರ ಕ್ಷೇತ್ರದಲ್ಲಿ 30 ವರ್ಷಗಳ ಸೇವೆಯನ್ನು ಗುರುತಿಸಿ ಸಹಕಾರ ರತ್ನ ನೀಡಲಾಗಿದೆ : ವೆಂಕಟೇಶ್ 

Ravi Talawar
ಸಹಕಾರ ಕ್ಷೇತ್ರದಲ್ಲಿ 30 ವರ್ಷಗಳ ಸೇವೆಯನ್ನು ಗುರುತಿಸಿ ಸಹಕಾರ ರತ್ನ ನೀಡಲಾಗಿದೆ : ವೆಂಕಟೇಶ್ 
WhatsApp Group Join Now
Telegram Group Join Now
ಬಳ್ಳಾರಿ. ನ. 20 : ಸುಮಾರು 30 ವರ್ಷಗಳಿಂದ ಬಳ್ಳಾರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಸದಸ್ಯನಾಗಿ ನಿರ್ದೇಶಕನಾಗಿ ಉಪಾಧ್ಯಕ್ಷನಾಗಿ ಪ್ರಸ್ತುತ  ಮೂರನೇ ಅವಧಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಸಹಕಾರ ಕ್ಷೇತ್ರದಲ್ಲಿ ಸುದೀರ್ಘ 30 ವರ್ಷಗಳ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಸಹಕಾರ ಇಲಾಖೆಯಿಂದ ಕೊಡಮಾಡುವ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿದೆ ಎಂದು ಬಳ್ಳಾರಿ ಅರ್ಬನ್ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಉಪ್ಪಾರ್ ವೆಂಕಟೇಶ್ ತಿಳಿಸಿದರು.
 ಸಹಕಾರ ರತ್ನ ಪ್ರಶಸ್ತಿ ಪಡೆದ ಅವರನ್ನು  ಇಂದು ಉಪ್ಪಾರ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ನಮ್ಮ ಸಮಾಜದ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪಡೆದ  ನನ್ನನ್ನು ಆತ್ಮೀಯವಾಗಿ ಗೌರವಿಸುತ್ತಿರುವುದು ನನಗೆ ಸಹಜವಾಗಿ ಸಂತಸವನ್ನು ಉಂಟು ಮಾಡಿದೆ ಎಂದು ಬಳ್ಳಾರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಉಪ್ಪಾರ್ ವೆಂಕಟೇಶ್ ಹೇಳಿದರು. ಇತ್ತೀಚಿಗೆ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ವಿಜಯನಗರ ವಾಣಿ ದಿನಪತ್ರಿಕೆಯ  ಸಂಪಾದಕರಾದ ರಮೇಶ್ ಬಿ ಉಪ್ಪಾರ್ ಇವರನ್ನು ಸನ್ಮಾನಿಸಲಾಯಿತು.
 ಈ ಸಂದರ್ಭದಲ್ಲಿ ವಿಜಯನಗರವಾಣಿ ದಿನಪತ್ರಿಕೆಯ ಸಂಪಾದಕರಾದ ರಮೇಶ್ ಉಪ್ಪಾರ್,   ಕೊಳಗಲ್ಲು ಎರಿಸ್ವಾಮಿ, ಊಳೂರು ಸಿದ್ದೇಶ್, ರಮೇಶ್ ಉಪ್ಪಾರ್, ಈಶ್ವರ್, ಕೆಎಸ್ಆರ್‌ಟಿಸಿ ಈರಣ್ಣ
ಬಳ್ಳಾರಿ ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷರಾದ ವೆಂಕಟೇಶ್,  ಬಳ್ಳಾರಿ ನಗರ ಶ್ರೀ ಭಗೀರಥ ಉಪ್ಪಾರ ಸೇವಾ ಟ್ರಸ್ಟ್ (ರಿ) ಪ್ರಧಾನ ಕಾರ್ಯದರ್ಶಿ ಪಿ ನಾಗೇಂದ್ರ, ಚರ ಕುಂಟೆ ಈರಣ್ಣ ಮೀಟರ್ ಕೃಷ್ಣ, ಪೊಲೀಸ್ ಗೋವಿಂದ ಸೇರಿದಂತೆ ಇತರರಿದ್ದರು.
WhatsApp Group Join Now
Telegram Group Join Now
Share This Article