ಬಳ್ಳಾರಿ : 10..ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಛೇರಿಯ ಸುತ್ತೋಲೆಗಳನ್ನು ಗಾಳಿಗೆ ತೂರಿ ಪ್ರಥಮ ದರ್ಜೆ ಗುಮಾಸ್ತ ಶಿವಪ್ಪ ಅವರಿಗೆ ವಾರ್ಡನ್ ಆಗಿ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿರುತ್ತದೆ ಇದು ಕಾನೂನುಬಾಹಿರವಾಗಿದ್ದು ಶಿವಪ್ಪ ಅವರನ್ನು ಕೂಡಲೇ ವಾರ್ಡನ್ ಹುದ್ದೆಯಿಂದ ವಜಗೊಳಿಸಬೇಕೆಂದು ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಕೆ ವೆಂಕಟೇಶ್ ಆಗ್ರಹಿಸಿದರು
ಭೀಮ್ ಆರ್ಮಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ವೆಂಕಟೇಶ್, ಸುತ್ತೋಲೆಗಳಲ್ಲಿ ಸೂಚಿಸಿರುವಂತೆ ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡ್ನ ಅಥವಾ ಸಿಬ್ಬಂದಿ
ಕೊರತೆ ಇದ್ದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಹಾಗೂ ಆಡಳಿತಸುಧಾರಣೆ ಹಿತದೃಷ್ಠಿಯಿಂದ ವಿದ್ಯಾರ್ಥಿ ನಿಲಯಗಳ ಸಮೀಪದಲ್ಲಿರುವ ವಾರ್ಡ್ ನ್ ರವರಿಗೆ ತಾತ್ಕಲಿಕವಾಗಿ ಪ್ರಭಾರ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದಸುತ್ತೊಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಸಲಾಗಿರುತ್ತದೆ.
ಆದರೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಾಜೇಶ್ವರಿ ಇವರು ಆರು ದಿವಸ ಕಳೆದರೂ ಸಹ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ವಿಷಯ ತಿಳಿಸದೆ ಬೇಜವಾಬ್ದಾರಿಯನ್ನು ತೋರಿದ್ದಾರೆ ಆದ್ದರಿಂದ ಈ ಕೂಡಲೇ ನಿಯೋಜನೆಗೊಂಡಿರುವ ವಾರ್ಡ್ನ ಹುದ್ದೆಯನ್ನುರದ್ದುಪಡಿಸಿ, ಮೂಲ ಸ್ಥಳಕ್ಕೆ ಶಿವಪ್ಪ ಪ್ರದಸ ಸಂಡೂರುಗೆ ವಾಪಸ್ಸುಕಳುಹಿಸಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.