ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ: ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಏನು ಕ್ರಮಕ್ಕೆ ವೆಂಕನಗೌಡ ಆಗ್ರಹ

Ravi Talawar
ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ: ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಏನು ಕ್ರಮಕ್ಕೆ ವೆಂಕನಗೌಡ ಆಗ್ರಹ
WhatsApp Group Join Now
Telegram Group Join Now
ಗದಗ : ತಹಸಿಲ್ದಾರ್ ಕಚೇರಿಯಲ್ಲಿ ಉಪತಸಿಲ್ದಾರ ಸಮೇತ ಅವರ ಸಂಗಡಿಗರು ಅಮಾಯಕ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಉಪ ತಹಶೀಲ್ದಾರ್ ಡಿ.ಟಿ ವಾಲ್ಮೀಕಿ ಅವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ, ಆದರೆ ಅದೇ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಉಪಸ್ಥಿತಿ ಹಾಗೂ ಅವರು ಕೂಡ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿ ಕಂಡು ಬಂದಿದ್ದು ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯದ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಪ್ರಶ್ನಿಸಿದ್ದಾರೆ
ವಿಡಿಯೋದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತು ಎಂದು ಇದುವರೆಗೂ ತಿಳಿದುಬಂದಿಲ್ಲ. ಸರಕಾರಿ ಕಚೇರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಡ್ಡಗಳನ್ನಾಗಿ ಪರಿವರ್ತಿಸಿಕೊಂಡಿವೆ . ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕು ಇಲ್ಲದಿದ್ದರೆ ಇದು ಕೆಡಗಾಲಕ್ಕೆ ದಾರಿ ಮಾಡಿಕೊಡುತ್ತದೆ.  ಎಲ್ಲಾ ಕಚೇರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅನಧಿಕೃತ ಉಪಸ್ಥಿತಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದೆ. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಚುನಾಯಿತ ಪ್ರತಿನಿಧಿಗಳಲ್ಲದ ಕಾಂಗ್ರೆಸ್ ಕಾರ್ಯಕರ್ತರ ಉಪಸ್ಥಿತಿ, ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆ ಇಂತಹ ಕಾರ್ಯಕ್ರಮಗಳಲ್ಲಿ ಇವರ ಪ್ರಮುಖ ಪಾತ್ರ ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತಿದೆ. ತಕ್ಷಣ ಈ ಘಟನೆಯಲ್ಲಿ ಇದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಗುಂಡಾಗಿರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರಾ ವೆಂಕನಗೌಡ ಆರ್.ಗೋವಿಂದಗೌಡ್ರ ಒತ್ತಾಯಿಸಿದ್ದಾರೆ.
ಈ ಘಟನೆಯ ಬಗ್ಗೆ ಯಾರೂ ದೂರು ನೀಡದಿದ್ದರೂ ಕೂಡ ಸ್ವಯಂ ಪ್ರೇರಿತವಾಗಿ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಬಸವರಾಜ್ ಅಪ್ಪನವರ, ಎಂ ಎಸ್ ಪರ್ವತಗೌಡ್ರ,  ಪ್ರಫುಲ್ಲ ಪುನೇಕರ್, ಜೋಸೆಫ್ ಉದೋಜಿ, ಸಂತೋಷ್ ಪಾಟೀಲ, ರಮೇಶ ಹುಣಸಿಮರದ, ಪುಲಿಕೇಶಿ ಗಾಳಿ, ಶರಣಯ್ಯ ಹೊಂಬಾಳಿಮಠ, ಡಾ ಶರಣಪ್ಪ ಹೂಗಾರ, ಕಲ್ಕುಸಾ ಸಿಂಗ್ರಿ, ಜಿ. ಬಿ. ಹನುಮಾನಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ
WhatsApp Group Join Now
Telegram Group Join Now
Share This Article