ಅಥಣಿ: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ಸದಾ ಓದು, ಪಾಠ, ಆಟದಂತಹ ಕಲಿಗೆ ಜೋತೆಗೆ ವ್ಯಾಪಾರ ವಹಿವಾಟದ ಬಗ್ಗೆಯು ಕಲಿಕೆ ಇರಬೇಕು ಎಂದು ತುಳಜಾ ಶಂಕರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅರುಣ ಮಾಳಿ ಹೇಳಿದರು.
ಅವರು ಪಟ್ಟಣದ ಹೊರ ವಲಯದಲ್ಲಿರುವ ತುಳಜಾ ಶಂಕರ ಶಾಲೆಯ ಆವರಣದಲ್ಲಿ ಆಯೋಜಿಸಿದ ತರಕಾರಿ ಮಾರುಕಟ್ಟೆಯ ಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಮಕ್ಕಳಿಗೆ ವಿದ್ಯಾಭ್ಯಾಸದ ಜೋತೆಗೆ ವ್ಯಾಪಾರ ವಹಿವಾಟದ ಬಗ್ಗೆ ಭೋದನೆ ನೀಡಿದರೆ. ಮುಂದೆ ಅವರವರ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ಉಪಯೋಗವಾಗಬಹುದು. ಎಂದು ತಿಳಿದು ಈ ಮಾರುಕಟ್ಟೆ ಮೇಳವನ್ನು ಒಂದು ದಿನದ ಮಟ್ಟಿಗೆ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಮಾರುಕಟ್ಟೆಗೆ ವಿದ್ಯಾರ್ಥಿಗಳು ವಿವಿಧ ರೀತಿಯ ತರಕಾರಿಗಳು, ಹೂವು, ಹಣ್ಣು, ವಿವಿಧ ಸಿಹಿ ತಿಂಡಿಯ ಪದಾರ್ಥಗಳು, ಮತ್ತು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳನ್ನು ವಿದ್ಯಾರ್ಥಿಗಳು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಶಿಕ್ಷಕರು ಹಾಗೂ ಪಾಲಕರು ಗ್ರಾಹಕರಾಗಿ ಬಂದು ವಿದ್ಯಾರ್ಥಿಗಳ ಕಡೆಯಿಂದ ತಮಗೆ ಬೇಕಾದ ವಸ್ತುಗಳನ್ನ, ತರಕಾರಿ ಖರೀದಿಸಿ ತಮ್ಮ ಮನೆಗೆ ಕೊಂಡಕೊಂಡು ಹೋಗುವುದು ಮತ್ತಷ್ಟು ಮಕ್ಕಳಲ್ಲಿ ವ್ಯಾಪಾರದ ಪ್ರೊತ್ಸಾಹ ನೀಡಿದಂತಾಯಿತು.
ಒಟ್ಟಾರೆ ಶಾಲಾ ಆವರಣದಲ್ಲಿ ಸಂತೆ ಮಾರುಕಟ್ಟೆ ಯಾಗಿ ಮಾರ್ಪಟ್ಟಿದ್ದು ವಿಶೇಷವಾಗಿತ್ತು. ಇದನ್ನು ವೀಕ್ಷಿಸಲು ಸಾಕಷ್ಟು ಸಾರ್ವಜನಿಕರು ಹಾಗೂ ಪಾಲಕರು ಬಂದಿದ್ದರು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಪಕಿ ರೂಪಾಲಿ ಮಾಳಿ, ಶಿಕ್ಷಕಿಯರು ಸವೀತಾ ಶಿಂದೆ, ಕೀರ್ತಿ ಅಪರಾಜ, ಗೌರಿ ಮಾಳಿ, ರೂಪಾ ನಿಂಬರಗಿ, ಸುಜಾತಾ ಸಂಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.